ನಿಶ್ಚಿತಾರ್ಥ ನೆಪ ಅಂತ್ಯ: ತನ್ನ ಬೇರುಗಳಿಂದ ಬಾಲ್ಯ ವಿವಾಹ ಪದ್ಧತಿ ಕಿತ್ತೊಗೆಯುತ್ತಿರುವ ಕರ್ನಾಟಕ
ಇತಿಹಾಸ ನಮಗೆ ಪ್ರತಿಯೊಂದು ಸಾಮಾಜಿಕ ಕ್ರಾಂತಿಯು ಒಂದು ನಿರ್ದಿಷ್ಟ ಸಮಯವನ್ನು ಹೊಂದಿದೆ ಎಂದು ಸೂಚಿಸುತ್ತದೆ. ಒಂದು ಕಡೆಗೆ ಒಂದು ದಿನ ಮುಗಿಯುತ್ತಿರುವಂತೆ ಮತ್ತೊಂದೆಡೆ ಹೊಸ ದಿನದ ಸಾಧ್ಯತೆಗಳು ಸಹ ಹುಟ್ಟಿಕೊಳ್ಳುತ್ತವೆ. ಬಾಲ್ಯ ವಿವಾಹದ ವಿರುದ್ಧ ಭಾರತದ ಹೋರಾಟದ ದಿನ, ಅದು ಅಕ್ಟೋಬರ್ 18, 2024. ಈ ದಿನದಂದು ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು (ಪಿಸಿಎಂಎ) ತಕ್ಷಣ ಜಾರಿಗೊಳಿಸುವಂತೆ ಮತ್ತು ಎಲ್ಲಾ ಮಾರ್ಗಸೂಚಿಗಳನ್ನು ಅಗತ್ಯವಾಗಿ ಅನುಸರಿಸಲೇಬೇಕೆಂದು ಭಾರತದ ಸನ್ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸೂಚನೆಯೊಂದನ್ನು ಜಾರಿಗೊಳಿಸಿತು. ಮಕ್ಕಳ ವಿರುದ್ಧದ ಈ ಅಪರಾಧಕ್ಕೆ ಒಂದು ಇತಿಶ್ರೀ ಹಾಡಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಒಂದು ದೃಢ ಕ್ರಮವನ್ನು ತೆಗೆದುಕೊಳ್ಳುವಂತೆ ತಾಕೀತು ಮಾಡಿತು.
ವರ್ಷದ ಕೊನೆಯವರೆಗೆ(ನವೆಂಬರ್ 2024), ಕೇಂದ್ರ ಸರ್ಕಾರವು 'ಬಾಲ್ಯ ವಿವಾಹ ಮುಕ್ತ ಭಾರತ' ಎನ್ನುವ ರಾಷ್ಟ್ರೀಯ ಅಭಿಯಾನವನ್ನು ಆರಂಭಿಸಿತು, ಬಾಲ್ಯ ವಿವಾಹವನ್ನು ತೊಲಗಿಸಲು ಸಾಂಸ್ಥಿಕ ಮತ್ತು ರಾಜಕೀಯ ಪರಿಹಾರದ ಹೊಸ ಮಟ್ಟವನ್ನು ಇದು ಗುರುತು ಮಾಡಿತು. ಒಂದು ವರ್ಷದ ಕಡಿಮೆ ಅವಧಿಯಲ್ಲಿಯೇ, ಅನೇಕ ರಾಜ್ಯ ಸರ್ಕಾರಗಳು ಸಾಕಷ್ಟು ಉತ್ತಮ ಕ್ರಮಗಳನ್ನು ಕೈಗೊಂಡವು.
ಅಂತಹ ಒಂದು ಇತ್ತೀಚಿನ ಬದಲಾವಣೆಯಲ್ಲಿ, ಕರ್ನಾಟಕ ಸರ್ಕಾರವು ಬಾಲ್ಯ ವಿವಾಹದ ಕಾಯ್ದೆಯನ್ನು ಅಪರಾಧಿಕ ಕಾನೂನುಗೊಳಿಸಿ ಎಂದು ಹೇಳುವುದಲ್ಲದೆ ಇಂತಹ ಮದುವೆಗಳಿಗಾಗಿ ನಡೆಯುವ ನಿಶ್ಚಿತಾರ್ಥ ಅಥವಾ ಸಿದ್ಧತೆಯನ್ನು ಸಹ ಅಪರಾಧಿಕ ಕ್ರಮ ಎಂದು ತಿದ್ದುಪಡಿ ಮಾಡಲು ಮುಂದಾಗಿದೆ. ಇದೊಂದು ನಿಜಕ್ಕೂ ಗಮನಾರ್ಹ ಬೆಳವಣಿಗೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅಡಿಯಲ್ಲಿ ಬಾಲ್ಯ ವಿವಾಹ ರೀತಿಯ ಒಂದು ಸಾಮಾಜಿಕ ಪಿಡುಗು ಗಂಭೀರ ಶಿಕ್ಷಾರ್ಹ ಅಪರಾಧವಾಗಿದೆ ಆದರೂ ಬಾಲ್ಯ ವಿವಾಹದ ನಿಶ್ಚಿತಾರ್ಥ ಅಥವಾ ಎಂಗೇಜ್ಮೆಂಟ್ ರೀತಿಯ ಸಿದ್ಧತೆ ನಡೆಸುವುದು ಅಥವಾ ಒಪ್ಪಿಕೊಳ್ಳುವುದನ್ನು ಸಹ ಅಪರಾಧಿಕ ಕ್ರಮ ಎಂದು ತಿದ್ದುಪಡಿ ಮಾಡುವ ಕರ್ನಾಟಕ ಸರ್ಕಾರದ ಪ್ರಯತ್ನದಿಂದ ಬಾಲ್ಯ ವಿವಾಹ ಎಂಬುವ ಪೀಡೆ ಬೇಗನೆ ಶಮನವಾಗುವ ಸಾಧ್ಯತೆ ಇರುತ್ತದೆ. ಕರ್ನಾಟಕ ಸರ್ಕಾರದ ಈ ಕ್ರಮ ನಮ್ಮ ಮುಗ್ಧ ಮಕ್ಕಳಿಗೆ ಉತ್ತಮ ವರವಾಗಿ ಪರಿಣಮಿಸುವುದರ ಜೊತೆಯಲ್ಲಿ ನಾಗರೀಕ ಸಮಾಜವನ್ನು ಎಚ್ಚರಗೊಳಿಸುವಲ್ಲಿ ಒಂದು ತರ್ಕಬದ್ಧ ವಿಧಾನದ ಕಿಡಿಯನ್ನು ಸಹ ಬೆಳಗಿಸುತ್ತದೆ. ಇದು ದೇಶಾದ್ಯಂತ ಪುನರಾವರ್ತಿಸಲು ಅರ್ಹವಾದ ಅತ್ಯಂತ ಅಗತ್ಯವಾದ ಹೆಜ್ಜೆಯಾಗಿದೆ.
ಕರ್ನಾಟಕ ವಿಧಾನಮಂಡಲದ ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಈ ಕರಡು ಸಂಹಿತೆಯನ್ನು ಮುಂದಿಡುವ ನಿರೀಕ್ಷೆಯಿದ್ದು, ಇದು ಎರಡು ಪ್ರಮುಖ ಕಾನೂನುಗಳನ್ನು ಒಳಗೊಂಡಿದೆ. ಒಂದು ಸೆಕ್ಷನ್ 12A ಪ್ರಕಾರ ಅಪ್ರಾಪ್ತ ವಯಸ್ಕರ ನಿಶ್ಚಿತಾರ್ಥವನ್ನು ಶೂನ್ಯ ಮತ್ತು ಅನೂರ್ಜಿತಗೊಳಿಸುವುದು ಮತ್ತು ಸೆಕ್ಷನ್ 13A ವ್ಯಕ್ತಿಗಳು, ಸಂಘಗಳು ಅಥವಾ ಸಮುದಾಯ ಗುಂಪುಗಳು ಯೋಜಿಸಿರುವಂತಹ ನಿಶ್ಚಿತಾರ್ಥಗಳನ್ನು ಒಳಗೊಂಡಂತೆ ಅಂತಹ ನಿಶ್ಚಿತಾರ್ಥಗಳನ್ನು ನಿಷೇಧಿಸುವ ತಡೆಯಾಜ್ಞೆಗಳನ್ನು ನ್ಯಾಯಾಲಯಗಳು ಹೊರಡಿಸಲು ಅನುಮತಿಸುತ್ತದೆ.
ನಿಶ್ಚಿತಾರ್ಥ ಏಕೆ ಯಾವಾಗಲೂ ನೋವಿನ ವಿಷಯವೇಕೆ?
ಸಮಾಜ ಕಳ್ಳತನ ಮತ್ತು ಕೊಲೆ ರೀತಿಯ ಅಪರಾಧಗಳನ್ನು ಬಹಳ ಬೇಗ ಖಂಡಿಸುತ್ತದೆ. ಸಮಾಜಕ್ಕೆ ಈ ಅಪರಾಧಗಳ ಪಕ್ಷ ವಹಿಸುವುದು ಕಷ್ಟವೂ ಅಲ್ಲ. ಆದರೆ ಇವುಗಳನ್ನು ಹೊರತುಪಡಿಸಿ, ಇತರ ಅಪರಾಧಗಳೂ ಇವೆ, ಅವು ಹೆಚ್ಚು ಭಯಾನಕವಾಗಿವೆ, ಏಕೆಂದರೆ ಇವು ಸಂಸ್ಕೃತಿಯಲ್ಲಿ ಮಿಂದಿವೆ, ಮೌನದ ಸಮ್ಮತಿ ಹೊಂದಿದೆ ಮತ್ತು ಸಮುದಾಯಗಳು ಆಚರಿಸುತ್ತವೆ. ಅದರಲ್ಲಿ ಒಂದು ಬಾಲ್ಯ ವಿವಾಹ ಕೂಡ. ಭಾರತೀಯ ಕಾನೂನಿಯಲ್ಲಿ ಇದು ಅಕ್ರಮವಾಗಿದ್ದರೂ ಸಹ, ಇದು ದೇಶದ ಅನೇಕ ಮೂಲೆಗಳಲ್ಲಿ ಮುಂದುವರೆಯುತ್ತಲೇ ಬಂದಿದೆ. ಇದನ್ನು ನಿರ್ಲಕ್ಷಿಸಲಾಗಿಲ್ಲ, ಆದರೆ ಇದನ್ನು ಸಂರಕ್ಷಿಸಲಾಗಿದೆ.
ಕುಟುಂಬಗಳು ಇದನ್ನು ಮರೆಮಾಚುತ್ತವೆ. ನೆರೆಹೊರೆಯವರು ಇದನ್ನು ಬೆಂಬಲಿಸುತ್ತಾರೆ. ಹಿರಿಯರು ಇದನ್ನು ಸಮರ್ಥಿಸಿಕೊಳ್ಳುತ್ತಾರೆ. ಇಡೀ ಸಮುದಾಯ ಮದುವೆ ಬೇಗನೆ ಮಾಡಿ ಮುಗಿಸಲು ಮತ್ತು ಕಾನೂನಿನ ಸರ್ಪಗಾವಲನ್ನು ತಪ್ಪಿಸಲು ಒಟ್ಟಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದಲೇ ಬಾಲ್ಯ ವಿವಾಹವನ್ನು ನಿಲ್ಲಿಸುವುದು, ಪತ್ತೆ ಮಾಡುವುದು ಮತ್ತು ಬಗೆಹರಿಸುವುದು ಬಹಳ ಕಷ್ಟವಾಗಿದೆ.
ಆದ್ದರಿಂದ ಪ್ರತಿಸಲ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ನಲ್ಲಿನ ನಮ್ಮ 250 ಪಾಲುದಾರರಲ್ಲಿ ಒಬ್ಬರು ಒಂದು ನಡೆಯುತ್ತಿರುವ ಬಾಲ್ಯ ವಿವಾಹದ ಕುರಿತು ಒಂದು ಸಣ್ಣ ದನಿಯನ್ನು ಕೇಳಿಸಿಕೊಳ್ಳುತ್ತಾರೆ ಮತ್ತು ಅದನ್ನು ನಿಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ, ಅವರು ಒಂದು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದಾರೆ, ಅವರು ಒಂದು ಮಾನಸಿಕ ಸ್ಥಿತಿಗೆ ಸವಾಲಡ್ಡುತ್ತಿದ್ದಾರೆ ಎಂದು ಅವರಿಗೆ ತಿಳಿದಿರುತ್ತದೆ. ಅವರ ವಿರೋಧಗಳನ್ನು ಎದುರಿಸುತ್ತಾರೆ. ಅವರು ಪ್ರೀತಿಯ ಅಥವಾ ಸಂಪ್ರದಾಯದ ಸೋಗಿನಲ್ಲಿ ಅವರ ವಿಚಿತ್ರ ತರ್ಕವನ್ನು ಮತ್ತು ಅವರ ಕೋಪ, ನೆಪಗಳು, ನಿರೋಧಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಆದರೂ ಅವರು ಅಲ್ಲಿಗೆ ತೆರಳಲು ಸಿದ್ಧರಾಗುತ್ತಾರೆ. .
