KPSC: ಉಗ್ರ ಹೋರಾಟ ಉಂಟು ಎಂದ ಕರವೇ, ಏನದು ?
ಕರ್ನಾಟಕ ಹಾಗೂ ಕನ್ನಡ ವಿಷಯ ಬಂದರೆ ಸದಾ ಮುಂದೆ ನಿಲ್ಲುವ ಕರವೇ ಇದೀಗ ಕನ್ನಡಿಗರ ಪರವಾಗಿ ಉಗ್ರರ ಹೋರಾಟ ಮಾಡಲು ಮುಂದಾಗಿದೆ. ಕರ್ನಾಟಕ ರಕ್ಷಣ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ ಅವರು ಕನ್ನಡಿಗರ ಪರವಾಗಿ ಇದೀಗ ಮತ್ತೊಂದು ಹೋರಾಟ ಮಾಡಲು ವೇದಿಕೆ ಸಿದ್ಧಪಡಿಸಿದ್ದಾರೆ. ಕನ್ನಡಿಗ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ, ಇದೀಗ ಕರವೇ ಸೆಪ್ಟಂಬರ್ 2ರಂದು ಅಂದರೆ, ನಾಳೆ ಬೃಹತ್ ಹೋರಾಟ ಮಾಡುವುಕ್ಕೆ ವೇದಿಕೆ ಸಿದ್ಧಪಡಿಸಿಕೊಂಡಿದೆ.
ಕನ್ನಡಿಗರಿಗೆ ಕೆಪಿಎಸ್‌ಸಿಯಲ್ಲಿ ಆಗಿರುವ ಮಹಾ ಮೋಸಕ್ಕೆ ಆಕ್ರೋ ವ್ಯಕ್ತಪಡಿಸಿರುವ ಕರವೇ ಇದೀಗ ಸೆಪ್ಟೆಂಬರ್ 2ರಂದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಕನ್ನಡಿಗರು ಪಾಲ್ಗೊಳ್ಳಲು ಕರೆ ನೀಡಲಾಗಿದೆ. ಉದ್ದೇಶ ಪೂರ್ವಕವಾಗಿ ಪ್ರಶ್ನೆಗಳನ್ನು ತಪ್ಪು ತಪ್ಪಾಗಿ ನೀಡಿ, ಕನ್ನಡದ ಅಭ್ಯರ್ಥಿಗಳ ಬೆನ್ನಿಗೆ ಇರಿಯಲಾಗಿದೆ. ಓಡಿ ಹೋಗಬೇಡಿ, ಅಲ್ಲೇ ಇರಿ ಎನ್ನುವ ಘೋಷಾ ವಾಕ್ಯಗಳೊಂದಿಗೆ ನಾಳೆ ನಡೆಯಲಿರುವ ಹೋರಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟದ ಮುನ್ಸೂಚನೆ ನೀಡಿದೆ.

ಆ ಅಧಿಕಾರಿಯೇ ಟಾರ್ಗೆಟ್
ರಾಜ್ಯದ್ವೇಷಿ, ಕನ್ನಡ ದ್ವೇಷಿ, ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರನ ಬಗ್ಗೆ ಕರವೇ ಕೆಂಡಕಾರಿದೆ. ಇದಕ್ಕೆ ಪರೀಕ್ಷೆಯಲ್ಲಿ ಆಗಿರುವ ಲೋಪಗಳ ಬಗ್ಗೆ ಕನ್ನಡದ ಅಭ್ಯರ್ಥಿಗಳು ಮಾಡಿದ ಟ್ವೀಟ್ ಗಳಿಗೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ನಂತರ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು. ಈ ಟ್ವೀಟ್ ಗೆ ಕನ್ನಡಪರ ಸಂಘಟನೆಗಳಷ್ಟೇ ಅಲ್ಲದೇ. ಸಾರ್ವಜನಿಕ ವಲಯದಿಂದಲೂ ಆಕ್ಷೇಪಣೆಗಳು ಕೇಳಿ ಬಂದಿತ್ತು.
ಗ್ಯಾಜೇಂದ್ರ ಮಾಡಿದ ಟ್ವೀಟ್ ಏನು ?
ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರ ಮಾಡಿದ ಟ್ವೀಟ್ ಕನ್ನಡಿಗರನ್ನು ಕೆರಳಿಸಿದೆ. ಕೆಪಿಎಸ್‌ಸಿ ಪರೀಕ್ಷೆ ಗೊಂದಲ ಹಾಗೂ ಸಮಸ್ಯೆಗಳ ಬಗ್ಗೆ ಕನ್ನಡಿಗರು ಅಳಲು ತೋಡಿಕೊಂಡಾಗ ಗ್ಯಾನೇಂದ್ರ ಕನ್ನಡಿಗರ ಅಳಲಿಗೆ ವ್ಯಂಗ್ಯವಾಡಿದ್ದರು. ವೈಯಕ್ತಿವಾಗಿ ಈ ಕಾಮೆಂಟ್ ಹಾಗೂ ಮೇಮ್ಸ್‌ಗಳನ್ನು ನಾನು ಎಂಜಾಯ್ (ಲವ್) ಮಾಡುತ್ತೇನೆ. ಸ್ಮಾರ್ಟ್ ಹಾಗೂ ಪರೀಕ್ಷೆಗೆ ಪರಿಶ್ರಮ ಹಾಕಿ ಓದಿರುವ ಅಭ್ಯರ್ಥಿಗಳು ಖಂಡಿತವಾಗಿಯೂ ಈ ಪರೀಕ್ಷೆಯನ್ನು ಎಂಜಾಯ್ ಮಾಡಿರುತ್ತಾರೆ ಎಂದು ಗ್ಯಾಜೇಂದ್ರ ಟ್ವೀಟ್ ಮಾಡಿದ್ದು, ಇದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ಟ್ವೀಟ್ ಡಿಲೀಟ್ ಮಾಡಿದ್ದರು.

ನ್ಯಾಯ ಕೇಳಿದ ಕನ್ನಡಿಗರನ್ನೇ ಅಣಕಿಸಿದ ನಾರ್ಥಿ!
ಕನ್ನಡಿಗರು ಕನ್ನಡ ನೆಲದಲ್ಲಿ ನ್ಯಾಯ ಕೇಳಿದರೆ, ಕನ್ನಡಿಗರನ್ನೇ ಈ ನಾರ್ಥಿ ಅಣಕಿಸಿದ್ದಾನೆ ಎಂದು ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕನ ವಿರುದ್ಧ ಕರವೇ ಆಕ್ರೋಶ ಹೊರಹಾಕಿದೆ. ನ್ಯಾಯ ಕೇಳಿದ ಕನ್ನಡಿಗರನ್ನೇ ಅಣಕಿಸುವ ಕೆಪಿಎಸ್‌ಸಿಯ ನಾರ್ಥಿ ಪರೀಕ್ಷಾ ನಿಯಂತ್ರಕನೇ ಗಂಟುಮೂಟೆ ಕಟ್ಟು ಎಂದು ಕರವೇ ಎಚ್ಚರಿಸಿದೆ.
ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗವು ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿದೆ ಎಂದು ಕರವೇ ಅನುಮಾನ ವ್ಯಕ್ತಪಡಿಸಿದೆ. ಕನ್ನಡಿಗರಿಗೆ ಅನ್ಯಾಯ ಮಾಡುವ ಉದ್ದೇಶದಿಂದಲೇ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಭಾರೀ ತಪ್ಪುಗಳನ್ನು ಮಾಡಿರುವುದು ಕಂಡುಬರುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿ ಒಂದೆರಡು ತಪ್ಪುಗಳಾಗಿದರೆ, ಕಣ್ತಪ್ಪಿನಿಂದ ತಪ್ಪಾಗಿದೆ ಎನ್ನಬಹುದಿತ್ತು. 120 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ 60 ಪ್ರಶ್ನೆಗಳು ತಪ್ಪಾಗಿಸಲಾಗಿದೆ. ಇದರ ಅರ್ಥ ಉದ್ದೇಶ ಪೂರ್ವಕವೇ ಎಂದು ಕರವೇ ಪ್ರಶ್ನೆ ಮಾಡಿದೆ.












Click it and Unblock the Notifications