KEA: ಡಿಸಿಇಟಿ 2025 ಅಂತಿಮ ಸುತ್ತಿನ ಸೀಟು ಹಂಚಿಕೆ, ಆಪ್ಷನ್ ಎಂಟ್ರಿಗೆ ಲಿಂಕ್ ಬಿಡುಗಡೆ
ಬೆಂಗಳೂರು, ಆಗಸ್ಟ್ 12: ಡಿಪ್ಲೋಮಾ ಸಿಇಟಿ 2025 ಪರೀಕ್ಷೆ ಬರೆದ ಬಳಿಕ ಸೀಟು ಹಂಚಿಕೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕಾರಿಗಳು ಗುಡ್‌ನ್ಯೂಸ್ ನೀಡಿದ್ದಾರೆ. ಈಗಾಗಲೇ ವಿವಿಧ ವೃತ್ತಿಪರ ಕೋರ್ಸ್‌ಗಳ ಬೈಸಿದ್ದ ಯುಜಿ ನೀಟ್ ಪರೀಕ್ಷೆ ಅಭ್ಯರ್ಥಿಗಳ ಸೀಟು ಹಂಚಿಕೆ, ಫಲಿತಾಂಶ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿವೆ. ಇದೀಗ DCET-25 ಮೂರನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಅರ್ಹ ಡಿಪ್ಲೊಮಾ ಅಭ್ಯರ್ಥಿಗಳಿಗೆ ಆಪ್ಷನ್ ಎಂಟ್ರಿಗೆ ಕೆಇಎ ಲಿಂಕ್ ಬಿಡುಗಡೆ ಮಾಡಿದೆ.
ಹೌದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ತನ್ನ ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ. ಮೂರನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಅರ್ಹರಾಗುವ ಡಿಪ್ಲೊಮಾ ಅಭ್ಯರ್ಥಿಗಳಿಗೆ ಆಪ್ಷನ್ ಎಂಟ್ರಿ ಮಾಡಬಹುದು. ಈವರೆಗೆ ಸೀಟು ಹಂಚಿಕೆಯಾಗದಿರುವವರು ಹಾಗೂ ಸೀಟು ಹಂಚಿಕೆ ನಂತರ ರದ್ದುಪಡಿಸಿಕೊಂಡವರು ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.

ಅಭ್ಯರ್ಥಿಗಳು ಆಪ್ಷನ್ಸ್ ದಾಖಲಿಸುವುದಕ್ಕೂ ಮುನ್ನ ಕಾಷನ್ ಡಿಪಾಸಿಟ್ ಕಟ್ಟುವುದು ಕಡ್ಡಾಯ. ಸಾಮಾನ್ಯ ಅಭ್ಯರ್ಥಿಗಳು ₹40,000 ಹಾಗೂ ಪರಿಶಿಷ್ಟ ಜಾತಿ/ವರ್ಗದ ಅಭ್ಯರ್ಥಿಗಳು ₹10,000 ಕಾಷನ್ ಡೆಪಾಸಿಟ್ ರೂಪದಲ್ಲಿ ಶುಲ್ಕ ಪಾವತಿಸಬೇಕು. ಸೀಟು ಹಂಚಿಕೆಯಾದರೆ ಈ ಮೊತ್ತವನ್ನು ಶುಲ್ಕದ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಆಗಸ್ಟ್ 14ರೊಳಗೆ ಕಾಷನ್ ಡಿಪಾಸಿಟ್ ಪಾವತಿಸಬೇಕಾಗುತ್ತದೆ. ಆಗಸ್ಟ್ 16ರವರೆಗೆ ಇಚ್ಛೆ/ಆಯ್ಕೆ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಆ.16ರಂದು ಸಂಜೆ 4 ನಂತರ ಹಾಗೂ ಅಂತಿಮ ಫಲಿತಾಂಶವನ್ನು ಆಗಸ್ಟ್ 18ರಂದು ಸಂಜೆ 4ರ ನಂತರ ಪ್ರಕಟಿಸಲಾಗುವುದು. ಆಗಸ್ಟ್ 12ರಂದು ದಾಖಲೆ ಪರಿಶೀಲನೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬರುವ ಅಭ್ಯರ್ಥಿಗಳು, ಅರ್ಹರಾದ ಬಳಿಕ ಕಾಷನ್ ಡಿಪಾಸಿಟ್ ಕಟ್ಟಿ, ಅವರು ಕೂಡ ಇಚ್ಛೆ/ಆಯ್ಕೆಯನ್ನು ದಾಖಲಿಸಬಹುದು.
ಆರ್ಕಿಟೆಕ್ಟರ್ ಕೋರ್ಸ್ ಪ್ರವೇಶಕ್ಕೆ ಮತ್ತು ವೃತ್ತಿನಿರತ ಅಭ್ಯರ್ಥಿಗಳಿಗೆ ಆಪ್ಷನ್ ದಾಖಲಿಸಲು ಅವಕಾಶ ನೀಡಲಾಗಿದೆ. ಇವರು ಕಾಷನ್ ಡಿಪಾಸಿಟ್ ಪಾವತಿಸುವ ಅವಶ್ಯಕತೆ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಅಂತಿಮ ಸೀಟು ಹಂಚಿಕೆ ಬಳಿಕ ಅಭ್ಯರ್ಥಿಗಳು ಪ್ರವೇಶವನ್ನು ನಿಗದಿತ ದಿನಾಂಕಗೊಳಗೆ ಮಾಡಿಕೊಳ್ಳಬೇಕಾಗುತ್ತದೆ.












Click it and Unblock the Notifications