Karnataka Weather: ಈ 12 ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಭಾರೀ ಏರಿಕೆ.!-ಮಳೆ ಮುನ್ಸೂಚನೆ ಯಾವ್ಯಾವ ಭಾಗಗಳಿಗೆ?
Karnataka Weather: ರಾಜ್ಯದ ಕೆಲವೆಡೆ ಮಾತ್ರ ಆಗಾಗ ಮಳೆಯಾಗುತ್ತಿದೆ ಬಿಟ್ಟರೆ, ಬಹುತೇಕ ಜಿಲ್ಲೆಗಳಲ್ಲಿ ಕೆಂಡದಂತೆ ಬಿಸಿಲಿನ ವಾತಾವರಣ ನಿರ್ಮಾಣವಾಗುತ್ತಿದೆ. ಇನ್ನು ಇಂದು (ಏಪ್ರಿಲ್ 06) ಕೆಲವು ಜಿಲ್ಲೆಗಳಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಮಾಣದ ತಾಪಮಾನ ದಾಖಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
IMD ಪಕ್ರಕಾರ ಇಂದು (ಏಪ್ರಿಲ್ 06) ಮಧ್ಯಾಹ್ನ 2:30ಕ್ಕೆ ಯಾವ್ಯಾವ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಎಷ್ಟಿತ್ತು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದ ಗಮನಿಸಿ.

ಜಿಲ್ಲಾವಾರು ದಾಖಲಾದ ಗರಿಷ್ಠ ತಾಪಮಾನದ ವಿವರ
* ಕಲಬುರಗಿ - 41.8 ಡಿಗ್ರಿ ಸೆಲ್ಸಿಯಸ್
* ಬಾಗಲಕೋಟೆ - 40.8 ಡಿಗ್ರಿ ಸೆಲ್ಸಿಯಸ್
* ಕೊಪ್ಪಳ - 40.6 ಡಿಗ್ರಿ ಸೆಲ್ಸಿಯಸ್
* ಚಿತ್ರದುರ್ಗ - 39.8 ಡಿಗ್ರಿ ಸೆಲ್ಸಿಯಸ್
* ಹಾವೇರಿ - 39.7 ಡಿಗ್ರಿ ಸೆಲ್ಸಿಯಸ್
* ಬೆಂಗಳೂರು - 39.2 ಡಿಗ್ರಿ ಸೆಲ್ಸಿಯಸ್
* ದಾವಣಗೆರೆ - 39 ಡಿಗ್ರಿ ಸೆಲ್ಸಿಯಸ್
* ಚಾಮರಾಜನಗರ - 38.6 ಡಿಗ್ರಿ ಸೆಲ್ಸಿಯಸ್
* ಕೋಲಾರ - 37.7 ಡಿಗ್ರಿ ಸೆಲ್ಸಿಯಸ್
* ಮಂಡ್ಯ - 37.4 ಡಿಗ್ರಿ ಸೆಲ್ಸಿಯಸ್
* ಹಾಸನ - 36.3 ಡಿಗ್ರಿ ಸೆಲ್ಸಿಯಸ್
* ಮಂಗಳೂರು - 32.3 ಡಿಗ್ರಿ ಸೆಲ್ಸಿಯಸ್
ದೇವರ ಮೊರೆ ಹೋದ ಜನ: ಈಗಾಗಲೇ 2023ರಲ್ಲಿ ಮಳೆಯಿಲ್ಲದೆ ರಾಜ್ಯದಲ್ಲಿನ ಅನ್ನದಾತ, ಜನರು ಕಂಗಾಲಾಗಿದ್ದಾರೆ. ಇನ್ನು 2024ರ ಏಪ್ರಿಲ್ ಕಳೆದರೂ ಯಾವುದೇ ಮಳೆಯ ಮುನ್ಸೂಚನೆ ಇಲ್ಲದೆ, ಬಿಸಿಲಿನ ವಾತಾವರಣ ಮುಂದುವರೆದಿದೆ. ಇದರಿಂದ ರಾಜ್ಯದ ಜನರು ಕಂಗೆಟ್ಟು ಹೋಗಿದ್ದಾರೆ. ಇದ್ದ ಬೋರ್‌ವೆಲ್‌ಗಳು ಕೂಡ ನಿಂತುಹೋಗುವ ಹಂತವನ್ನು ತಲುಪಿದ್ದು, ಹಲವೆಡೆ ಜನರು ಮಳೆಗಾಗಿ ದೇವರ ಮೊರೆ ಹೋಗುತ್ತಿರುವ ಘಟನೆಗಳನ್ನು ನಡೆಯುತ್ತಿದೆ. ಇಂತಹದ್ದೇ ಘಟನೆ ಇದೀಗ ಕಾಫಿನಾಡು ಚಿಕ್ಕಮಗಳೂರಿಗೂ ಬಂದೊದಗಿದೆ.
ಹಿಂದೆಲ್ಲ ಮಲೆನಾಡು ಮಳೆನಾಡು ಆಗಿರುತ್ತಿತ್ತು. ಆದರೆ ಇದೀಗ ಬಿಸಿಲಿನ ನಾಡಾಗಿದ್ದು, ಕಾಫಿನಾಡಿನ ಜನರು ಬೆಳೆ ಕಳೆದುಕೊಳ್ಳವ ಆತಂಕಲ್ಲಿದ್ದಾರೆ. ಇನ್ನು ಮಲೆನಾಡಿನಲ್ಲಿ ಹತ್ತಾರು ಗ್ರಾಮಸ್ಥರು ಸೇರಿ ಮಳೆಗಾಗಿ ಮೂಡಿಗೆರೆ ತಾಲೂಕಿನ ಕೊಲ್ಲಿ ಬೈಲ್, ಹೆಸಗಲ್ ಗ್ರಾಮದ ಬಸವೇಶ್ವರ ದೇವರ ಮೊರೆ ಹೋಗಿದ್ದು, ಈ ವೇಳೆ ಜನಪ್ರತಿನಿಧಿಗಳು ಹಾಗೂ ಸ್ವಾಮೀಜಿಗಳು ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ.
ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾಮದ ಕಣಿವೆ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರೆ ಮಳೆ ಆಗುವ ನಂಬಿಕೆ ಇಲ್ಲಿನ ಜನರದ್ದಾಗಿದೆ. ಈ ಬಸವೇಶ್ವರ ವಿಗ್ರಹ ಕಾಡಿನಲ್ಲಿದ್ದು, ಬರಗಾಲ ಬಂತೆಂದರೆ ಸಾಕು ಮಲೆನಾಡಿಗರು ಈ ಜಾಗಕ್ಕೆ ಬಂದು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.
ಈಗಾಗಲೇ ಜಿಲ್ಲೆಯ ಬಹುತೇಕ ಭಾಗಗಲ್ಲಿ ಮಳೆ ಇಲ್ಲದೆ ನದಿ, ತೊರೆಗಳು ಬತ್ತಿ ಹೋಗುವ ಹಂತವನ್ನು ತಲುಪಿವೆ. ಮತ್ತೊಂದೆಡೆ ಕಾಫಿ ತೋಟಗಳು ಕೂಡ ಸೂರ್ಯನ ಶಾಖಕ್ಕೆ ಒಣಗುತ್ತಿದ್ದು, ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಕಳೆದ 15 ವರ್ಷಗಳ ಬಳಿಕ ತೀವ್ರ ಮಳೆಯ ಕೊರತೆ ಎದುರಾಗಿದ್ದರಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನೂರಾರು ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications