ಕರ್ನಾಟಕದ ಪ್ರಥಮ ಪ್ರಜೆಗಳ ಪಟ್ಟಿ 1956-2014
ಬೆಂಗಳೂರು, ಸೆ.2: ಕರ್ನಾಟಕದ ನೂತನ ರಾಜ್ಯಪಾಲರಾಗಿ ವಜುಭಾಯಿ ರುಡಾಭಾಯಿ ವಾಲಾ ಅವರು ರಾಜಭವನದ ಗಾಜಿನ ಮನೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕರ್ನಾಟಕದ 17ನೇ ರಾಜ್ಯಪಾಲರ ಹೆಸರು ಹಾಗೂ ಅವರ ಅಧಿಕಾರಾವಧಿಯ ವಿವರ ಇಲ್ಲಿದೆ. ಈ ಪಟ್ಟಿಯಲ್ಲಿ ಹಂಗಾಮಿ ರಾಜ್ಯಪಾಲರ ಹೆಸರು ಸೇರಿದೆ.
ವಜುಭಾಯಿ ಅವರು ಹಿಂದಿಯಲ್ಲಿ ಹಾಗೂ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ. ಹೆಚ್. ವಘೇಲಾ ಅವರು ನೂತನ ರಾಜ್ಯಪಾಲರಿಗೆ ಅಧಿಕಾರ ಹಾಗೂ ಗೌಪ್ಯತಾ ಪ್ರತಿಜ್ಞಾ ವಿಧಿ ಬೋಧಿಸಿದರು.[ಸೌರಾಷ್ಟ್ರದ ವಜುಭಾಯಿ ವ್ಯಕ್ತಿ ಪರಿಚಯ]
ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಜುಭಾಯಿ ಅವರನ್ನು ಶಾಲು ಹೊದಿಸಿ, ಗಂಧದ ಮಾಲೆ ಅರ್ಪಿಸಿ ಅಭಿನಂದಿಸಿದರು. ಈ ಮುನ್ನ ರಾಜ್ಯದ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ರಾಷ್ಟ್ರಪತಿಯವರು ಹೊರಡಿಸಿರುವ ನೇಮಕಾತಿ ಆದೇಶವನ್ನು ವಾಚಿಸಿದರು. [ವಜುಭಾಯಿ ಪ್ರಮಾಣ ವಚನ ಸ್ವೀಕಾರ ಚಿತ್ರಗಳು]

| ಕ್ರಮ ಸಂಖ್ಯೆ | ಕರ್ನಾಟಕ ರಾಜ್ಯಪಾಲರು | ಎಲ್ಲಿಂದ | ಎಲ್ಲಿವರೆಗೆ |
| 1 | ಜಯಚಾಮರಾಜೇಂದ್ರ ಒಡೆಯರ್ | 01-04-1956 | 15-04-1959 |
| 2 (ಪ್ರಭಾರ) | ಮಂಗಲ್‍ದಾಸ್ ಪಕ್ವಾಸ್ | 15-04-1959 | 01-07-1959 |
| 3 | ಜಯಚಾಮರಾಜೇಂದ್ರ ಒಡೆಯರ್ | 01-07-1959 | 16-04-1960 |
| 4 (ಪ್ರಭಾರ) | ಮಂಗಲ್‍ದಾಸ್ ಪಕ್ವಾಸ್ | 16-04-1960 | 02-07-1960 |
| 5 | ಜಯಚಾಮರಾಜೇಂದ್ರ ಒಡೆಯರ್ | 02-07-1960 | 10-04-1961 |
| 6 (ಪ್ರಭಾರ) | ಮಂಗಲ್‍ದಾಸ್ ಪಕ್ವಾಸ್ | 10-04-1961 | 24-06-1961 |
| 7 | ಜಯಚಾಮರಾಜೇಂದ್ರ ಒಡೆಯರ್ | 24-06-1961 | 19-04-1962 |
| 8 (ಪ್ರಭಾರ) | ಮಂಗಲ್‍ದಾಸ್ ಪಕ್ವಾಸ್ | 19-04-1962 | 20-07-1962 |
| 9 | ಜಯಚಾಮರಾಜೇಂದ್ರ ಒಡೆಯರ್ | 20-07-1962 | 07-08-1963 |
| 10 (ಪ್ರಭಾರ) | ಮಂಗಲ್‍ದಾಸ್ ಪಕ್ವಾಸ್ | 07-08-1963 | 07-10-1963 |
| 11 | ಜಯಚಾಮರಾಜೇಂದ್ರ ಒಡೆಯರ್ | 07-10-1963 | 04-05-1964 |
| 12 | ಎಸ್. ಎಂ. ಶ್ರೀನಾಗೇಶ್ | 04-05-1964 | 02-04-1965 |
