ಬಿಜಿಎಂಎಲ್ ಪುನಶ್ಚೇತನಕ್ಕೆ ತಯಾರಿ ಆರಂಭ
ನವದೆಹಲಿ, ಜ.17- ಕೋಲಾರದ ಜನತೆಗೆ ಕೊನೆಗೂ ಶುಭಸುದ್ದಿ ಬಂದಿದೆ. ಕಳೆದ 13 ವರ್ಷಗಳಿಂದ ಸ್ಥಗಿತಗೊಂಡಿರುವ ಕೋಲಾರ ಚಿನ್ನದ ಗಣಿಯನ್ನು (BGML) ಪುನಃಶ್ಚೇತನಗೊಳಿಸುವ ಸಲುವಾಗಿ ಕೇಂದ್ರ ಸರಕಾರವು ಗುರುವಾರ ಅಧಿಕೃತ ಒಪ್ಪಂದ ಮಾಡಿಕೊಂಡಿದೆ.
ಈ ನಿಟ್ಟಿನಲ್ಲಿ ಕೇಂದ್ರವು ಮಿನರಲ್ ಎಕ್ಸಪ್ಲೊರೇಶನ್ ಕಾರ್ಪೊರೇಶನ್ ಲಿಮಿಟೆಡ್ (Mineral Exploration Corporation Ltd -MECL) ಸಂಸ್ಥೆಗೆ ಅಧಿಕಾರ ನೀಡಿದ್ದು, ಪುನಃಶ್ಚೇತನ ಹಾದಿಯನ್ನು ಸಮರ್ಪಕವಾಗಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದೆ. ( ಅಣುವಿಷದಿಂದ ಕಂಗಾಲಾಗಿದ್ದ ಕೆಜಿಎಫ್ ಗೆ ಚಿನ್ನದಂತ ಸುದ್ದಿ )

ಬಿಜಿಎಂಎಲ್ ಪುನಃಶ್ಚೇತನಕ್ಕಾಗಿ ಜಾಗತಿಕ ಬಿಡ್ ಪ್ರಕ್ರಿಯೆಗೆ ನೋಡಲ್ ಏಜೆನ್ಸಿಯಾಗಿರುವ MECON Ltd ಸಂಸ್ಥೆಯ ಅಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕ ಎಕೆ ತ್ಯಾಗಿ ಅವರೂ ಸಹ ೀ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜತೆಗೆ ಗಣಿ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications