"ಗೆಳತಿಯರೊಂದಿಗೆ ಹಾರೋಣ" ಎಂದವರನ್ನು ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಕರೆಸಲು ಒತ್ತಾಯ
ಗೆಳತಿಯರೊಂದಿಗೆ ಹಾರೋಣ ಎನ್ನುವ ಕಾರ್ಯಕ್ರಮವನ್ನು ಪ್ರಕಟಿಸಿ, ಹೊಸದಾಗಿ ಟ್ರೋಲ್ ಆಗುತ್ತಿರುವ ಸಚಿವ ಮಧು ಬಂಗಾರಪ್ಪ ಅವರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷವಾಗಿ ಆಹ್ವಾನಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ. ಹಿಂದಿಯ ಸಹೇಲಿ ಕಿ ಉಡಾನ್ ಎನ್ನುವುದನ್ನು ಇವರು ಯಥಾವತ್ತಾಗಿ ಕನ್ನಡದಲ್ಲಿ ಅನುವಾದಿಸಿದ್ದು ಗೆಳತಿಯರೊಂದಿಗೆ ಹಾರೋಣ ಎನ್ನುವ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಅಲ್ಲದೇ ಶೀರ್ಷಿಕೆ ಕೊಟ್ಟಿರುವ ಶಿಕ್ಷಣ ಇಲಾಖೆಯ ಸಚಿವರಿಗೆ ಹಿಂದಿಯಲ್ಲಿರುವ ವಾಕ್ಯವೊಂದನ್ನು ಯಥಾವತ್ತಾಗಿ ತರ್ಜುಮೆ ಮಾಡಿ ಅಂತ ಎಲ್ಲಾದರೂ ನಿಯಮವೇನಾದರೂ ಇದೆಯಾ ಅಂತ ಕಾಲೆಳೆದಿದ್ದಾರೆ.
ಶಿಕ್ಷಣ ಸಚಿವರು ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಟ್ರೋಲ್ ಆಗುತ್ತಲ್ಲೇ ಇದ್ದಾರೆ. ಅದರಲ್ಲೂ ಈಚೆಗೆ ವಿದ್ಯಾರ್ಥಿಯೊಬ್ಬರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಹೇಳಿ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಗೆಳತಿಯರೊಂದಿಗೆ ಹಾರೋಣ ಎನ್ನುವ ಕಾರ್ಯಕ್ರಮದ ಹೆಸರಿನ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇದರ ನಡುವೆಯೇ ಯತ್ನಾಳ್ ಅವರು ಮಧು ಬಂಗಾರಪ್ಪ ಅವರ ಕಾಲೆಳೆದಿದ್ದಾರೆ.

ಕರ್ನಾಟಕದ ಶಿಕ್ಷಣ ಇಲಾಖೆಯಲ್ಲಿ ಭಾಷಾ ತರ್ಜುಮೆದಾರರ (ಅನುವಾದಕರ) ಕೊರತೆ ಏನಾದರೂ ಇದೆಯೇ ಎಂದು ಯತ್ನಾಳ್ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಗೆಳತಿಯರೊಂದಿಗೆ ಸಾಧಿಸೋಣ, ಶಿಕ್ಷಣ ಕೊಡಿಸಿ ಹಾಗೂ ಹೆಣ್ಣುಮಕ್ಕಳ ಬಾಳು ಬೆಳಗಿಸಿ ಎಂದು ಹೇಳಬಹುದು. ಈ ರೀತಿ ಅರ್ಥಪೂರ್ಣವಾಗಿ ತರ್ಜುಮೆ ಮಾಡಿ ಹಾಕಲು ಅವಕಾಶವಿತ್ತು. ಆದರೆ, ಮಾಡಿರುವ ತಪ್ಪನ್ನು ಸರಿ ಎಂದು ವಾದಿಸುತ್ತಿರುವುದು ಮೂರ್ಖತನ ಎಂದಿದ್ದಾರೆ.
ಆದರೆ, ಈ ನಡುವೆ ಮಧು ಬಂಗಾರಪ್ಪ ಅವರು ಈ ಕಾರ್ಯಕ್ರಮಕ್ಕೆ ಇರಿಸಿರುವ ಹೆಸರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಅದೂ ಟ್ರೋಲ್ ಆಗುವುದಕ್ಕೆ ಕಾರಣವಾಗಿದೆ. ಗೆಳತಿಯರೊಂದಿಗೆ ಹಾರೋಣ ಎನ್ನುವ ಕಾರ್ಯಕ್ರಮ ರಾಜ್ಯದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆದರೂ, ಅದನ್ನೇ ಸಚಿವ ಮಧು ಬಂಗಾರಪ್ಪ ಅವರು, ಈ ಕಾರ್ಯಕ್ರಮ ಹಾಗೂ ಕಾರ್ಯಕ್ರಮದ ಹೆಸರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಕೆಜಿಬಿವಿಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ರೀತಿ ಹೆಸರು ಕೊಡಲಾಗಿದೆ. ನಾನು ಈ ರೀತಿಯ ಟ್ರೋಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳೋಕೆ ಹೋಗಲ್ಲ. ಮಕ್ಕಳಿಗೆ ಯಾವ ಕಾರ್ಯಕ್ರಮ ನೀಡುತ್ತಿದ್ದೇವೆ ಎನ್ನುವುದು ಮಾತ್ರ ಮುಖ್ಯ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಏನಿದು ಗೆಳತಿಯರೊಂದಿಗೆ ಹಾರೋಣ ?
ಈಚೆಗೆ ಕರ್ನಾಟಕದ ಶಿಕ್ಷಣ ಇಲಾಖೆಯು ಸಹೇಲಿ ಕಿ ಉಡಾನ್ ಎನ್ನುವ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಆದರೆ, ಆ ಆಯೋಜನೆಗೆ ಹೆಸರು ಕೊಡುವ ಸಂದರ್ಭದಲ್ಲಿ ಗೆಳತಿಯರೊಂದಿಗೆ ಹಾರೋಣ ಎಂದು ಯಥಾವತ್ತಾಗಿ ಅನುವಾದ ಮಾಡಲಾಗಿತ್ತು. ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿ ಟ್ರೋಲ್ ಸಹ ಆಗಿತ್ತು. ಶಿಕ್ಷಣ ಇಲಾಖೆಯು ಪದೇ ಪದೆ ಈ ರೀತಿ ಒಂದಿಲ್ಲೊಂದು ತಪ್ಪುಗಳ ಮೂಲಕ ಜನರ ಮುಂದೆ ನಗೆಪಾಟಲಿಗೆ ಗುರಿಯಾಗಿದೆ.
ಈ ವಿಷಯ ಇದೀಗ ರಾಜ್ಯಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ಕರ್ನಾಟಕ ಸರ್ಕಾರ ಈಚೆಗೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಅನುವಾದ ತಪ್ಪು ಮಾಡಿ ಪರೀಕ್ಷೆಯನ್ನೇ ಮರು ಪರೀಕ್ಷೆ ನಡೆಸಲು ನಿರ್ಧರಿಸಿತ್ತು.












Click it and Unblock the Notifications