ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

137 ಅಧಿಕಾರಿಗಳಿಗೆ ಲೋಕಾಯುಕ್ತ ತನಿಖೆ ಬಿಸಿ

|
Google Oneindia Kannada News

ಬೆಂಗಳೂರು, ಸೆ. 8 : ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರ ಮತ್ತೊಮ್ಮೆ ಬಿಸಿ ಮುಟ್ಟಿಸಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಆಪ್ತ ಖಾರದಪುಡಿ ಮಹೇಶ್‌ನಿಂದ ಹಣ ಪಡೆದು, ಅಕ್ರಮ ಗಣಿಗಾರಿಕೆಗೆ ಸಹಾಯ ಮಾಡಿದ ಅರಣ್ಯ ಇಲಾಖೆಯ 137 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಲು ಸರ್ಕಾರ ಒಪ್ಪಿಗೆ ನೀಡಿದೆ.

ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತಂತೆ 2011ರ ಜುಲೈ 27ರಂದು ಲೋಕಾಯುಕ್ತರು ನೀಡಿರುವ ವರದಿಯಲ್ಲಿ ಮಾಡಿರುವ ಶಿಫಾರಸಿನ ಆಧಾರದ ಮೇಲೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು 2014ರ ಜುಲೈ 25ರಂದು ನೀಡಿರುವ ವರದಿ ಮತ್ತು ಅದರಲ್ಲಿ ನೀಡಿರುವ ಅಧಿಕಾರಿಗಳ ಪಟ್ಟಿ ಅನುಸಾರ ಸರ್ಕಾರ ಆದೇಶ ಹೊರಡಿಸಿದೆ.

illegal mining

ಈ ಕುರಿತು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಅಧೀನ ಕಾರ್ಯದರ್ಶಿ ಎಸ್‌.ಬಾಲಕೃಷ್ಣಯ್ಯ ಅವರು ಆದೇಶ ಹೊರಡಿಸಿದ್ದು, ಬಳ್ಳಾರಿ ವಿಭಾಗದ ಡಿಎಫ್ಓ ಆಗಿದ್ದ ಎಸ್‌.ಮುತ್ತಯ್ಯ, ಬೆಳಗಾವಿ ವಿಭಾಗದ ಡಿಎಫ್ಓ ಜಿ.ಸಿ. ಹೊಸೂರ್‌ ಸೇರಿದಂತೆ ಸ್ಪಷ್ಟವಾಗಿ ಗುರುತಿಸಲ್ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ನೌಕರರ ವಿರುದ್ಧದ ವಿಚಾರಣೆ ನಡೆಸಲು ಅನುಮತಿ ನೀಡಿಲಾಗಿದೆ ಎಂದು ತಿಳಿಸಿದ್ದಾರೆ. [ಮನೆ ಕಳೆದುಕೊಂಡ ಗಾಲಿ ಜನಾರ್ದನ ರೆಡ್ಡಿ]

ಮಾಜಿ ಸಚಿವ ಜನಾರ್ದನ ರೆಡ್ಡಿ ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆಯಿಂದ ಸಿಗುತ್ತಿದ್ದ ಅದಿರನ್ನು ಬಳ್ಳಾರಿಯಿಂದ ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಬಂದರಿಗೆ ಅಕ್ರಮವಾಗಿ ಸಾಗಣೆ ಮಾಡುವಲ್ಲಿ ಖಾರದ ಪುಡಿ ಮಹೇಶ್‌ ಪ್ರಮುಖ ಪಾತ್ರ ವಹಿಸಿದ್ದ. ಇದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡುತ್ತಿದ್ದ ಎಂಬ ಅಂಶ ಅವನ ಡೈರಿಯಲ್ಲಿ ದಾಖಲಾಗಿತ್ತು. [ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು]

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಎಲ್ಲಾ 137 ಅಧಿಕಾರಿ, ನೌಕರರು ಖಾರದಪುಡಿ ಮಹೇಶ್‌ನಿಂದ ಅಕ್ರಮ ಸಂಭಾವನೆ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಸಂಗ್ರಹಿಸಿ ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಇವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಡೈರಿಯಲ್ಲೇನಿತ್ತು : ಖಾರದ ಪುಡಿ ಮಹೇಶ್ ಬಳಿ ಸಿಕ್ಕ ಡೈರಿಯಲ್ಲಿ ಬಳ್ಳಾರಿ ಡಿಎಫ್ಓ ಆಗಿದ್ದ ಎಸ್‌.ಮುತ್ತಯ್ಯ ಅವರಿಗೆ 2.5 ಲಕ್ಷ ರೂ., ಕೊಪ್ಪಳ ಟೌನ್‌ ಫಾರೆಸ್ಟ್‌ ಗಾರ್ಡ್‌ ಜಾಕೀರ್‌ಗೆ 1.45 ಲಕ್ಷ ರೂ., ತಿಪಟೂರು ಆರ್‌ಎಫ್ಓ ಸಿ.ಎಚ್‌.ಸತ್ಯನಾರಾಯಣ ಅವರಿಗೆ 2.45 ಲಕ್ಷ ರೂ., ಬೆಳಗಾವಿ ವಲಯ ಅರಣ್ಯಾಧಿಕಾರಿ ಡಿ.ಎ.ಬದಾಮಿ ಅವರಿಗೆ 95 ಸಾವಿರ ರೂ. ಹೀಗೆ ವಿವಿಧ ಅಧಿಕಾರಿಗಳಿಗೆ ಹಣ ನೀಡಿರುವ ಬಗ್ಗೆ ವಿವರ ಬರೆದಿಡಲಾಗಿದೆ.

ವಿಚಾರಣೆ ಎದುರಿಸಲಿರುವ ಅಧಿಕಾರಿಗಳು : 137 ಜನರ ಪೈಕಿ ಎಸ್‌.ಮುತ್ತಯ್ಯ, ಡಿಎಫ್ಓ, ಬಳ್ಳಾರಿ ವಿಭಾಗ, ಜಿ.ಸಿ. ಹೊಸೂರ್‌, ಡಿಎಫ್ಓ, ಬೆಳಗಾವಿ ವಿಭಾಗ, ಎಸ್‌.ಕೆ.ಪಾಟೀಲ್‌, ಡಿಸಿಎಫ್, ಬಿಜಾಪುರ, ಎ.ಆರ್‌.ಶಹಾಪುರ್‌, ಗದಗ್‌ ಆರ್‌ಎಫ್ಓ, ಟಿ.ವಿ.ಶ್ರೀನಿವಾಸನ್‌, ಎಸಿಎಫ್, ಹೊಸಪೇಟೆ, ಕಿಟ್ಟಣ್ಣ, ಆರ್‌ಎಫ್ಓ, ಗಂಗಾವತಿ, ವಿಜಯ್‌ ಮೋಹನ್‌ರಾಜ್‌, ಡಿಸಿಎಫ್, ಕೊಪ್ಪಳ ಸೇರಿದಂತೆ ಹಲವು ಅಧಿಕಾರಿಗಳು ಲೋಕಾಯುಕ್ತ ವಿಚಾರಣೆ ಎದುರಿಸಬೇಕಾಗಿದೆ.

English summary
Karnataka government ordered for Lokayukta investigation against 137 forest department officials who have accused in illegal mining case in Bellary district, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X