ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಬೆಂಗಳೂರು, ನ.21: 2015ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 12ರಂದು ಆರಂಭವಾಗಿ 27ಕ್ಕೆ ಕೊನೆಗೊಳ್ಳಲಿದೆ. ಪರೀಕ್ಷೆಗಳು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.15ರ ವರೆಗೆ ನಡೆಯಲಿವೆ.
ಆದರೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಸಂಗೀತ ಮತ್ತು ಫ್ರೆಂಚ್ ಪರೀಕ್ಷೆಗಳು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರ ವರೆಗೆ ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಅಂಕಿ ಅಂಶ: 6,10,939 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 4,526 ಕಾಲೇಜುಗಳಿವೆ. 5,546 ಸಿಬ್ಬಂದಿ, 1,017 ಪರೀಕ್ಷಾ ಕೇಂದ್ರಗಳು, 82,067 ಪುನಃ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು, 4,96,900 ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಎಂದು ಪರೀಕ್ಷಾ ಮಂಡಳಿ ನಿರ್ದೇಶಕಿ ಸುಷ್ಮಾ ಗೊಡ್ಬೊಳೆ ಹೇಳಿದ್ದಾರೆ.
| ದಿನಾಂಕ | ಬೆಳಗ್ಗಿನ ಅವಧಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.15ರ ವರೆಗೆ | ಮಧ್ಯಾಹ್ನದ ಅವಧಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರ ವರೆಗೆ |
| ಮಾ.12, ಗುರುವಾರ | ರಾಜ್ಯಶಾಸ್ತ್ರ / ರಸಾಯನ ಶಾಸ್ತ್ರ | |
| ಮಾ.13, ಶುಕ್ರವಾರ | ಕನ್ನಡ, ತಮಿಳು, ಮಲಯಾಳಂ, ಅರೇಬಿಕ್ | |
| ಮಾ.14, ಶನಿವಾರ | ಸಮಾಜಶಾಸ್ತ್ರ. ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ | |
| ಮಾ.15, ಭಾನುವಾರ | ರಜಾ ದಿನ | |
| ಮಾ.16 | ಅರ್ಥಶಾಸ್ತ್ರ | |
| ಮಾ.17 | ಭೂಗೋಳ, ಗಣಿತ | |
| ಮಾ.18 | ಹಿಂದಿ, ತೆಲುಗು | |
| ಮಾ.19 | ಲಾಜಿಕ್, ಅಕೌಂಟೆನ್ಸಿ, ಗೃಹ ವಿಜ್ಞಾನ | |
| ಮಾ.20 | ಭೌತಶಾಸ್ತ್ರ, ಶಿಕ್ಷಣ | ಕರ್ನಾಟಕ ಸಂಗೀತ,ಹಿಂದೂಸ್ತಾನಿ ಸಂಗೀತ, ಸೈಕಾಲಜಿ |
| ಮಾ.21 | ಚಾಂದ್ರಮಾನ ಯುಗಾದಿ ರಜೆ | |
| ಮಾ.22, ಭಾನುವಾರ | ರಜಾದಿನ | |
| ಮಾ.23 | ಇತಿಹಾಸ, ಗಣಕ ವಿಜ್ಞಾನ | |
| ಮಾ.24 | ಐಚ್ಛಿಕ ಕನ್ನಡ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್ | |
| ಮಾ.25 | ಸೋಷಿಯಾಲಜಿ, ಸ್ಟಾಟಿಟಿಕ್ಸ್ | |
| ಮಾ.26 | ಇಂಗ್ಲಿಷ್ | |
| ಮಾ.27 | ಮರಾಠಿ, ಉರ್ದು, ಸಂಸ್ಕೃತ, | ಫ್ರೆಂಚ್ |











Click it and Unblock the Notifications