ಇಷ್ಟಾದರೂ ನಮ್ಮ ತಂಡಗಳು ಅಲ್ಲಿಗೆ ತಲುಪಿದಾಗ, ಅವರು ಸಂಪ್ರದಾಯದ ಹೆಸರಿನಲ್ಲಿ ವಿರೋಧವನ್ನು ಎದುರಿಸುತ್ತಾರೆ. ಕುಟುಂಬಗಳು ಕೊಡುವ ಅತ್ಯಂತ ಸಾಮಾನ್ಯ ನೆಪವೆಂದರೆ, ಅದು ಮದುವೆ ಅಲ್ಲ, ಆದರೆ ಒಂದು 'ನಿಶ್ಚಿತಾರ್ಥ' ಆದರೆ 'ಕೇವಲ ಒಂದು ನಿಶ್ಚಿತಾರ್ಥ' ಕಾರ್ಯಕ್ರಮದಲ್ಲಿ ವೇದಿಕೆಯಿಂದ ಹಿಡಿದು ಓಲಗದವರು ಇರುತ್ತಾರೆ. ಎಲ್ಲವೂ ಬೇರೆಯದನ್ನು ಸೂಚಿಸುತ್ತದೆ. ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ನಮಗೆ ತಿಳಿಯುತ್ತದೆ. ಒಂದುವೇಳೆ ಅದು ನಿಶ್ಚಿತಾರ್ಥ ಎಂದು ಸಾಬೀತುಪಡಿಸಿದರೆ ಕಾನೂನು ಅವರನ್ನು ಏನೂ ಮಾಡಲಾಗುವುದಿಲ್ಲ ಎಂದು ಅವರಿಗೆ ತಿಳಿದಿದೆ. ಆದ್ದರಿಂದ ಇದು ನಮಗಿರುವ ಒಂದು ಅಡಚಣೆ ಮತ್ತು ಅವರಿಗಿರುವ ಒಂದು ರಕ್ಷಾ ಕವಚ.
ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಎನ್‌ಜಿಒ ಪಾಲುದಾರರು ಭಾರತದ 418 ಜಿಲ್ಲೆಗಳು, ಹಳ್ಳಿಗಳು ಮತ್ತು ಹಿಂದುಳಿದ ಸಮುದಾಯಗಳಲ್ಲಿ ಕೆಲಸ ಮಾಡುತ್ತಾರೆ. ವ್ಯವಸ್ಥೆಯಲ್ಲಿನ ಬಿರುಕುಗಳಿಂದ ಉಂಟಾಗುವ ಮಕ್ಕಳ ಅಸಹಾಯಕತೆಯನ್ನು ಅವರು ಪ್ರತಿ ಬಾರಿಯೂ ನೋಡುತ್ತಾರೆ. ಕುಟುಂಬಗಳು ಈ ಸಂದರ್ಭವು ಕೇವಲ ನಿಶ್ಚಿತಾರ್ಥ ಎಂದು ಘೋಷಿಸಿದಾಗ, ಕಾನೂನು ಕ್ರಮವು ಅಸಾಧ್ಯವಾಗುತ್ತದೆ. ನಮಗೆ ಕೇವಲ ಒಪ್ಪಂದಗಳು ಮತ್ತು ಸಮಾಲೋಚನೆಗಳು ಮಾತ್ರ ಉಳಿಯುತ್ತವೆ. ಪರಿಣಾಮಗಳ ಬಗ್ಗೆ ನಾವು ಎಚ್ಚರಿಕೆ ಮಾತ್ರ ಕೊಡಬಹುದಾಗಿದೆ. ಪ್ರತಿಯೊಂದು ಪ್ರಯತ್ನದ ನಂತರವೂ, ಅನೇಕ ಕುಟುಂಬಗಳು ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳುತ್ತವೆ. ಅವರು ನಮ್ಮ ಕಣ್ಣುಗಳಿಂದ ದೂರವಾಗಿ ಮದುವೆಯನ್ನು ಮಾಡಲು ಸದ್ದಿಲ್ಲದೆ ಬೇರೆ ಹಳ್ಳಿಗೆ ಅಥವಾ ಇನ್ನೊಂದು ರಾಜ್ಯಕ್ಕೆ ತೆರಳುತ್ತಾರೆ.
ಕರ್ನಾಟಕದಲ್ಲಿ ಏಪ್ರಿಲ್ 1, 2024 ರಿಂದ ಮಾರ್ಚ್ 31, 2025 ರವರೆಗೆ ಜೆಆರ್ಸಿ ಪಾಲುದಾರರು ಒಟ್ಟು 3,365 ಬಾಲ್ಯ ವಿವಾಹಗಳನ್ನು ತಡೆಗಟ್ಟಿದ್ದಾರೆ, ಅದರಲ್ಲಿ 1,457 ಕಾನೂನು ಮಧ್ಯಸ್ಥಿಕೆಗಳ ಮೂಲಕ ಮತ್ತು 1,908 ಪೋಷಕರ ಜೊತೆಗಿನ ಒಪ್ಪಂದಗಳ ಮೂಲಕ ನಡೆದಿವೆ. ಇದಲ್ಲದೆ, ಬಾಲ್ಯ ವಿವಾಹಗಳ ವಿರುದ್ಧ ಒಟ್ಟು 69 ಪ್ರಥಮ ಮಾಹಿತಿ ವರದಿಗಳು (ಎಫ್ಐಆರ್) ಸಹ ದಾಖಲಾಗಿವೆ.

ಈ ಮಧ್ಯೆ, ಸರ್ಕಾರಿ ದಾಖಲೆಗಳ ಪ್ರಕಾರ, ಕಳೆದ ವರ್ಷ ಕರ್ನಾಟಕದಲ್ಲಿ 700 ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ. ಇದರರ್ಥ ಪ್ರತಿದಿನ ಕನಿಷ್ಠ ಇಬ್ಬರು ಮಕ್ಕಳನ್ನು ಮದುವೆಗೆ ತಳ್ಳಲಾಗುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (2019-21) ಕರ್ನಾಟಕದಲ್ಲಿ ಬಾಲ್ಯವಿವಾಹದ ಪ್ರಮಾಣವು ಶೇಕಡಾ 21.3 ರಷ್ಟಿದೆ ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ ಸಂಹಿತೆ ಅಂಗೀಕಾರವಾದರೆ, ಇದು ಕಾನೂನು ಸುಧಾರಣೆಯನ್ನು ತರುವುದಲ್ಲದೆ, ನೈತಿಕ ಮತ್ತು ಸಾಮಾಜಿಕ ಸುಧಾರಣೆಗೆ ದಾರಿ ಮಾಡಿಕೊಡುತ್ತದೆ. ಇದನ್ನು ಸಾಧಿಸಲು, ಎಲ್ಲಾ ಪಕ್ಷಗಳು ತಮ್ಮ ಪಕ್ಷಗಳ ಸಂಬಂಧಗಳು ಮತ್ತು ರಾಜಕೀಯ ದ್ವೇಷವನ್ನು ಬದಿಗಿಟ್ಟು ಸರ್ವಾನುಮತದಿಂದ ಅಂಗೀಕರಿಸಬೇಕು.
ಇತರ ರಾಜ್ಯಗಳಲ್ಲಿಯೂ ಬದಲಾವಣೆಯ ಅಲೆ
ನಿಜ ಹೇಳಬೇಕಂದರೆ, ಬಾಲ್ಯ ವಿವಾಹದ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಅದರ ಪ್ರಕರಣಗಳಲ್ಲಿ ಕರ್ನಾಟಕ ಒಂದೇ ರಾಜ್ಯವಲ್ಲ. ದೇಶಾದ್ಯಂತ, ಈ ಸಮಸ್ಯೆಯ ತುರ್ತು ಪರಿಸ್ಥಿತಿಯನ್ನು ಗಮನಿಸಿ, ಅನೇಕ ರಾಜ್ಯಗಳು ಎಚ್ಚೆತ್ತುಕೊಳ್ಳುತ್ತಿವೆ ಮತ್ತು ಇದನ್ನು ಹತ್ತಿಕ್ಕಲು ತಮ್ಮದೇ ಆದ ಕ್ರಮಗಳನ್ನು ಸಹ ಕೈಗೊಳ್ಳುತ್ತಿವೆ. ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅವರು ಕೆಲವು ವರ್ಷಗಳ ಹಿಂದೆ ಆರಂಭಿಸಿದ 'ಬಾಲ್ಯ ವಿವಾಹ ಮುಕ್ತ ಭಾರತ' ಅಭಿಯಾನದ ಮೂಲಕ, ಬಾಲ್ಯವಿವಾಹವನ್ನು ಸಮುದಾಯಗಳು ಮಾತ್ರವಲ್ಲದೆ ಸರ್ಕಾರಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ಸಹ ನೋಡುವ ರೀತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ನಾವು ಕಂಡಿದ್ದೇವೆ.
ಈ ಮೌನ ಬದಲಾವಣೆಯನ್ನು ತ್ವರಿತಗೊಳಿಸಿದ ಮತ್ತು ಹೆಚ್ಚಿನ ಪಾಲುದಾರರನ್ನು ಸಕ್ರಿಯ ಪಾಲುದಾರಿಕೆಯಲ್ಲಿ ಭಾಗವಹಿಸಲು ಪ್ರೇರೇಪಿಸಿದ ಮತ್ತೊಂದು ಅಂಶವೆಂದರೆ, ಭಾರತ ಸರ್ಕಾರದ 'ಬಾಲ್ಯ ವಿವಾಹ ಮುಕ್ತ ಭಾರತ' ಅಭಿಯಾನ. ಇದನ್ನು ಕಳೆದ ವರ್ಷ ಆರಂಭಿಸಲಾಯಿತು. ಎಲ್ಲರೂ ಒಗ್ಗೂಡುತ್ತಿರುವುದರಿಂದ, ಭಾರತವು ಬಾಲ್ಯವಿವಾಹದ ಬಗ್ಗೆ ಒಂದು ನಿರ್ಣಾಯಕ ಹಂತಕ್ಕೆ ತಲುಪುತ್ತಿದೆ. ಇಂದು ತೆಗೆದುಕೊಳ್ಳುತ್ತಿರುವ ಕ್ರಮಗಳು ಇನ್ನು ನಿಧಾನವೂ ಇಲ್ಲ ಅಥವಾ ಹಿಂದೆ ಸರಿಯುವಂತಿಲ್ಲ. ಅವು ಸ್ಥಿರ, ದೃಢನಿಶ್ಚಯ ಮತ್ತು ತುರ್ತು ಕ್ರಮವಾಗಿವೆ.
ರಾಜಸ್ಥಾನದ ಅನೇಕ ರಾಜ್ಯಗಳಲ್ಲಿ, ಅಕ್ಷಯ ತೃತೀಯ ಹಬ್ಬದ ಸಮಯದಲ್ಲಿ ಬಾಲ್ಯ ವಿವಾಹದ ಹೆಚ್ಚಿನ ಪ್ರಕರಣಗಳನ್ನು ಕಾಣಬಹುದಾಗಿದೆ. ಆದ್ದರಿಂದ ಮದುವೆಯ ಆಮಂತ್ರಣ ಪತ್ರದಲ್ಲಿ ವಧು-ವರರ ವಯಸ್ಸನ್ನು ಉಲ್ಲೇಖಿಸುವುದು ಕಡ್ಡಾಯವಾಗಿದೆ. ಮೂಲದಲ್ಲಿ ಯಾವುದೇ ಬಾಲ್ಯ ವಿವಾಹ ನಡೆಯುತ್ತಿದೆಯೇ ಎಂದು ಪರಿಶೀಲಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಇದೇ ವೇಳೆಗೆ, ಬಾಲ್ಯ ವಿವಾಹವನ್ನು ತಡೆಗಟ್ಟಲು ಮತ್ತು ನಿರ್ಮೂಲನೆ ಮಾಡಲು ಅಧಿಕಾರಿಗಳು ತೆಗೆದುಕೊಂಡ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ಣಯಿಸಲು ಬಿಹಾರ ಸರ್ಕಾರ ರಾಜ್ಯಮಟ್ಟದ ಕಾರ್ಯಪಡೆಯನ್ನು ಸ್ಥಾಪಿಸಲು ನಿರ್ಧರಿಸಿದೆ. ಬಿಹಾರವು ಪ್ರಸ್ತುತ ದೇಶದಲ್ಲಿ ಎರಡನೇ ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳನ್ನು ಹೊಂದಿದೆ. ಇದು ಈ ಕ್ರಮವನ್ನು ತುರ್ತು ಮತ್ತು ಅಗತ್ಯವಾಗಿಸಿದೆ. ಬಾಲ್ಯ ವಿವಾಹವನ್ನು ಹತ್ತಿಕ್ಕಲು ಕಾನೂನು ಹಸ್ತಕ್ಷೇಪದ ಬಳಕೆಯ ಮೂಲಕ ಅಸ್ಸಾಂ ಸರ್ಕಾರವು ವರ್ಷಗಳಲ್ಲಿ ಅನುಕರಣೀಯವಾಗಿದೆ ಮತ್ತು ಪರಿಣಾಮಕಾರಿ ತಡೆಗಟ್ಟುವಿಕೆಯಾಗಿಯೂ ಸಾಬೀತಾಗಿದೆ.
ಬಾಲ್ಯ ವಿವಾಹ ಒಂದು ಕಾನೂನು ಉಲ್ಲಂಘನೆ ಮಾತ್ರವಾಗಿಲ್ಲ. ಇದು ಮಕ್ಕಳ ಭವಿಷ್ಯದ ಕಳ್ಳತನ. ಬಹಳ ಕಾಲದಿಂದ ಇದು ಸಂಸ್ಕೃತಿ ಮತ್ತು ಆಚರಣೆಯ ಹೆಸರಿನಲ್ಲಿ ಜೀವಂತವಾಗಿದೆ, ಮೌನದಿಂದ ಮತ್ತು ಸಾಮೂಹಿಕ ಸಂಕೀರ್ಣತೆಯಿಂದ ರಕ್ಷಣೆ ಪಡೆದಿದೆ. ಆದರೆ ಈಗ ಕಾಲ ಬದಲಾಗುತ್ತಿದೆ. ಬಲವಾದ ಕಾನೂನುಗಳ ಮೂಲಕ, ರಾಜ್ಯದ ಕಠಿಣ ಕ್ರಮಗಳ ಮೂಲಕ, ಮತ್ತು ಸಮಾಜದ ಬೆಳೆಯುತ್ತಿರುವ ವಿರೋಧದ ಮೂಲಕ, ಭಾರತ ಎಂದೋ ಇತಿಶ್ರೀ ಹಾಡಬೇಕಿದ್ದ ಅಪರಾಧಕ್ಕೆ ಕೊನೆಗೂ ಈಗ ವಿರುದ್ಧ ಹೋರಾಡಲು ಸಜ್ಜಾಗುತ್ತಿದೆ. ತಲುಪಬೇಕಾದ ಸ್ಥಳ ಇನ್ನೂ ಬಹಳ ದೂರ ಇದೆ, ಆದರೆ ಬಾಲ್ಯ ವಿವಾಹದಿಂದ ತಪ್ಪಿಸಿಕೊಂಡ ಮಗುವಿನ ಸ್ವಾತಂತ್ರ್ಯದ ದಾರಿ ಮಾತ್ರ ಬೇಗನೆ ತೆರೆದುಕೊಳ್ಳುತ್ತದೆ. ಪ್ರತಿ ಸಲ ಇದರ ವಿರುದ್ಧ ಹೋರಾಡಿದ್ದಕ್ಕೆ ಸಿಗುವ ಜಯ ನಿಜಕ್ಕೂ ಜೀವನಗಳನ್ನು ಉಜ್ವಲಗೊಳಿಸುತ್ತದೆ.
ಲೇಖಕರು: ಸ್ಯಾಮ್ ಚೆಲ್ಲದುರೈ, ಕಾರ್ಯನಿರ್ವಾಹಕ ನಿರ್ದೇಶಕ, ಆನೇಕಲ್ ಪುನರ್ವಸತಿ ಶಿಕ್ಷಣ ಮತ್ತು ಅಭಿವೃದ್ಧಿ (ರೀಡ್) ಕೇಂದ್ರ
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications