MP Prajwal Revanna Disqualified: ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್; ಸಂಸದ ಸ್ಥಾನದಿಂದ ಅನರ್ಹ: ಹೈಕೋರ್ಟ್‌ ಆದೇಶ

ಬೆಂಗಳೂರು,ಸೆಪ್ಟೆಂಬರ್‌ 01: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಗೆ ಬಿಗ್‌ ಶಾಕ್‌ ಎದುರಾಗಿದ್ದು, ಚುನಾವಣಾ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಸಲ್ಲಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿ ಹೈಕೋರ್ಟ್‌ ಆದೇಶ ಹೊರಡಿದಿದೆ.

ಸಂಸದ ಪ್ರಜ್ವಲ್‌ ರೇವಣ್ಣ‌ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ವಿವರವನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ ಎಂದು ವಕೀಲ ಹಾಗೂ ಕೆಡಿಪಿ ಮಾಜಿ ಸದಸ್ಯ ಜಿ.ದೇವರಾಜೇಗೌಡ ಆರೋಪಿಸಿ 2019ರಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಪ್ರಜ್ವಲ್‌ ರೇವಣ್ಣ ಪ್ರಮಾಣ ಪತ್ರದಲ್ಲಿ ಹಲವಾರು ಸುಳ್ಳು ಮಾಹಿತಿಗಳನ್ನು ನೀಡಿದ್ದು ಅವರ ನಾಮಪತ್ರ ರದ್ದುಗೊಳಿಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿತ್ತು. ಈ ಕುರಿತು ಮಾಹಿತಿ ಕಲೆ ಹಾಕುವಂತೆ ರಾಜ್ಯ ಚುನಾವಣಾ ಆಯೋಗವು ಹಾಸನ ಜಿಲ್ಲಾ ಚುನಾವಣಾಧಿಕಾರಿಗೆ ಸೂಚನೆ ನೀಡಿತ್ತು.

Ktaka High Court Disqualifies Hassans MP Prajwal Revanna in Election Malpractice Case

2019ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಪ್ರಜ್ವಲ್‌ ರೇವಣ್ಣ ಸ್ಪರ್ಧೆ ಮಾಡಿದ್ದು, ಈ ವೇಳೆ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ದೂರು ನೀಡಲಾಗಿತ್ತು. ಈ ಬಗ್ಗೆ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಿದ್ದು, ಹಲವು ವಿಚಾರಣೆಗಳನ್ನು ನಡೆಸಲಾಗಿತ್ತು.

ಅಲ್ಲದೇ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಬೇಕು ಎಂದು ಅಂದಿನ ಸೋತ ಅಭ್ಯರ್ಥಿ ಎ. ಮಂಜು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಆದರೆ, ಇನ್ನೇನು ಲೋಕಸಭಾ ಚುನಾವಣೆಗೆ 6 ತಿಂಗಳು ಬಾಕಿ ಇರುವ ವೇಳೆ ಸಂಸದ ಪ್ರಜ್ವಲ್‌ ರೇವಣ್ಣ ಅವರ ಸಂಸದ ಸ್ಥಾನ ಹೈಕೋರ್ಟ್‌ ಅನರ್ಹಗೊಳಿಸಿ ಆದೇಶ ಹೊರಡಿಸಿದೆ.

2019ರಲ್ಲಿ ಪಜ್ವಲ್ ಆಸ್ತಿ ವಿವರ ಎಷು ಗೊತ್ತಾ?

2019ರ ಲೋಕಸಭೆ ಚುನಾವಣೆಗೆ ಪ್ರಜ್ವಲ್ ರೇವಣ್ಣ ತಮ್ಮ ಆಸ್ತಿ ವಿವರ ಸಲ್ಲಿಕೆ ಮಾಡಿದ್ದು, ಈ ವೇಳೆ ಪ್ರಜ್ವಲ್‌ ಒಟ್ಟು ಆಸ್ತಿ 8,13,622 ಆಗಿದ್ದು, ಇದರಲ್ಲಿ 4,89,15,029 ಮೌಲ್ಯದ ಸ್ಥಿರಾಸ್ತಿ, .1,68,86,632 ಮೌಲ್ಯದ ಚರಾಸ್ತಿಗಳೂ ಸೇರಿವೆ.

ಪ್ರಜ್ವಲ್‌ ಅವರು .3.72 ಕೋಟಿ ಖಾಸಗಿ ಸಾಲವನ್ನೂ ಮಾಡಿಕೊಂಡಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ತಂದೆ ರೇವಣ್ಣ, ತಾಯಿ ಭವಾನಿ, ಅನಸೂಯ, ಸಿ.ಎನ್‌. ಪಾಂಡು, ಸಿ.ಎನ್‌. ಪುಟ್ಟಸ್ವಾಮಿಗೌಡ, ಜಯರಾಂ, ಡಿ.ಕೆ.ನಾಗರಾಜ್‌, ಕಾಳೇಗೌಡ, ಬೋರೇಗೌಡ, ಶೈಲ ಅವರಿಂದ ಈ ಸಾಲ ಪಡೆದಿದ್ದಾರೆ.

ಇನ್ನೂ ಪ್ರಜ್ವಲ್‌ ರೇವಣ್ಣ ಹೆಸರಲ್ಲಿ ಒಟ್ಟು 36 ಎಕರೆ ಕೃಷಿ ಭೂಮಿಯನ್ನ ಹೊಂದಿದ್ದು, ಬ್ಯಾಂಕ್‌ ಖಾತೆಗಳಲ್ಲಿ ಒಟ್ಟು .15.58 ಲಕ್ಷ ನಗದೂ ಇದೆ. ಒಟ್ಟು .37.31 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನೂ ಅವರು ಹೊಂದಿದ್ದಾರೆ. 18 ಹಸುಗಳು, 2 ಎತ್ತುಗಳನ್ನೂ ಪ್ರಜ್ವಲ್‌ ಸಾಕಿಕೊಂಡಿದ್ದಾರೆ.

ಆರು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ: ಖ್ಯಾತ ವಕೀಲೆ ಪ್ರಮೀಳ ನೇಸರ್ಗಿ ಹೇಳಿಕೆ

ಇನ್ನೂ ಸಂಸದ ಸ್ಥಾನದಿಂಧ ಪ್ರಜ್ವಲ್‌ ರೇವಣ್ಣ ಅವರು ಅನರ್ಹಗೊಂಡಿದ್ದು, ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಖ್ಯಾತ ವಕೀಲೆ ಪ್ರಮೀಳ ನೇಸರ್ಗಿ (ಅರ್ಜಿದಾರರ ಪರ ವಕೀಲರು) ಹೇಳಿಕೆ ನೀಡಿದ್ದಾರೆ. ಪ್ರಜ್ವಲ್‌ ರೇವಣ್ಣ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಪ್ರಜ್ವಲ್ ರೇವಣ್ಣ ಕೂಡಾ ಎ.ಮಂಜು ವಿರುದ್ದ ದೂರು ಸಲ್ಲಿಸಿದ್ದರು. ಪ್ರಜ್ವಲ್ ಮತ್ತು ಮಂಜು ಇಬ್ಬರೂ ಆರು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ತಿಳಿದು ಬಂದಿದೆ.

ಹಾಸನ ಜಿಲ್ಲಾಧಿಕಾರಿಗಳು ನೀಡಿದ್ದ ವರದಿ ಏನು?

ಇನ್ನೂ ಈ ಪ್ರಕರಣದ ಬಗ್ಗೆ ವರದಿ ನೀಡಿದ್ದ ಅಂದಿನ ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫಾನ್ಸಿಸ್ ಅವರು ಕೂಡ ಈ ಕೇಸ್​ ಆದಾಯ ತೆರಿಗೆ ಇಲಾಖೆ ತನಿಖೆಗೆ ಸೂಕ್ತ ಎಂದು ವರದಿ ನೀಡಿದ್ದ ಪರಿಣಾಮ ಪ್ರಕರಣ ಹೈಕೋರ್ಟ್​ ಮೆಟ್ಟಿಲೇರಿತ್ತು.

2019 ರ ಚುನಾವಣೆಯ ಫಲಿತಾಂಶ ಏನಾಗಿತ್ತು?

2019 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಹಾಸನ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಪ್ರಜ್ವಲ್​ ರೇವಣ್ಣ ಅವರು ಚುನಾವಣೆಯಲ್ಲಿ 6,76,606 ಮತಗಳು ಪಡೆದಿದ್ದರು. ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಎ ಮಂಜು ಅವರು 5,35,282 ಮತಗಳನ್ನು ಪಡೆದುಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+