Get Updates
Get notified of breaking news, exclusive insights, and must-see stories!

Leopard in Nelamangala: ನೆಲಮಂಗಲದ ಮಂಜುನಾಥ್ ಎಂಬುವವರ ಜಮೀನಿನಲ್ಲಿ ಚಿರತೆ ಪತ್ತೆ

ಬೆಂಗಳೂರು ಜನವರಿ 17: ಬೆಂಗಳೂರಿನಲ್ಲಿ ಚಿರತೆ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಇಂದು ಒಂದು ಪ್ರದೇಶದಲ್ಲಿ ಕಾಣಿಸಿಕೊಂಡ ಚಿರತೆ ಮತ್ತೊಂದು ದಿನ ಇನ್ಯಾವುದೋ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಇದನ್ನು ಪತ್ತೆ ಮಾಡುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕಳೆದ ದಿನ ನೆಲಮಂಗಲದಲ್ಲಿ ಚಿರತೆ ದೃಶ್ಯ ಸೆರೆಯಾಗಿದೆ.

ಹೌದು.. ಕಳೆದ ದಿನ ರಾತ್ರಿ ನೆಲಮಂಗಲದ ಮಂಜುನಾಥ್ ಎಂಬುವವರ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಸಿಸಿಟಿವಿಯಲ್ಲಿ ಚಿರತೆ ದೃಶ್ಯ ಸೆರೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಮಧ್ಯರಾತ್ರಿ ಮಂಜುನಾಥ್ ಎಂಬುವವರ ಜಮೀನಿನಲ್ಲಿ ಚಿರತೆ ಚಲನವಲನ ಕಂಡು ಬಂದಿದೆ. ಆದರೆ ಈ ಚಿರತೆಯಿಂದ ಯಾವುದೇ ಹಾನಿಯಾಗಿಲ್ಲ. ಚಿರತೆ ಕಾಣಿಸಿಕೊಂಡಾಗಿನಿಂದಲೂ ಜನ ನಿದ್ದೆಗೆಡುವಂತಾಗಿದೆ. ಮನೆಯಿಂದ ಹೊರಬರಲು ಭಯಪಡುವಂತಾಗಿದೆ.

leopard was found in bangalore nelamangala

ಬನಶಂಕರಿಯಲ್ಲಿ ಚಿರತೆ ಪ್ರತ್ಯಕ್ಷ

ಇನ್ನೂ ಇತ್ತೀಚೆಗೆ ಬೆಂಗಳೂರಿನ ಬನಶಂಕರಿಯಲ್ಲಿ ಚಿರತೆ ಹಾಗೂ ಅದರ ಮರಿಗಳ ಓಟಾಟದ ದೃಶ್ಯ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಬನಶಂಕರಿಯ ಆರನೇ ಹಂತದ ಮೊದಲೇ ಬ್ಲಾಕ್‌ನ ತುರಹಳ್ಳಿ ಫಾರೆಸ್ಟ್ ಬಳಿ ತಾಯಿ ಮತ್ತು ಮರಿ ಚಿರತೆ ಪ್ರತ್ಯಕ್ಷವಾಗಿದೆ. ಇವುಗಳು ಈಗಾಗಲೇ ಹತ್ತಕ್ಕೂ ಹೆಚ್ಚು ನಾಯಿ, ಮೇಕೆ, ಕುರಿಯನ್ನು ಕೊಂದು ಹಾಕಿದೆ ಎಂದು ಸ್ಥಳಿಯರು ಆರೋಪ ಮಾಡಿದ್ದಾರೆ. ಈ ಹಿಂದೆ ಬಿಎಂಟಿಸಿ ಬಸ್‌ ಚಾಲಕನ ಮೇಲೆ ಚಿರತೆ ದಾಳಿ ಮಾಡಿದ ವರದಿಯಾಗಿತ್ತು. ಹೀಗಾಗಿ ಸಂಜೆ ರಾತ್ರಿಯಾದರೆ ಸಾಕು ಜನ ಹೊರಬರಲು ಭಯಪಡುತ್ತಿದ್ದಾರೆ.

ಅಷ್ಟೇ ಅಲ್ಲದೆ ಮಕ್ಕಳು, ವಯಸ್ಸಾದವರು ಹಾಗೂ ಕೆಲಸದಿಂದ ಮನೆಗೆ ತೆರಳುವ ಉದ್ಯೋಗಿಗಳು ಹಗಲು ಹೊತ್ತಿನಲ್ಲಿ ಓಡಾಡಲು ಅಂಜುತ್ತಿದ್ದಾರೆ. ಆಟೋ ಚಾಲಕರು ಹಾಗೂ ಡೆಲಿವರಿ ಬಾಯ್ಸ್, ಕ್ಯಾಬ್ ಡ್ರೈವರ್ಸ್ ಸಂಜೆ ವೇಳೆ ಈ ಪ್ರದೇಶದಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ.

ಚಿರತೆಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದನ್ನು ಆಧರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಮುಜಾಗೃತಾ ಕ್ರಮವಾಗಿ ಎಚ್ಚರಿಕೆಯನ್ನು ವಹಿಸಿದ್ದಾರೆ. ಚಿರತೆ ಅಥವಾ ಅದರ ಮಕ್ಕಳಿಗೆ ಸಾರ್ವಜನಿಕರು ಯಾವುದೇ ತೊಂದರೆಯನ್ನು ಕೊಡಬಾರದು. ಭಯಕ್ಕೆ ಅದರ ಮೇಲೆ ಕಲ್ಲು ಮುಂತಾದವುಗಳನ್ನು ಎಸೆಯುವುದನ್ನು ಮಾಡಿದರೆ, ಅದನ್ನು ಪ್ರಚೋದಿಸಿದಂತಾಗುತ್ತದೆ. ಅದರ ಪಾಡಿಗೆ ಅದನ್ನು ಬಿಟ್ಟರೆ, ಅದು ಅರಣ್ಯಕ್ಕೆ ವಾಪಸ್ ಹೋಗುತ್ತದೆ ಎಂದು ಅಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಚಿರತೆ

ಇನ್ನೂ ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸ್ಥಗಿತಗೊಳಿಸಿದೆ. ಕಳೆದ ಹತ್ತು ದಿನಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಚಿರತೆ ಮಾತ್ರ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. ಡ್ರೋನ್ ಕ್ಯಾಮೆರಾ, ಕ್ಯಾಮೆರಾ ಟ್ರ್ಯಾಪ್, ಕ್ಯಾಂಪಸ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾ ಹಾಗೂ ಕೂಂಬಿಂಗ್ ಸಮಯದಲ್ಲಿ ಚಿರತೆಯ ಯಾವುದೇ ಚಲನವಲನ ಕಂಡು ಬಂದಿಲ್ಲ. ಹೀಗಾಗಿ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಚಿರತೆ ಸೆರೆ ಕಾರ್ಯಾಚರಣೆಗಾಗಿ ಮೈಸೂರು ಪ್ರಾದೇಶಿಕ ವಿಭಾಗದ ಒಟ್ಟು 70 ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಚಿರತೆ ಕಾರ್ಯ ಪಡೆ, ಆನೆ ಕಾರ್ಯ ಪಡೆ ಸಿಬ್ಬಂದಿ ಹಾಗೂ 70 ಇನ್ಫೋಸಿಸ್‌ ಸಿಬ್ಬಂದಿಗಳನ್ನು ಒಳಗೊಂಡ 12 ಜಂಟಿ ತಂಡಗಳನ್ನು ರಚಿಸಲಾಗಿತ್ತು. ಈ ತಂಡವು ಕೂಂಬಿಂಗ್‌ ಕಮ್‌ ಡ್ರೈವಿಂಗ್‌ ಆಪರೇಷನ್‌ ಕೈಗೊಂಡು ಚಿರತೆ ಪತ್ತೆಗೆ ಶ್ರಮಿಸಿತ್ತು. ಆದರೆ ಚಿರತೆ ಚಲನವಲನವಾಗಲಿ, ಹೆಜ್ಜೆ ಗುರುತು ಆಗಲಿ ಅಥವಾ ಯಾವುದೇ ರೀತಿಯ ಕುರುಹುಗಳು ಪತ್ತೆಯಾಗಿಲ್ಲ. ಡಿಸೆಂಬರ್ 31ರಂದು ಕಾಣಿಸಿಕೊಂಡ ಚಿರತೆ ಈವರೆಗೂ ಹಿಡಿಯಲಾಗಿಲ್ಲ. ಹೀಗಾಗಿ ಸ್ಥಳೀಯರಲ್ಲಿ ಹಾಗೂ ಉದ್ಯೋಗಿಗಳಲ್ಲಿ ಆತಂಕ ಹೆಚ್ಚಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+