Karnataka Cold Wave: ವಾಯುಭಾರ ಕುಸಿತ ದುರ್ಬಲ, ರಾಜ್ಯಾದ್ಯಂತ ಒಣ ಹವೆ- ಚಳಿ ಹೆಚ್ಚಳ ಮುನ್ಸೂಚನೆ
ಬೆಂಗಳೂರು, ಜನವರಿ 17: ಕರ್ನಾಟಕದಾದ್ಯಂತ ಮಳೆ ಅಬ್ಬರ ತಗ್ಗಿದೆ. ಹವಾಮಾನ ವೈಪರಿತ್ಯಗಳ ತೀವ್ರತೆ ತಣ್ಣಗಾದ ಹಿನ್ನೆಲೆ ಹಾಗೂ ಮತ್ತು ಬೇಸಿಗೆ ಸಮೀಪಿಸುತ್ತಿದೆ. ಚಳಿ ಪೂರ್ಣ ಪ್ರಮಾಣದಲ್ಲಿ ಇಳಿಕೆ ಆಗಿಲ್ಲ. ಬದಲಾದ ಹವಾಮಾನ ಸನ್ನಿವೇಶದಲ್ಲಿ ರಾಜ್ಯಾದ್ಯಂತ ತೀವ್ರ ಚಳಿ- ಮಂಜಿನ ವಾತಾವರಣ ಹಾಗೂ ಅತ್ಯಧಿಕ ಗರಿಷ್ಠ ತಾಪಮಾನ ಕಂಡು ಬರುವ ಎಲ್ಲ ಲಕ್ಷಣಗಳು ಇವೆ. ಮುಂದಿನ 5 ರಿಂದ 7 ದಿನಗಳ ಕಾಲ ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಐಎಂಡಿ ಮುನ್ಸೂಚನೆ ಪ್ರಕಾರ, ಸಮುದ್ರ ಮೇಲ್ಮೈನಲ್ಲಿ ವಾಯು ಚಂಡಮಾರುತದ ಪರಿಚಲನೆಯು ದಕ್ಷಿಣದಿಂದ ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಕೇರಳದ ಕರಾವಳಿ ಸಮುದ್ರ ಮಟ್ಟದಿಂದ 1.5 ಕಿಮೀ ಎತ್ತರದಲ್ಲಿದೆ. ಬಂಗಾಳಕೊಲ್ಲಿ, ಹಿಂದೂ ಮಹಸಾಗಾರದಲ್ಲಿ ಎದ್ದಿದ್ದ ವಾಯುಭಾರ ಕುಸಿತ ಇಳಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಮಳೆ ಸ್ವರೂಪ ಇಲ್ಲದಾಗಿದ್ದು, ಚಳಿ, ಒಣಹವೆ ನಿರ್ಮಾಣವಾಗಲಿದೆ ಎಂದು ತಿಳಿಸಿದೆ.

ರಾಜ್ಯಾದ್ಯಂತ ಒಣಹವೆ, ಚಳಿ ಹೆಚ್ಚಳ
ಕರ್ನಾಟಕದ ಕರಾವಳಿ ಭಾಗದಲ್ಲಿ ಎಂದಿನಂತೆ ಜನವರಿ ತಿಂಗಳಲ್ಲಿ ಸೆಕೆಯ ವಾತಾವರಣ ಕಂಡು ಬರುತ್ತದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಮೈಸೂರು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಚಾಮರಾಜನಗರ ಹಾಗೂ ಹಾವೇರಿ, ಗದಗ, ಕೊಪ್ಪಳ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
ವಿಶೇಷವೆಂದರೆ ರಾಜ್ಯದ ಮೇಲಿನ ಎಲ್ಲ ಜಿಲ್ಲೆಗಳಲ್ಲೂ ಚಳಿ ಪ್ರಮಾಣ ಒಂದೇ ರೀತಯಲ್ಲಿ ಇರದೇ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಬದಲಾಗುತ್ತದೆ. ಬೀದರ್, ಕೊಪ್ಪಳ, ಬೆಳಗಾವಿ, ಹಾವೇರಿ,ವಿಜಯಪುರದಲ್ಲಿ ಮುಂದಿನ ಮೂರು ದಿನ ಚಳಿಯಲ್ಲಿ ವಿಪರೀತ ಹೆಚ್ಚಳವಾಗಬಹುದು.
ಇದೇ ವೇಳೆ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಒಂದು ದಿನ ಚಳಿ ಬಿದ್ದರೆ, ಮತ್ತೊಂದು ದಿನ ಸಹಜ ವಾತಾವರಣ ಇರಲಿದೆ. ಆದರೆ ರಾಜ್ಯದ ಯಾವ ಭಾಗದಲ್ಲೂ ಮುಂದಿನ ಐದು ದಿನ ಮಳೆ ಮುನ್ಸೂಚನೆ ಇಲ್ಲ ಎಂದು ಸದ್ಯದ ಐಎಂಡಿ ವರದಿ ಮಾಹಿತಿ ನೀಡಿದೆ.
ಬೆಂಗಳೂರಲ್ಲಿ ಮಂಜು ಕವಿಯು ಮುನ್ಸೂಚನೆ
ಬೆಂಗಳೂರಿನಲ್ಲಿ ಮುಖ್ಯವಾಗಿ ಮೋಡವಿಲ್ಲದ ಸ್ವಚ್ಚ ನೀಲಿ ಆಕಾಶ ಇರಲಿದೆ. ಬೆಳಗಿನ ಸಮಯದಲ್ಲಿ ಕೆಲವು ಕಡೆಗಳಲ್ಲಿ ಮಂಜು/ದಟ್ಟಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 15°C ಇರುವ ಸಾಧ್ಯತೆ ಇದೆ ಎಂದು ಕರ್ನಾಟ ಹವಾಮಾನ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications