ಸಿಎಂ ರಾಜೀನಾಮೆಯಿಂದ ಕಾಂಗ್ರೆಸ್ ನಾಯಕರಿಗೆ ಖುಷಿ ಇದೆ ಎಂದ ಶೆಟ್ಟರ್: ಶಿವಾನಂದ ಪಾಟೀಲ್ ಹೇಳಿದ್ದೇನು?

ಹುಬ್ಬಳ್ಳಿ, ಆಗಸ್ಟ್‌ 19: ರಾಜ್ಯದಲ್ಲಿ ಮುಡಾ ಹಗರಣದ ವಿಚಾರದ ಸಾಕಷ್ಟು ಸದ್ದು ಮಾಡುತ್ತಿದೆ. ಈ ಪ್ರಕರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಒತ್ತಾಯಿಸಿ ಹಲವು ಪ್ರತಿಭಟನೆಗಳನ್ನ ನಡೆಸಿದ್ದು, ಇದೀಗ ಸಿಎಂ ರಾಜೀನಾಮೆಯಿಂದ ಕಾಂಗ್ರೆಸ್ ನಾಯಕರಿಗೆ ಖುಷಿ ಇದೆ ಎಂದು ಜಗದೀಶ್‌ ಶೆಟ್ಟರ್‌ ಹೇಳಿಕೆ ನೀಡಿದ್ದಾರೆ.

ಸಂಸದ ಜಗದೀಶ್‌ ಶೆಟ್ಟರ್‌ ಅವರ ಹೇಳಿಕೆ ಕುರಿತು ಸಚಿವ ಶಿವಾನಂದ ಪಾಟೀಲ್‌ ಅವರು ಮಾತನಾಡಿ, ಸಿಎಂ ರಾಜೀನಾಮೆಯಿಂದ ಕಾಂಗ್ರೆಸ್ ನಾಯಕರಿಗೆ ಖುಷಿ ಇದೆ ಎಂಬುದು ಮಾಧ್ಯಮಗಳ ಸೃಷ್ಟಿ. ಜಗದೀಶ್ ಶೆಟ್ಟರ್ ಈ ಹೇಳಿಕೆ ಕೊಟ್ಟಿದ್ರೆ ಅವರು ನಮ್ಮ ಪಕ್ಷದವರಾ? ಬೇಕಾದವರು ಬೇಕಾದನ್ನ ಹೇಳ್ತಾರೆ ನಮ್ಮ ಪಕ್ಷದವರು ಹೇಳಿದ್ರೆ ಅದು ಬೇರೆ ಎಂದರು.

Minister Shivananda Patil Asked Whether Jagdish Shettar Is From Our Party

ಇನ್ನು ಮುಖ್ಯಮಂತ್ರಿಗಳು ಮೇಲೆ ಬಂದ ಆರೋಪ ಕುರಿತು ಮಾತನಾಡುತ್ತಾ ಇದು ರಾಜಕೀಯ ವಿಚಾರ ಅಲ್ಲಾ, ಮೈಸೂರಿನ ಮುಡಾ ವಿಚಾರ ರಾಜ್ಯಕ್ಕೆ ಸೀಮಿತ ಮಾಡಿರೋದು ದುರಾದೃಷ್ಟ ಇನ್ನೂ ಜೊಲ್ಲೆ, ಕುಮಾರಸ್ವಾಮಿ, ನಿರಾಣಿ ಪ್ರಾಸಿಕ್ಯೂಷನ್ ನೀಡದೆ ಇರೋದನ್ನ ರಾಜ್ಯಪಾಲರಿಗೆ ಕೇಳ್ಬೇಕು. ಇಷ್ಟು ಜನಕ್ಕೆ ಪ್ರಾಸಿಕ್ಯೂಷನ್ ಕೊಡದೆ ಇರೋದು ಮೇಲ್ನೋಟಕ್ಕೆ ಗೊತ್ತಾಗಿದೆ.

ಇದು ಸಾಮಾಜಿಕ ಕಾರ್ಯಕರ್ತರಾದ ಅಬ್ರಾಹಿಂ ಅವರ ಬಗ್ಗೆ ನಿರ್ಣಯ ಮಾಡೋದು ದುರಾದೃಷ್ಟಕರ. ಬಿಜೆಪಿ ಬಹಳಷ್ಟು ಸರ್ಕಾರಗಳನ್ನು ಇದೆ ರೀತಿ ತೆಗ್ದಿದ್ದಾರೆ. ಬಿಜೆಪಿ ಅವರಿಗೆ ಇದೊಂದು ಉದ್ಯೋಗ ಆಗಿದೆ
ಕರ್ನಾಟಕ ಜನ ಕಾಂಗ್ರೆಸ್ ಜೊತೆ ಇರೋವರೆಗೆ ವರ್ಕೌಟ್ ಆಗಲ್ಲ ಎಂದರು.

