ಶಾಲಾ ಬಿಸಿಯೂಟಕ್ಕೆ ಸೊಪ್ಪು, ತರಕಾರಿ ಬಳಕೆ; ಹೊಸ ಸುತ್ತೋಲೆ

ಬೆಂಗಳೂರು, ನವೆಂಬರ್ 03: ಕರ್ನಾಟಕ ಸರ್ಕಾರ ಶಾಲೆಯ ನಿತ್ಯದ ಬಿಸಿಯೂಟದಲ್ಲಿ ಸೊಪ್ಪು, ತರಕಾರಿ ಬಳಕೆ ಮಾಡುವ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ. ಶಾಲೆಯಲ್ಲಿ ಪೌಷ್ಠಿಕ ವನ ನಿರ್ಮಾಣ ಮಾಡುವ ಕುರಿತು ಸೂಚನೆ ನೀಡಲಾಗಿದೆ.

ಸುಭ ಕಲ್ಯಾಣ್, ನಿರ್ದೇಶಕರು ಪಿ. ಎಂ. ಪೋಷಣ್ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಶಾಲೆಗಳಲ್ಲಿ ಮೊದಲ ಆದ್ಯತೆಯಾಗಿ ಶಾಲಾ ಪೌಷ್ಟಿಕ ವನವನ್ನು ನಿರ್ಮಿಸಿ ಕೈ ತೋಟದ ಮೂಲಕ ವಿವಿಧ ತರಕಾರಿ ಸೊಪ್ಪುಗಳನ್ನು ಬೆಳೆದು ಶಾಲೆಯ ನಿತ್ಯ ಬಿಸಿಯೂಟದಲ್ಲಿ ಬಳಸುವಂತೆ ಕ್ರಮ ವಹಿಸುವ ಬಗ್ಗೆ ಎಂಬ ವಿಷಯವನ್ನು ಸೊತ್ತೋಲೆ ಒಳಗೊಂಡಿದೆ.

Mid Day Meal Use Of Vegetables New Circular For School

ಸುತ್ತೋಲೆಯ ವಿವರಗಳು; ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಮಾನ್ಯ ಆಯುಕ್ತರು ಹಾಗೂ ನಿರ್ದೇಶಕರು, ಪಿ. ಎಂ. ಪೋಷಣ್ ಅವರು ಹಾಜರಿದ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಘೋಷಣ್ ಶಕ್ತಿ ನಿರ್ಮಾಣ್ ಯೋಜನೆಯ ಪಿ ಎ ಬಿ ಅನುಮೋದನಾ ಸಭೆಯಲ್ಲಿ ರಾಜ್ಯದ ಶಾಲೆಗಳಲ್ಲಿ ಶೇ 30 ರಷ್ಟು ಶಾಲೆಗಳು ಮಾತ್ರ ಶಾಲಾ ಪೌಷ್ಟಿಕವನವನ್ನು ಹೊಂದಿದ್ದು ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟಿರುತ್ತವೆ. ಈ ಅಂಶವು ಪ್ರಶಂಸನೀಯವಾಗಿರುತ್ತದೆ ಎಂದು ಶ್ಲಾಘಿಸಿರುತ್ತಾರೆ.

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶಾಲಾ ಪೌಷ್ಠಿಕ ವನ ನಿರ್ಮಾಣ ಹಾಗೂ ನಿರ್ವಹಣೆ ಮಾಡುವಂತೆ ಉತ್ತೇಜಿಸುವುದು ಸೂಕ್ತ ಹಾಗೂ ಪಿ.ಎಂ. ಫೋಷಣ್, ಕಾರ್ಯಕ್ರಮದ- ಹಿತದೃಷ್ಟಿಯಿಂದ ಪ್ರಯೋಜನಕಾರಿಯಾಗಿರುವುದರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೌಷ್ಠಿಕ ಪೋಷಿಸಿ ಉತ್ತಮವಾಗಿ ಪೋಷಕಾಂಶಗಳನ್ನು ಒದಗಿಸುವ ತರಕಾರಿ-ಸೊಪ್ಪುಗಳನ್ನು ಬೆಳೆಸಲು, ಬೆಳೆದು ನಿತ್ಯ ಬಿಸಿಯೂಟದಲ್ಲಿ ಬಳಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ.

ಸಭೆಯಲ್ಲಿ 2023-24ನೇ ಸಾಲಿಗೆ ರಾಜ್ಯದ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಹಾಗೂ ಸ್ಥಳೀಯ ಕೃಷಿ ವಿಜ್ಞಾನ ಇಲಾಖೆ ಯ ಸಹಯೋಗದೊಂದಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ MNERGA ಅನುದಾನವನ್ನು ಬಳಸಿಕೊಂಡು ಶಾಲಾ ಪೌಷ್ಠಿಕ ವನ ಅಭಿವೃದ್ಧಿ, ಪಡಿಸಲು ಸೂಚಿಸಿರುತ್ತಾರೆ.

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಾಲಾ ಪೌಷ್ಠಿಕವನ/ ಶಾಲಾ ಕೈ ತೋಟ ನಿರ್ಮಿಸಿ ತಾಜಾ ತರಕಾರಿ ಮತ್ತು ಹಣ್ಣುಗಳನ್ನು Convergence initiatives ಅಡಿಯಲ್ಲಿ ಸ್ಥಳೀಯ ದಾನಿಗಳು ಸಂಸ್ಥೆಗಳು, ಕೃಷಿ, ಇಲಾಖೆ, ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆಗಳ ಸ್ಥಳೀಯ ಕಚೇರಿಗಳನ್ನು ಸಂಪರ್ಕಿಸಿ, ಅವರ ನೆರವು ಮತ್ತು ಮಾರ್ಗದರ್ಶನದೊಂದಿಗೆ ಶಾಲೆಗಳಲ್ಲಿ ಶಾಲಾ ಪೌಷ್ಠಿಕ ವನ ನಿರ್ಮಾಣ ಮಾಡಲು ತಿಳಿಸಿದೆ.

ಜಿಲ್ಲಾ ಶಿಕ್ಷಣಾಧಿಕಾರಿಗಳು ಪ್ರಧಾನ ಮಂತ್ರಿ ಪೋಷಣ್ ಯೋಜನೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರನ್ನೊಳಗೊಂಡ ಅನುಷ್ಠಾನ ಹಾಗೂ ಮೇಲ್ವಿಚಾರಣಾ ಜವಾಬ್ದಾರಿಯಲ್ಲಿ ಶಾಲೆಗಳಲ್ಲಿ ಶಾಲಾ ವನಗಳ ನಿರ್ಮಾಣ ಹಾಗೂ ನಿರ್ವಹಣೆಯ ವಿವಿಧ ಹಂತಗಳ ವರದಿಯನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳು ಪ್ರಧಾನ ಮಂತ್ರಿ ಪೋಷಣ್ ಯೋಜನೆ, ಜಿಲ್ಲಾ ಪಂಚಾಯಿತಿರವರ ಮೂಲಕ ಮಾನ್ಯ ನಿರ್ದೇಶಕರು, ಪ್ರಧಾನ ಮಂತ್ರಿ ಪೋಪಣ್ ಯೋಜನೆ, ಆಯುಕ್ತರ ಕಛೇರಿ ನೃಪತುಂಗ ರಸ್ತೆ, ಬೆಂಗಳೂರು -560001 ಇವರಿಗೆ ವರದಿ ಸಲ್ಲಿಸುವಂತೆ ಕೋರಿದೆ.

* 1ನೇ ಹಂತ : ಭೂಮಿಯನ್ನು ಹದಗೊಳಿಸುವ ಹಂತ

* 2 ನೇ ಹಂತ : ಬೀಜ ಅಥವಾ ಸಸಿಗಳ ನಾಟಿ

* 3ನೇ ಹಂತ: ಬೆಳೆದ ಬೆಳೆಯ ರಕ್ಷಣೆಗೆ ಸಂಬಂಧಿಸಿದ ಗೊಬ್ಬರ ಕೀಟ ನಿಯಂತ್ರಣ ವ್ಯವಸ್ಥೆ ಮತ್ತು ಬೆಳೆದ ಸಸಿಗಳ ರಕ್ಷಣೆಗೆ ಕೈಗೊಂಡ ಕ್ರಮಗಳು.

* 4ನೇ ಹಂತ: ಬೆಳೆದ ತರಕಾರಿ/ ಸೊಪ್ಪು/ ಹಣ್ಣು ಬೆಳೆಯನ್ನು ಬಿಸಿಯೂಟದಲ್ಲಿ ಬಳಸಿದ ಬಗ್ಗೆ ವರದಿಯನ್ನು ಸಲ್ಲಿಸಲು ತಿಳಿಸಿದೆ.

ಸದರಿ ವರದಿಗಳನ್ನು ಕೇಂದ್ರ MoE ಅವರಿಗೆ ಸಲ್ಲಿಸಬೇಕಾಗಿರುತ್ತದೆ. ಆದ್ದರಿಂದ ಶಿಕ್ಷಣ ಇಲಾಖೆಯ ಎಲ್ಲಾ ಅನುಷ್ಠಾನ ಹಾಗೂ ಮೇಲ್ವಿಚಾರಣಾಧಿಕಾರಿಗಳ ಜವಾಬ್ದಾರಿಯಲ್ಲಿ ಜಿಲ್ಲೆಯ ಶಾಲೆಗಳಲ್ಲಿ ಶಾಲಾ ಪೌಷ್ಠಿಕ ವನ ನಿರ್ಮಾಣ ಹಾಗೂ ನಿರ್ವಹಣೆಯನ್ನು ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+