'ಕಾಂಗ್ರೆಸ್ ಸರ್ಕಾರ ಎಷ್ಟು ಬೇಜವಾಬ್ದಾರಿಯುತವಾಗಿ ಚೆಲ್ಲಾಟವಾಡುತ್ತಿದೆ ಎನ್ನುವುದಕ್ಕೆ‌ ಕೆಲವು ನಿದರ್ಶನಗಳು ಇಲ್ಲಿವೆʼ

ಬೆಂಗಳೂರು, ಏಪ್ರಿಲ್‌ 30: ಕಾಂಗ್ರೆಸ್ ಸರ್ಕಾರದ ನೀತಿಗಳು ಕೇವಲ ಜನವಿರೋಧಿ, ರಾಜ್ಯದ ಆರ್ಥಿಕತೆಯ ವಿರೋಧಿ ಮತ್ತು ವೋಟ್ ಬ್ಯಾಂಕ್‌ ರಾಜಕಾರಣದ ಸಮೀಪ ದೃಷ್ಟಿಯವು ಎಂದು‌ ಮಾತ್ರ ಭಾವಿಸಿದ್ದರೆ.... ಅದಷ್ಟೇ ಅಲ್ಲ.‌ ನಮ್ಮ ವಿದ್ಯಾರ್ಥಿಗಳು, ಯುವಕರ‌ ಭವಿಷ್ಯದ ಜೊತೆ ಕಾಂಗ್ರೆಸ್ ಸರ್ಕಾರ ಎಷ್ಟು ಬೇಜವಾಬ್ದಾರಿಯುತವಾಗಿ ಚೆಲ್ಲಾಟವಾಡುತ್ತಿದೆ ಎನ್ನುವುದಕ್ಕೆ‌ ಕೆಲವು ನಿದರ್ಶನಗಳ ಪಟ್ಟಿಯನ್ನ ಮಾಜಿ ಸಚಿವ ಸುರೇಶ್‌ ಕುಮಾರ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

1. ಈ ವರ್ಷ 5,8,9ನೇ ತರಗತಿಯ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆಯ‌ ಗೊಂದಲ ಸೃಷ್ಟಿಸಿ ನ್ಯಾಯಾಲಯದಲ್ಲಿ ಏನನ್ನೂ ಮಾಡದ ಅಸಹಾಯಕತೆಯ‌‌ ಪ್ರದರ್ಶನ, ಕಾಂಗ್ರೆಸ್ ಬೇಜವಾಬ್ದಾರಿ ಆಡಳಿತದ ಬಹುದೊಡ್ಡ ಕಪ್ಪು ಚುಕ್ಕೆಯಾಗಿ ಉಳಿಯಿತು. ಸುಪ್ರೀಂಕೋರ್ಟ್ ಕೂಡಾ‌ ಛೀಮಾರಿ ಹಾಕಿ ತಡೆಯಾಜ್ಞೆ‌ ಕೊಟ್ಟಿತು. ಆಗ ಆ ಎಳೆಯ ಮಕ್ಕಳು ಅನುಭವಿಸಿದ ಅಸಹಾಯಕತೆ, ಆ ಪೋಷಕರ ಆತಂಕಕ್ಕೆ ವಿಷಾದ ವ್ಯಕ್ತ‌ಪಡಿಸುವ ಕನಿಷ್ಟ ಸೌಜನ್ಯವನ್ನೂ ಸಂಬಂಧಪಟ್ಟವರು ತೋರಲಿಲ್ಲ.

Lok Sabha Poll Former minister Suresh Kumar attacked Siddaramaiah

2. ಅತ್ಯಂತ ವೈಜ್ಞಾನಿಕವಾಗಿ ರೂಪುಗೊಂಡ, #ರಾಷ್ಟ್ರೀಯ_ಶಿಕ್ಷಣ_ನೀತಿ ಯನ್ನು ಕೇವಲ‌ ರಾಜಕೀಯ ಮೇಲಾಟಕ್ಕೆ ರದ್ದುಪಡಿಸಿ ರಾಜ್ಯ‌ ನೀತಿಯನ್ನು ತರುತ್ತೇವೆಂದು ಘೋಷಿಸಿದ ಸರ್ಕಾರ‌ ಈವರೆಗೂ ಏನೂ ಪ್ರಗತಿ ಮಾಡದೇ‌ ಮೀನಾಮೇಷ ಎಣಿಸುತ್ತಿದೆ.

ಪದವಿ ತರಗತಿಗಳಲ್ಲಿ‌ ಓದುತ್ತಿರುವ ಅಸಂಖ್ಯ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಅದೇ ರೀತಿ ಪ್ರಾಥಮಿಕ,‌ ಪ್ರೌಢ ವಿದ್ಯಾರ್ಥಿಗಳ ಭವಿಷ್ಯವನ್ನು ಮಸುಕುಮಾಡುತ್ತಿದೆ. ಕೇಂದ್ರ ಪಠ್ಯಕ್ರಮದ ಶಾಲೆಗಳು, ಸ್ವಾಯತ್ತ ವಿಶ್ವವಿದ್ಯಾಲಯಗಳಿಗೆ ಒಂದು‌ ನೀತಿಯಾದರೆ ನಮ್ಮ ಸರ್ಕಾರಿ ಶಾಲೆಗಳು, ಕಾಲೇಜುಗಳ ಮಕ್ಕಳ ಕುರಿತು ಇನ್ನೊಂದು ನೀತಿ. ಇವರಿಗೆ ಕಾಳಜಿ ಎಲ್ಲಿದೆ? ಇದಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ತನ್ನದೇ ಗತಿಯಲ್ಲಿ ಕೆಲಸ‌ ಮಾಡುತ್ತಿರುವ ಶಿಕ್ಷಣ ನೀತಿ ಸಮಿತಿಗಳನ್ನು ಸಮರ್ಥವಾಗಿ ಮುನ್ನಡೆಸಲೂ ಯೋಚಿಸದ ಸ್ಥಿತಿಯಲ್ಲಿ ಸರ್ಕಾರ.

Lok Sabha Poll Former minister Suresh Kumar attacked Siddaramaiah

3. ಸಿಇಟಿ ಪರೀಕ್ಷೆಯ ನಿರ್ವಹಣೆ ಇನ್ನೊಂದು ವ್ಯಥೆ. ವಿವಿಧ ವಿಷಯಗಳ 240 ಪ್ರಶ್ನೆಗಳಲ್ಲಿ 57 ಪ್ರಶ್ನೆಗಳು ಪಠ್ಯಕ್ರಮಕ್ಕೆ ಸೇರದವು. ವಿದ್ಯಾರ್ಥಿಗಳ ಆತಂಕದ‌ ತೀವ್ರತೆಯನ್ನು‌ ಇದರಲ್ಲಿಯೇ ಊಹಿಸಬಹುದು. ಪರೀಕ್ಷೆ ಪ್ರಶ್ನೆ ಪತ್ರಿಕೆ‌‌ ಸಿದ್ಧಪಡಿಸುವಿಕೆ ಮುನ್ನ, ಪ್ರಕ್ರಿಯೆ ಹೇಗೆ ಇದೆ‌ ಎನ್ನುವ ಪರಾಮರ್ಶೆ‌ ಮಾಡದೇ ಸುಮ್ಮನೇ ಕೂತಲ್ಲಿ ಇಂತಹ ಫಲಿತಾಂಶಗಳು ಬಿಟ್ಟರೆ ಬೇರೇನು ಬರಲು‌ ಸಾಧ್ಯ? ಒಂದು ಕಾಲದಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿತ್ತು. 1998 ರಿಂದಲೂ ಈ ಸಿಇಟಿ ಪರೀಕ್ಷೆಗಳನ್ನು, ಅದರ ನಿರ್ವಹಣೆಯನ್ನು ನಾನು ಗಮನಿಸುತ್ತಲೇ‌ ಇದ್ದೇನೆ. ಈ ಬಾರಿಯ ಇಷ್ಟು ಬೇಜವಾಬ್ದಾರಿ ನಿರ್ವಹಣೆ ಹಿಂದೆಂದೂ ಆಗಿರಲಿಲ್ಲ .

4. ಇದಕ್ಕೂ‌ ಮುನ್ನ‌ ಸಿಇಟಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ದೂರದೂರದ ಪರೀಕ್ಷಾ ಕೇಂದ್ರಗಳಿಗೆ ಹೋಗುವ ಹಾಗೆ ಮಾಡಿ ಅವರಲ್ಲಿ‌ ಆತಂಕ‌‌ ಹೆಚ್ಚಿಸಿದ ಕೀರ್ತಿಯೂ ಇದೇ ಕಾಂಗ್ರೆಸ್ ಸರ್ಕಾರದ್ದೇ ಆಗಿದೆ.
ಈ ಮೂಲಕ ಪರೀಕ್ಷೆ ಅಕ್ರಮ ತಡೆಯುತ್ತೇವೆನ್ನುವ ನೆಪ‌ ನೀಡಿದ್ದು ಅಧಿಕಾರಿಗಳು.‌ ಮಕ್ಕಳ ಹಿತ ಕಾಯಬೇಕು, ನೀವು ಹಗಲು ರಾತ್ರಿ‌ ಕೆಲಸ‌ ನಿರ್ವಹಿಸಿ,‌ಮಕ್ಕಳಿಗೆ ತೊಂದರೆ ನೀಡಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡುವ ಸಚಿವರಿಲ್ಲದೇ‌ ವಿದ್ಯಾರ್ಥಿಗಳು ಕಂಗಾಲು. ಪರೀಕ್ಷೆ ಅಕ್ರಮ ವಿದ್ಯಾರ್ಥಿಗಳದ್ದಲ್ಲ. ಅಕ್ರಮ ಎಸಗಿರುವುದು ಕೆಇಎ. ಇದಕ್ಕೆ ಸಂಬಂಧಪಟ್ಟ ಸಚಿವರು ಹೊಣೆ ಹೊರಬೇಕು.

5. ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸುವಲ್ಲಿ ವೆಬ್ ಕಾಸ್ಟಿಂಗ್ ಎಂಬ ಹೊಸದೊಂದು ಪ್ರಯತ್ನ ಸರ್ಕಾರ ಮಾಡಿದೆ. ಮತ್ತದೇ, ಪರೀಕ್ಷಾ ಅಕ್ರಮ ತಡೆಗಟ್ಟುವ ಯತ್ನವಂತೆ ಅದು. ಪರೀಕ್ಷಾ ವ್ಯವಸ್ಥೆಯಲ್ಲಿನ‌ ಮೇಲ್ವಿಚಾರಕರ, ಅಧಿಕಾರಿಗಳ ಉತ್ತರದಾಯಿತ್ವವನ್ನು ಹೆಚ್ಚಿಸುವ ಕ್ರಿಯಾಶೀಲ ಕೆಲಸ‌ ಮಾಡುವುದನ್ನು ಬಿಟ್ಟು ಮಕ್ಕಳಿಗೆ ಸಿಸಿ ಕೆಮರಾ ಮುಂದೆ ಆತಂಕದಿಂದ ಪರೀಕ್ಷೆ ಬರೆಯುವ ಶಿಕ್ಷೆ ಈ ಬಾರಿ! ಇದರಲ್ಲಿ ಎಲ್ಲ ಮಕ್ಕಳನ್ನೂ ಕಳ್ಳರೆಂದು ಬಗೆಯುವ ಆಲೋಚನೆ ಕೂಡಾ ಇರಬಹುದು. ಯಾರು ಸಲಹೆಗಳನ್ನು ಕೊಡುತ್ತಾರೋ ಈ ಸರ್ಕಾರಕ್ಕೆ!

6. ಎರಡನೇ‌ ಪಿಯು ಪರೀಕ್ಷೆಯಲ್ಲಿ ಇನ್ನೊಂದು ಹೆಚ್ಚುವರಿ ಎಡವಟ್ಟು. ನಪಾಸಾದ ವಿದ್ಯಾರ್ಥಿಗೆ ಮತ್ತೆ ಹಿಂದೆ‌ ಇದ್ದಂತಿಲ್ಲದೇ ಒಂದಲ್ಲ, ಎರಡು ಅವಕಾಶ! ಗುಣಮಟ್ಟದ ಶಿಕ್ಷಣದ ಬಗ್ಗೆ ಮಾತು! ನಿಜಕ್ಕೂ ಪ್ರತಿಭಾನ್ವಿತರ ಗತಿ!

7. ಇನ್ನು ಕೆಪಿಎಸ್ ಸಿ ಬಗ್ಗೆ ಹೇಳುವುದೇ ಬೇಡ.‌ ನ್ಯಾಯ ಕೇಳಲೂ ಅಲ್ಲಿ ಅವಕಾಶವಿಲ್ಲ! ಕಷ್ಟಪಟ್ಟು ಓದಿಕೊಂಡ ಅಭ್ಯರ್ಥಿಗಳು ಪರೀಕ್ಷೆ‌‌ ಕಟ್ಟುವುದಷ್ಟೇ ಸಾಧನೆ.‌ ಫಲಿತಾಂಶ ಬರುವ ವೇಳೆಗೆ ಇದೆಲ್ಲಾ‌ ಬೇಕಾ ಎನ್ನುವ ಮನಸ್ಥಿತಿಗೆ ಅವರು ತಲುಪಿರುತ್ತಾರೆ. ಅಧ್ಯಕ್ಷರು, ಕಾರ್ಯದರ್ಶಿಗಳ‌ ನಡುವೆ ಜಟಾಪಟಿ ಮುಂದುವರೆದಿರುತ್ತದೆ. ಕಾಂಗ್ರೆಸ್ ಸರ್ಕಾರ‌ ಎಂದಿನಂತೆ ಮೌನ ವಹಿಸಿದೆ. ಯಾರೋ‌ ಒಂದಷ್ಟು ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವುದು, ಪೋಷಕರನ್ನು ಹತಾಶೆಗೆ ದೂಡುವುದು ಇಷ್ಟೇ ಸರ್ಕಾರದ‌ ಕೆಲಸ!