| 13 | ವಿ.ವಿ. ಗಿರಿ | 02-04-1965 | 13-05-1967 |
| 14 | ಜಿ.ಎಸ್. ಪಾಠಕ್ | 13-05-1967 | 30-08-1969 |
| 15 (ಪ್ರಭಾರ) | ಸೋಮನಾಥ್ ಅಯ್ಯರ್ | 30-08-1969 | 23-10-1969 |
| 16 | ಧರ್ಮವೀರ | 23-10-1969 | 01-02-1972 |
| 17 | ಮೋಹನ್ ಲಾಲ್ ಸುಖಾಡಿಯಾ | 01-02-1972 | 10-01-1976 |
| 18 | ಉಮಾಶಂಕರ್ ದೀಕ್ಷಿತ್ | 10-01-1976 | 02-08-1977 |
| 19 | ಗೋವಿಂದ್ ನಾರಾಯಣ್ | 02-08-1977 | 15-04-1983 |
| 20 | ಅಶೋಕ್ ನಾಥ್ ಬ್ಯಾನರ್ಜಿ | 16-04-1983 | 25-02-1988 |
| 21 | ಪಿ. ವೆಂಕಟಸುಬ್ಬಯ್ಯ | 26-02-1988 | 05-02-1990 |
| 22 (ಪ್ರಭಾರ) | ಜಸ್ಟೀಸ್ ಎಸ್. ಮೋಹನ್ | 05-02-1990 | 08-05-1990 |
| 23 | ಭಾನುಪ್ರತಾಪ್ ಸಿಂಗ್ | 08-05-1990 | 06-01-1991 |
| 24 | ಖುರ್ಷಿದ್ ಆಲಂ ಖಾನ್ | 06-01-1991 | 29-05-1992 |
| 25 (ಪ್ರಭಾರ) | ಎಸ್.ಪಿ. ಬರೂಚಾ | 30-05-1992 | 27-06-1992 |
| 26 | ಖುರ್ಷಿದ್ ಆಲಂ ಖಾನ್ | 28-06-1992 | 31-11-1995 |
| 27 (ಪ್ರಭಾರ) | ಎಂ.ಎಲ್. ಪೆಂಡ್ಸೆ | 01-12-1995 | 21-12-1995 |
| 28 | ಖುರ್ಷಿದ್ ಆಲಂ ಖಾನ್ | 21-12-1995 | 01-12-1999 |
| 29 | ವಿ.ಎಸ್. ರಮಾದೇವಿ | 02-12-1999 | 20-08-2002 |
| 30 | ಟಿ.ಎನ್. ಚುತುರ್ವೇದಿ | 21-08-2002 | 21-08-2007 |
| 31 | ರಾಮೇಶ್ವರ್ ಠಾಕೂರ್ | 21-08-2007 | 28-06-2009 |
| 32 | ಎಚ್. ಆರ್. ಭಾರದ್ವಾಜ್ | 29-06-2009 | 29-06-2014 |
| 33 ಹೆಚ್ಚುವರಿ | ಕೆ. ರೋಸಯ್ಯ | 29-06-2014 | 01-09-2014 |
| 34 | ವಜುಭಾಯಿ ರುಡಾಭಾಯಿ ವಾಲಾ | 01-09-2014 | - |
-
ಮಾರ್ಚ್ 15ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
KAS ಅಭ್ಯರ್ಥಿಗಳಿಗೆ ಬಿಗ್ ಶಾಕ್ ನೀಡಿದ KPSC: 384 ಗೆಜೆಟೆಡ್ ಪ್ರೊಬೇಷನರ್ಸ್ ಸಂದರ್ಶನ ಮುಂದೂಡಿಕೆ -
ರಾಜ್ಯದಲ್ಲಿ 4,824 ಕೋಟಿ ರೂ. ಕೈಗಾರಿಕಾ ಹೂಡಿಕೆಗೆ ಸರ್ಕಾರ ಅಸ್ತು; 14,525 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ -
ಮಾರ್ಚ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ












Click it and Unblock the Notifications