ಹೆದ್ದಾರಿಗಳಲ್ಲಿ ಕನ್ನಡ ಭಾಷೆಯ ಫಲಕಕ್ಕೆ ಒತ್ತಾಯಿಸಿ ಸಚಿವೆ ಉಮಾಶ್ರೀ ಪತ್ರ

Posted By:
Subscribe to Oneindia Kannada

ಬೆಂಗಳೂರು, ಸೆ. 19: ಕರ್ನಾಟಕದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಮೈಲಿಗಲ್ಲು, ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಪತ್ರ ಬರೆದಿದ್ದಾರೆ. ಆದರೆ, ಇನ್ನೂ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಂದ ಉತ್ತರ ಸಿಕ್ಕಿಲ್ಲ.

ರಾಜ್ಯದಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಯಥೇಚ್ಛವಾಗಿ ಬಳಕೆಯಲ್ಲಿದೆ. ಇದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಮೈಲಿಗಲ್ಲು, ಸೈನ್ ಬೋರ್ಡ್ ಓದಲು ಕಷ್ಟವಾಗುತ್ತಿದೆ. ಆಂತರಿಕ ಸಾರಿಗೆ ಸಂಪರ್ಕ ಹೆಚ್ಚಳಕ್ಕೆ ಮೂಲ ಸೌಕರ್ಯ ಹಾಗೂ ಮಾರ್ಗದ ಸೂಚನಾ ಫಲಕಗಳು ಪೂರಕವಾಗಿದ್ದು ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ

Minister Umashree demands Kannada milestones and highway hoardings
.

ಇದರ ಜೊತೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಸುಂಕ ವಸೂಲಿ ಕೇಂದ್ರಗಳಲ್ಲಿ ಕನ್ನಡಿಗರನ್ನು ಕಡ್ಡಾಯವಾಗಿ ನೇಮಕ ಮಾಡಬೇಕು. ಇಲ್ಲಿಯೂ ಕನ್ನಡದಲ್ಲಿಯೇ ಫಲಕಗಳನ್ನು ಹಾಕಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.[ಸಚಿವೆ ಉಮಾಶ್ರೀಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ]

ರಾಷ್ಟೀಯ ಹೆದ್ದಾರಿ ಪ್ರಾಧಿಕಾರ(ಎನ್ ಎಚ್ ಎ ಐ) ಟೋಲ್ ಗೇಟ್ ಗಳಲ್ಲಿ ಅನ್ಯಭಾಷಿಗರನ್ನು ನೇಮಿಸಿರುವುದರಿಂದ ಅನೇಕ ಬಾರಿ ಭಾಷಾ ಸಮಸ್ಯೆಯಿಂದ ಗಲಭೆಗಳಾಗಿವೆ. ಕನ್ನಡೇತರರನ್ನು ನೇಮಿಸುವ ಬದಲು ಸ್ಥಳೀಯರನ್ನು ನೇಮಿಸಬೇಕು ಎಂದು ಕನ್ನಡಿಗರ ಪರವಾಗಿ ಕೋರಿದ್ದೇನೆ ಎಂದು ಸಚಿವೆ ಉಮಾಶ್ರೀ ಹೇಳಿದ್ದಾರೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kannada and Culture Minister Umashree has urged the Ministry of Road Transport and Highways to include Kannada boards. she has pointed out out that milestones and highway hoardings in Karnataka were largely in English or Hindi.
Please Wait while comments are loading...