8. ಅಂದಹಾಗೆ ಪರೀಕ್ಷಾ ಪ್ರಶ್ನೆ ಪತ್ರಿಕೆ ಲೀಕ್ ಎನ್ನುವ ಸುದ್ದಿ ಹುಟ್ಟುವುದೇ ಕಾಂಗ್ರೆಸ್ ಸರ್ಕಾರದ‌ ಅವಧಿಯಲ್ಲಿ. ಹಿಂದಿನ ಅವಧಿಯಲ್ಲಿ ಒಬ್ಬ‌ ಸಚಿವರ ತಲೆದಂಡವಾಗಿದ್ದರೂ ಯಾರೂ ಎಚ್ಚೆತ್ತುಕೊಳ್ಳದೇ ತಮ್ಮ ಅದೃಷ್ಟ ಪರೀಕ್ಷೆಯನ್ನು ಮುಂದುವರೆಸಿದ್ದಾರೆ.

ದೇಶದ ಭವಿಷ್ಯ ರೂಪಿಸುವ ಶಿಕ್ಷಣ ವ್ಯವಸ್ಥೆಗೆ ಕಾಂಗ್ರೆಸ್ ಸರ್ಕಾರ‌ ನೀಡುತ್ತಿರುವ ಕಾಯಕಲ್ಪದ‌‌ ಕಿರು ಸರಣಿ ಇದು. ನಮ್ಮ ಯುವಕರನ್ನು, ವಿದ್ಯಾರ್ಥಿಗಳನ್ನು ಭಗವಂತನೇ ರಕ್ಷಿಸಬೇಕು. ನಿರುದ್ಯೋಗಿಗಳಿಗೆ ಭತ್ಯೆ ಕೊಡುತ್ತೇವೆ ಎಂದು ಭರವಸೆ ನೀಡಿ ವೋಟು ತೆಗೆದುಕೊಂಡು ಈವರೆಗೆ ಒಬ್ಬ ನಿರುದ್ಯೋಗಿಗೂ ಭತ್ಯೆ ಕೊಡದ ಅಪಖ್ಯಾತಿಯೂ ಕಾಂಗ್ರೆಸ್ ಗೇ ಸಲ್ಲುತ್ತದೆ. ಉದ್ಯೋಗಾಕಾಂಕ್ಷಿ ಯುವಕರಿಗೆ ಭರವಸೆ ನೀಡಲು ಕೆಪಿಎಸ್ಸಿ, ಕೆಪಿಟಿಸಿಎಲ್... ಮುಂತಾದ ಕಡೆ ಅಂತಿಮ ಪಟ್ಟಿ ಪ್ರಕಟಣೆ ಮಾಡಲು ಸಾಧ್ಯವಾಗದ, ನೇಮಕಾತಿ ಆದೇಶಗಳನ್ನು ಕೊಡಲಾಗದ ಈ ಕಾಂಗ್ರೆಸ್ ಸರ್ಕಾರ ಯುವಕರ ಪಾಲಿಗೆ ಒಂದು ದುಸ್ವಪ್ನವೇ ಸರಿ.

ಪ್ರಧಾನಿ ಹತಾಶಗೊಂಡಿದ್ದಾರೆ ಎಂದು ತೀರ್ಪು ನೀಡಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಯವರೇ ಕಲಬುರ್ಗಿಯಲ್ಲಿ "ನಮಗೆ ವೋಟು ಹಾಕಲು ಬನ್ನಿ, ಇಲ್ಲವೇ ಸತ್ತ ಮೇಲೆ ಮಣ್ಣಿಗಾದರೂ ಬನ್ನಿ" ಎಂದು ಹೇಳಿರುವುದು ಭಾವುಕತನವೋ ಅಥವಾ ಹತಾಶೆತನವೋ? ಇದನ್ನು Emotional Blackmail ಎಂದೂ ಕರೆಯಬಹುದಲ್ಲವೇ ಎಂದು ಮಾಜಿ ಸಚಿವ ಸುರೇಶ್‌ ಕುಮಾರ್‌ ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+