ರಾಜ್ಯಪಾಲರ ಹುದ್ದೆಗೆ ಬಹಳ ಗೌರವ ಇದ್ದು ಆ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲಾರೆ ಆದರೆ, ರಾಜ್ಯಪಾಲರ ಹುದ್ದೆಗೆ ಮೊದಲಿನ ಗೌರವ ಈಗ ಇಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ಉನ್ನತ ಸ್ಥಾನದಲ್ಲಿದ್ದು ಇಂತಹ ನಿರ್ಧಾರ ತಗೆದುಕೊಳ್ಳಬಾರದು, ರಾಜ್ಯಪಾಲರು ವಿಚಾರಣೆಗೆ ಕೊಟ್ಟಿದ್ದಾರೆ.

ಕಾನೂನಿನ ಹೋರಾಟ ಮಾತ್ರ ಉಳಿದಿದ್ದು, ಕ್ಯಾಬಿನೆಟ್ ಅಭಿಪ್ರಾಯ ತಿಳಿಸಿದ್ದೇವೆ, ಅವರು ಕನ್ಸಿಡರ್ ಮಾಡಿಲ್ಲ. ರಾಜ್ಯಪಾಲರು ಯಾರ ಮಾತು ಕೇಳಿ ಮಾಡಿದ್ದಾರೆ ಅಂತ ನಾವು ಹೇಳೋಕೆ ಆಗಲ್ಲ. ಈ ಕುರಿತು ಕಾನೂನು ಹೋರಾಟ ಮಾಡೋದಾಗಿ ನಿರ್ಣಯ ಆಗಿದೆ, ಅವರು ಪಾದಯಾತ್ರೆ ಮಾಡಿದ್ದಾರೆ. ನಾವು ಪ್ರತಿಭಟನೆ ಮಾಡಬಾರದಾ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯಪಾಲರು ಸಂವಿಧಾನ ಹುದ್ದೆಯಲ್ಲಿದ್ದಾರೆ. ಇದು ಸೂಕ್ಷ್ಮವಾದ ವಿಚಾರ, ಬಿಜೆಪಿ ಅಧಿಕಾರದಲ್ಲಿದ್ದಾಗ ಇದು ಆಗಿರುವ ಹಗರಣ ಆವಾಗ್ಲೇ ತನಿಖೆ ಮಾಡಬೇಕಿತ್ತು, ಇದು ಸಂದರ್ಭ ಅಲ್ಲ. ಒಬ್ಬ ರಾಜ್ಯಪಾಲರ ಹೆಸರು ತಗೋಳಕೆ ಆಗಲ್ಲ ವೆಸ್ಟ್ ಬೆಂಗಾಲ್, ದೆಹಲಿಗಳಲ್ಲಿ ಸಂಘರ್ಷ ಇದೆ. ರಾಜ್ಯಪಾಲರ ಹುದ್ದೆಗೆ ಇದ್ದ ಮೊದಲಿನ ಘನತೆ, ಗೌರವ ಈಗ ಇಲ್ಲ, ಉನ್ನತ ಸ್ಥಾನದಲ್ಲಿದ್ದಾಗ ಇಂತಹ ಹೇಸಿಗೆ ನಿರ್ಧಾರ ತಗೆದುಕೊಳ್ಳಬಾರದು.

ತನಿಖೆಗೆ ಒಳಪಟ್ಟಾಗ ತನ್ನಿಂದ ತಾನೇ ಆಗುತ್ತದೆ. ಇಂತಹ ಸಂದರ್ಭದಲ್ಲಿ ವಿಚಾರ ವಿನಿಮಯ ಮಾಡೋದು ಸರಳ ಪಕ್ಷ, ಸಚಿವ ಸಂಪುಟ ಸಿದ್ದರಾಮಯ್ಯ ಅವರ ಜೊತೆಗೆ ಇದೆ. ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಬುಲಾವ್ ಕೊಟ್ಟಿರೋ ವಿಚಾರವೇ ಬೇರೆ. ಹೈಕಮಾಂಡ್ ಬಗ್ಗೆ ನಾವು ಮಾತನಾಡಲು ಅವಕಾಶ ಇಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+