Breaking: ವಿಜಯನಗರ ಜಿಲ್ಲೆಗೆ ಆನಂದ್ ಸಿಂಗ್ ಉಸ್ತುವಾರಿ ಸಚಿವ
ಬೆಂಗಳೂರು, ಜುಲೈ 30: ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಆನಂದ್ ಸಿಂಗ್ ನೇಮಕದ ಒತ್ತಾಯಕ್ಕೆ ಸರ್ಕಾರ ಕೊನೆಗೂ ಮಣಿದಿದೆ. ಈ ಹಿಂದೆ ನೀಡಿದ್ದ ನೇಮಕ ಆದೇಶದಲ್ಲಿ ತಿದ್ದುಪಡಿಗೊಳಿಸಿದ ಹೊಸ ಆದೇಶವನ್ನು ಹೊರಡಿಸಲಾಗಿದೆ.
ಜಿಲ್ಲೆಯ ಜನರ ಮತ್ತು ಶಾಸಕರ ಒತ್ತಾಯದಂತೆ ವಿಜಯನಗರ ಜಿಲ್ಲೆಗೆ ಸಚಿವ ಹಾಗೂ ಜಿಲ್ಲೆಯ ಶಾಸಕರಾದ ಆನಂದ್ ಸಿಂಗ್ ಅವರನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶಿಸಲಾಗಿದೆ.

ಈ ಹಿಂದೆ ವಿಜಯನಗರ ಜಿಲ್ಲೆಗೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಈಗ ಸಚಿವೆ ಶಶಿಕಲಾ ಜೊಲ್ಲೆಗೆ ಕೊಪ್ಪಳ ಜಿಲ್ಲೆಯ ಉಸ್ತುವಾರಿಯನ್ನು ವಹಿಸಲಾಗಿದೆ.
Recommended Video
Commonwealth 2022 ಮೊದಲ ದಿನ ಭಾರತದ ಪ್ರದರ್ಶನ ಹೇಗಿತ್ತು | *Sports | OneIndia Kannada












Click it and Unblock the Notifications