ಕೆಂಪೇಗೌಡ ಪ್ರತಿಮೆ ನಿರ್ಮಾಣ: ಒಕ್ಕಲಿಗರ ಓಲೈಕೆಗೆ ಮುಂದಾಯಿತೇ ಬಿಜೆಪಿ?
ಬೆಂಗಳೂರು, ನವೆಂಬರ್ 10: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಹುಸಂಖ್ಯಾತರಿರುವ ಜಾತಿ ಸಮುದಾಯಗಳ ಮತಗಳ ಪ್ರಭಾವ ಹೆಚ್ಚಿದೆ. ಈ ನಿಟ್ಟಿನಲ್ಲಿ ವರ್ಷಗಳಿಂದಲೂ ಕಬ್ಬಿಣದ ಕಡಲೆಯಾಗಿರುವ ಒಕ್ಕಲಿಗರ ಮತಗಳನ್ನು ಸೆಳೆಯುವಲ್ಲಿ ಬಿಜೆಪಿ ಯತ್ನಿಸುತ್ತಲೇ ಇದೆ. ಅದಕ್ಕೆಂದೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಿಸಿ, ಅದ್ಧೂರಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಕರ್ನಾಟಕವು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿದ್ದು, ಕೆಲವೇ ತಿಂಗಳಲ್ಲಿ ಚುನಾವಣೆ ಎದುರಾಗಲಿದೆ. ಎಲ್ಲ ರಾಜಕೀಯ ಪಕ್ಷಗಳು ಈಗಾಗಲೇ ಪಾದಯಾತ್ರೆ, ಬೃಹತ್ ಸಮಾರಂಭದಲ್ಲಿ ತೊಡಗಿವೆ. ಕೇವಲ ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನೇ ಹೆಚ್ಚು ಬೆಂಬಲಿಸುವ ಒಕ್ಕಲಿಗ ಸಮುದಾಯವನ್ನು(ರಾಜ್ಯದ ಒಟ್ಟು ಜನಸಂಖ್ಯೆ ಪೈಕಿ ಶೇ. 16ರಷ್ಟು) ತನ್ನತ್ತ ಸೆಳೆಯಲು ಬಿಜೆಪಿ ಮುಂದಾಗಿದೆ.
ಒಂದು ವೇಳೆ ಈ ಪ್ರಯತ್ನ ಯಶಸ್ವಿಯಾದರೆ ಬೃಹತ್ ಸಮುದಾಯದ ಜನರ ಮತಗಳು ತನ್ನ ಪಾಲಾಗುವ ಜೊತೆಗೆ ಎದುರಾಳಿ ಪಕ್ಷಗಳಿಗೆ ತಕ್ಕ ಪಾಠವನ್ನು ಕಲಿಸಿದಂತಾಗುತ್ತದೆ ಎಂಬ ತವಕದಲ್ಲಿ ಬಿಜೆಪಿ ಇದೆ. ಇವೆಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡೆ ಬಿಜೆಪಿಯು ಒಕ್ಕಲಿಗರ ಸಮುದಾಯದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಬಿಜೆಪಿ ಒಕ್ಕಲಿಗರ ಅಸ್ಮಿತೆ ರಾಜಕಾರಣ ಆರಂಭಿಸಿದೆ. ಈ ಕಾರಣಕ್ಕೆ 'ಪ್ರಗತಿ ಪ್ರತಿಮೆ' ಕಾಮಗಾರಿಯ ಎಲ್ಲ ಮೇಲ್ವೀಚಾರಣೆ ಮತ್ತು ಉಸ್ತುವಾರಿಯನ್ನು ಸ್ವಪಕ್ಷದ ಒಕ್ಕಲಿಗ ಮುಖಂಡನಿಗೇ ವಹಿಸಿದೆ ಎಂಬ ಚರ್ಚೆಗಳು ರಾಜಕೀಯ ಅಂಗಳದಲ್ಲಿ ಈಗ ಶುರುವಾಗಿದೆ.

ಹಳೆ ಮೈಸೂರು ಭಾಗದಲ್ಲಿ ನೆಲೆ ಕಾಣಲು ಯತ್ನ
ಅಂಕಿ ಅಂಶಗಳ ಪ್ರಕಾರ, ರಾಜಧಾನಿ ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಸಮುದಾಯಗಳು ಹೆಚ್ಚು ಕಂಡು ಬರುತ್ತವೆ. ಈ ಭಾಗದಲ್ಲಿ ಹಿಂದಿನಿಂದಲೂ ಜೆಡಿಎಸ್, ಕಾಂಗ್ರೆಸ್ ಪಕ್ಷಗಳದ್ದೆ ಅಧಿಕಾರ ದರ್ಬಾರು ನಡೆದುಕೊಂಡು ಬಂದಿದೆ. ಅಲ್ಲಿ ನೆಲೆಯೂರಲೂ ಬಿಜೆಪಿ ಯತ್ನಿಸುತ್ತಲೇ ಇದ್ದರೂ ನಿರೀಕ್ಷೆಯಷ್ಟು ಯಶಸ್ವಿಯಾಗಿಲ್ಲ ಎನ್ನಲಾಗಿದೆ.

ಒಕ್ಕಲಿಗರನ್ನು ಸೆಳೆಯುವ ಯತ್ನ ನಿರಂತರ
ಜಾತಿ ರಾಜಕಾರಣ ಕರ್ನಾಟಕದಲ್ಲಿ ಅಷ್ಟೇ ಅಲ್ಲ ಬೇರೆ ರಾಜ್ಯಗಳಲ್ಲೂ ಇದೆ. ಅದೇ ರೀತಿ ಲಿಂಗಾಯತ ಸಮುದಾಯವು ತಮ್ಮ ನಾಯಕರನ್ನು ಬೆಂಬಲಿಸುವಂತೆ, ಒಕ್ಕಲಿಗರು ತಮ್ಮವರನ್ನು ಬೆಂಬಲಿಸುತ್ತಾರೆ. ಇತ್ತ ಬಿಜೆಪಿಯಲ್ಲಿ ಒಕ್ಕಲಿಗರಾದ ಕಂದಾಯ ಸಚಿವ ಆರ್.ಅಶೋಕ್, ಬಿಡಿಎ ಅಧ್ಯಕ್ಷರು ಆದ ಶಾಸಕ ಎಸ್.ಆರ್. ವಿಶ್ವನಾಥ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಇದ್ದಾರೆ. ಹೀಗಿದ್ದರೂ ನಿರೀಕ್ಷೆಯಷ್ಟು ಒಕ್ಕಲಿಗ ಸಮುದಾಯವನ್ನು ಸೆಳೆಯಲಾಗುತ್ತಿಲ್ಲ ಎಂಬ ಕೊರಗು ಬಿಜೆಪಿಗೆ ಇರಬಹುದು. ಈ ಕಾರಣಕ್ಕೆ ಬೃಹತ್ತಾದ ಕೆಂಪೇಗೌಡರ ಪ್ರತಿಮೆ ತಲೆಎತ್ತಿದೆ.
2023ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಕೆಂಪೇಗೌಡರ 108ಅಡಿ ಎತ್ತರ ಪ್ರತಿಮೆ ನಾಳೆ ನವೆಂಬರ್ 11ರಂದು ಲೋಕಾರ್ಪಣೆಗೊಳ್ಳಲಿದೆ. ಇದು ಎಷ್ಟರ ಮಟ್ಟಿಗೆ ವಿಪಕ್ಷಗಳಿಗೆ ಸಮಸ್ಯೆ ತಂದೊಡ್ಡುವ ಜೊತೆಗೆ ಬಿಜೆಪಿಗೆ ವರದಾನವಾಗಲಿದೆ ಎಂದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.

ಬಿಜೆಪಿಯಲ್ಲಿ ಅಶ್ವಥ್ ನಾರಾಯಣರಿಗೆ ಒಕ್ಕಲಿಗ ನಾಯಕನ ಪಟ್ಟ?
