ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರ ಸೀಟ್‌ನಲ್ಲಿ ಕುಳಿತಿದ್ದರೆ 100 ರೂ. ದಂಡ

By Kiran B Hegde
|
Google Oneindia Kannada News

ಮಂಡ್ಯ, ಡಿ. 17: ಸಾರಿಗೆ ಬಸ್‌ನಲ್ಲಿ ಮಹಿಳೆಯರ ಸೀಟ್‌ನಲ್ಲಿ ಕುಳಿತು ಪ್ರಯಾಣಿಸುವವರಿಗೆ ಬಿಸಿ ಮುಟ್ಟಿಸಲು ಮಂಡ್ಯ ಜಿಲ್ಲಾ ಪೊಲೀಸ್ ಸಜ್ಜಾಗಿದೆ. ಮಹಿಳೆಯರಿಗೆ ಮೀಸಲಿಟ್ಟಿರುವ ಸೀಟ್‌ನಲ್ಲಿ ಕುಳಿತವರಿಗೆ ಬಿಎಂಟಿಸಿ ಮಾದರಿಯಲ್ಲಿ 100 ರೂ. ದಂಡ ವಿಧಿಸಲು ಮಂಡ್ಯ ಪೊಲೀಸರು ಸಾರಿಗೆ ಇಲಾಖೆಗೆ ಸೂಚಿಸಿದ್ದಾರೆ.

ಮಹಿಳೆಯರ ಸೀಟ್‌ನಲ್ಲಿ ಪುರುಷರು ಕುಳಿತಿರುವುದು ಕಂಡುಬಂದರೆ ಅವರಿಗೆ ದಂಡ ವಿಧಿಸಲಾಗುತ್ತದೆ. ಈ ಕುರಿತು ಬಸ್ ನಿಲ್ದಾಣಗಳಲ್ಲಿ ಘೋಷಣೆ ಹೊರಡಿಸುವ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ತಾಲೂಕು ಬಸ್ ನಿಲ್ದಾಣಗಳಲ್ಲೂ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ksrtc

ಬಸ್ ಚಾಲಕರು ಹಾಗೂ ನಿರ್ವಾಹಕರು ಮನವಿ ಮಾಡಿದರೂ ಪ್ರಯಾಣಿಕರು ಸೀಟ್ ಬಿಟ್ಟು ಏಳುತ್ತಿರಲಿಲ್ಲ. ಅನೇಕ ಬಾರಿ ಮಹಿಳೆಯರು ನಿಂತು ಪ್ರಯಾಣಿಸಬೇಕಾಗುತ್ತಿತ್ತು. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಸಾರಿಗೆ ಬಸ್‌ಗಳಲ್ಲಿ ಪುರುಷರು ಮುಂದಿನ ದ್ವಾರದ ಮೂಲಕ ಬಸ್ ಏರುವುದುನ್ನು ಪ್ರತಿಬಂಧಿಸಿ ಈಚೆಗಷ್ಟೇ ಪೊಲೀಸ್ ಇಲಾಖೆ ಆದೇಶ ಹೊರಡಿಸಿತ್ತು. ಅಲ್ಲದೆ, ಒಂದೇ ದ್ವಾರವಿದ್ದರೆ ಮಹಿಳೆಯರಿಗೆ ಮೊದಲ ಅವಕಾಶ ನೀಡಬೇಕೆಂದು ಸೂಚಿಸಿತ್ತು.

English summary
Mandya district police have decided impose penalty against those occupying the seats reserved for women in the KSRTC buses. Men have to pay Rs. 100 for occupying seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X