ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

28 ಕ್ಷೇತ್ರಗಳಿಗೂ ಕಾಂಗ್ರೆಸ್ ಅಭ್ಯರ್ಥಿಗಳು ಅಂತಿಮ

|
Google Oneindia Kannada News

ಬೆಂಗಳೂರು, ಮಾ. 25 : ಕರ್ನಾಟಕ ಕಾಂಗ್ರೆಸ್ ಸೋಮವಾರ ರಾತ್ರಿ ಇಬ್ಬರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಲೋಕಸಭೆ ಚುನಾವಣೆಗೆ 28 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಅಂತಿಮ ಪಟ್ಟಿಯಲ್ಲಿ ಹಾವೇರಿ ಮತ್ತು ಧಾರವಾಡ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಹಾವೇರಿ ಮತ್ತ ಧಾರವಾಡ ಕ್ಷೇತ್ರಗಳ ಟಿಕೆಟ್ ಗಾಗಿ ತೀವ್ರ ಪೈಪೋಟಿ ಉಂಟಾಗಿತ್ತು. ಅಂತಿಮವಾಗಿ ಹಾವೇರಿಯಿಂದ ಮುಸ್ಲಿಂ ಮುಖಂಡ ಸಲೀಂ ಅಹ್ಮದ್‌ ಹಾಗೂ ಧಾರವಾಡದಿಂದ ಶಾಸಕ ವಿನಯ ಕುಲಕರ್ಣಿ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Congress

ಸಚಿವ ಎಚ್.ಕೆ.ಪಾಟೀಲ್ ಅವರು ಹಾವೇರಿ ಕ್ಷೇತ್ರದ ಟಿಕೆಟ್‌ ಅನ್ನು ತಮ್ಮ ಸಹೋದರ ಸಂಬಂಧಿ ಡಿ.ಆರ್‌. ಪಾಟೀಲ್‌ಗೆ ದೊರಕಿಸಿಕೊಡಲು ಮತ್ತು ಧಾರವಾಡದಲ್ಲಿ ಮುಸ್ಲಿಂ ಅಭ್ಯರ್ಥಿಯೊಬ್ಬರಿಗೆ ಟಿಕೆಟ್‌ ಕೊಡಿಸಲು ದೆಹಲಿಯಲ್ಲಿ ಪ್ರಯತ್ನ ನಡೆಸಿದ್ದರು, ಅದು ವಿಫಲವಾಗಿದೆ.

ಸೋಮವಾರ ಅಂತಿಮಗೊಂಡ ಪಟ್ಟಿ
ಧಾರವಾಡ - ವಿನಯ ಕುಲಕರ್ಣಿ
ಹಾವೇರಿ - ಸಲೀಂ ಅಹ್ಮದ್

ಕಾಂಗ್ರೆಸ್ 26 ಅಭ್ಯರ್ಥಿಗಳ ಪಟ್ಟಿ
ಬಿಜಾಪುರ (ಎಸ್‌ಸಿ) - ಪ್ರಕಾಶ್ ರಾಥೋಡ್
ಗುಲ್ಬರ್ಗ (ಎಸ್‌ಸಿ) - ಮಲ್ಲಿಕಾರ್ಜುನ ಖರ್ಗೆ
ಬೀದರ್ - ಧರಂ ಸಿಂಗ್
ಬಳ್ಳಾರಿ (ಎಸ್‌ಟಿ) - ಎನ್.ವೈ.ಹನುಮಂತಪ್ಪ
ತುಮಕೂರು - ಮುದ್ದಹನುಮೇಗೌಡ
ದಾವಣಗೆರೆ - ಎಸ್.ಎಸ್.ಮಲ್ಲಿಕಾರ್ಜುನ್
ಉಡುಪಿ - ಚಿಕ್ಕಮಗಳೂರು - ಜಯಪ್ರಕಾಶ್ ಹೆಗ್ಡೆ
ಹಾಸನ - ಎ.ಮಂಜು
ಮಂಡ್ಯ - ರಮ್ಯಾ
ಮೈಸೂರು - ಎ.ಎಚ್.ವಿಶ್ವನಾಥ್
ಚಾಮರಾಜನಗರ (ಎಸ್‌ಸಿ) - ಧ್ರುವನಾರಾಯಣ್
ಬೆಂಗಳೂರು ಗ್ರಾಮಾಂತರ - ಡಿ.ಕೆ.ಸುರೇಶ್
ಬೆಂಗಳೂರು ದಕ್ಷಿಣ - ನಂದನ್ ನಿಲೇಕಣಿ
ಬೆಂಗಳೂರು ಉತ್ತರ - ಸಿ.ನಾರಾಯಣ ಸ್ವಾಮಿ
ಕೋಲಾರ (ಎಸ್‌ಸಿ) - ಕೆ.ಎಚ್.ಮುನಿಯಪ್ಪ
ಚಿಕ್ಕಬಳ್ಳಾಪುರ - ವೀರಪ್ಪ ಮೊಯ್ಲಿ
ಬೆಂಗಳೂರು ಕೇಂದ್ರ - ರಿಜ್ವಾನ್ ಅರ್ಷದ್
ಬೆಳಗಾವಿ - ಲಕ್ಷ್ಮೀ ಹೆಬ್ಬಾಳಕರ್
ಚಿಕ್ಕೋಡಿ - ಪ್ರಕಾಶ್ ಹುಕ್ಕೇರಿ
ಕೊಪ್ಪಳ - ಬಸವರಾಜ ಹಿಟ್ನಾಳ್
ಬಾಗಲಕೋಟೆ - ಅಜಯ್ ಸರನಾಯಕ್
ಚಿತ್ರದುರ್ಗ - ಬಿ.ಎನ್.ಚಂದ್ರಪ್ಪ
ರಾಯಚೂರು - ಬಿವಿ ನಾಯಕ್
ಶಿವಮೊಗ್ಗ - ಮಂಜುನಾಥ ಭಂಡಾರಿ
ದಕ್ಷಿಣ ಕನ್ನಡ - ಜನಾರ್ದನ ಪೂಜಾರಿ
ಉತ್ತರ ಕನ್ನಡ - ಪ್ರಶಾಂತ್ ದೇಶಪಾಂಡೆ

English summary
Elections 2014 : Congress on Monday, March 24 announced 2 candidates from Karnataka for Lok Sabha Election 2014. By this list party finalized candidates name for all 28 Constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X