ಬಿಜೆಪಿ ಪಕ್ಷದಲ್ಲಿ ಒಕ್ಕಲಿಗ ಸಮುದಾಯದ ನಾಯಕರ ಪೈಕಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ್ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಮೂಲಕ ಒಕ್ಕಲಿಗರ ಪ್ರಮುಖ ನಾಯಕರಾಗಿ ಹೊರ ಹೊಮ್ಮುವ ತುರಾತುರಿಯಲ್ಲಿದ್ದಾರೆ. ಪ್ರಭಾವಿ ರಾಜಕಾರಣಿಗಳ ಸಾಲಿನಲ್ಲಿರುವ ಅಶ್ವಥ್ ನಾರಾಯಣ್ ಸಮುದಾಯದ ಮುಂಚೂಣಿ ನಾಯಕರು ಎಂದು ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಮಲ್ಲೇಶ್ವರಂ ಕ್ಷೇತ್ರದ ಜನರು ಹೇಳುತ್ತಿದ್ದಾರೆ. ಕೆಂಪೇಗೌಡರ ಪ್ರತಿಮೆ ನಿರ್ಮಾಣ, ರಾಜ್ಯಾದ್ಯಂತ ಮಣ್ಣು ಸಂಗ್ರಹದ ಅಭಿಯಾನ ಇನ್ನಿತರ ಅವರ ಕಾರ್ಯಚಟುವಟಿಕೆ ನೋಡಿದರೆ ಜನರ ಮಾತನ್ನು ಅಲ್ಲಗಳೆಯುವಂತಿಲ್ಲ.
ಇತ್ತ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್‌ನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತವರ ಕುಟುಂಬದ ನಾಯಕರು ಒಕ್ಕಲಿಗರ ನಾಯಕರಾಗಿ ಈಗಾಗಲೇ ಗುರುತಿಸಿಕೊಂಡಿದ್ದಾರೆ.

ದೇಶಾದ್ಯಂತ ಸಮುದಾಯ ಓಲೈಕೆಗಾಗಿ ಪ್ರತಿಮೆ ನಿರ್ಮಾಣ
ಮತ ಓಲೈಕೆಗೆ ಪ್ರತಿಮೆ ನಿರ್ಮಾಣ, ಸಮುದಾಯಗಳ ಅಸ್ಮಿತೆ ರಾಜಕಾರಣ ದೇಶಾದ್ಯಂತ ನಡೆದುಕೊಂಡು ಬಂದಿದೆ. ಉದಾಹರಣೆಗೆ ಗುಜರಾತಿನಲ್ಲಿ ಪಾಟೀದಾರ್ ಸಮುದಾಯದ ಓಲೈಕೆಗಾಗಿ ಬಿಜೆಪಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 'ಐಕ್ಯತಾ ಪ್ರತಿಮೆ' ನಿರ್ಮಿಸಿದೆ. ಬಿಎಸ್‌ಪಿ ಮಾಯಾವತಿ ಉತ್ತರ ಪ್ರದೇಶದಲ್ಲಿ ದಲಿತ ಸಮುದಾಯಗಳ ಓಲೈಕೆಗಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ನಿರ್ಮಿಸಿದ್ದರು. ನಂತರ ದುಷ್ಕರ್ಮಿಗಳನ್ನು ಅದನ್ನು ಹಾನಿಗೊಳಿಸಿದ್ದರು. ಅದೇ ರೀತಿ ಮಹಾರಾಷ್ಟ್ರದಲ್ಲಿ ಶಿವಸೇನೆ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸಿತ್ತು.
ಹೀಗೆ ದೇಶದಲ್ಲಿ ಆಗಾಗ ಪ್ರತಿಮೆ ನಿರ್ಮಾಣದ ಮೂಲಕ ಆಯಾ ಸಮುದಾಯಗಳ ಓಲೈಕೆ ರಾಜಕಾರಣ ನಡೆಯುತ್ತಲೇ ಇದೆ. ಇದೀಗ ಬಿಜೆಪಿ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಿಸಿದೆ. ಇದರ ಫಲಿತಾಂಶ ಏನಾಗಿರಲಿದೆ ಎಂದು ಕಾದು ನೋಡಬೇಕಿದೆ.
-
ಸಕಲೇಶಪುರದಲ್ಲಿ ಫೋಟೋಗ್ರಾಫರ್ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications