Israel VS Palestine: ಕನ್ನಡಿಗರ ರಕ್ಷಣೆಗೆ ನಿಂತ ಕರ್ನಾಟಕ ಸರ್ಕಾರ

ಕರ್ನಾಟಕದಿಂದ ಅನೇಕರು ವೃತ್ತಿ ಹಾಗೂ ವಿದ್ಯಾಭ್ಯಾಸದ ಉದ್ದೇಶದಿಂದ ಜಗತ್ತಿನ ವಿವಿಧ ದೇಶಗಳಿಗೆ ವಲಸೆ ಹೋಗಿದ್ದಾರೆ. ಈ ರೀತಿ ಇಸ್ರೇಲ್ ನೆಲದಲ್ಲೂ ಭಾರತದ ಸಾಕಷ್ಟು ಜನ ವಾಸ ಮಾಡುತ್ತಿದ್ದಾರೆ. ಈ ಪೈಕಿ ಕನ್ನಡಿಗರು ಕೂಡ ಇಸ್ರೇಲ್‌ನಲ್ಲಿ ಇದ್ದು, ಈಗ ಉಗ್ರರು ಹಾಗೂ ಇಸ್ರೇಲ್ ಸೇನೆ ನಡುವೆ ಅಲ್ಲಿ ಯುದ್ಧ ಶುರುವಾಗಿದೆ. ಹೀಗಾಗಿ ಇಸ್ರೇಲ್ ನೆಲದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರಿಗೆ ಸಿದ್ದರಾಮಯ್ಯ ಅವರ ಸರ್ಕಾರ ಸಂದೇಶ ನೀಡಿದೆ.

ಅಂದಹಾಗೆ ಇಸ್ರೇಲ್ ಹಾಗೂ ಹಮಾಸ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಹೀಗಾಗಿ ಈಗಾಗಲೇ ನೂರಾರು ಅಮಾಯಕರು ಮೃತಪಟ್ಟಿದ್ದಾರೆ. ಇದರ ಜೊತೆಗೆ ಇಸ್ರೇಲ್ ಸರ್ಕಾರ ಉಗ್ರರ ವಿರುದ್ಧ ಭೀಕರ ಯುದ್ಧ ಘೋಷಣೆ ಮಾಡಿದೆ. ಮತ್ತೊಂದು ಕಡೆ ಇಸ್ರೇಲ್ ನೆಲಕ್ಕೆ ನುಗ್ಗಿ ಉಗ್ರರು ಗುಂಡಿನ ದಾಳಿ ಮಾಡುತ್ತಿದ್ದಾರೆ. ಹಾಗೇ ಬಾಂಬ್ ಮತ್ತು ರಾಕೆಟ್ ದಾಳಿ ಕೂಡ ನಡೆಯುತ್ತಿದೆ. ಇಷ್ಟೆಲ್ಲಾ ಸಮಸ್ಯೆ ನಡುವೆ ಅಮಾಯಕರು ಪರದಾಡುತ್ತಿದ್ದು, ಹೀಗೆ ಸಂಕಷ್ಟಕ್ಕೆ ಸಿಲುಕಿದವರಲ್ಲಿ ಕನ್ನಡಿಗರು ಕೂಡ ಸೇರಿದ್ದಾರೆ.

Karnataka government gave instructions about Israel VS Palestine conflict

ಕನ್ನಡಿಗರ ರಕ್ಷಣೆಗೆ ನಿಂತ ಕರ್ನಾಟಕ ಸರ್ಕಾರ

ಇನ್ನು ಇಸ್ರೇಲ್ ಹಾಗೂ ಹಾಮಸ್ ಉಗ್ರರ ನಡುವಿನ ಕಾಳಗದಲ್ಲಿ ಸಮಸ್ಯೆಗೆ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸಿದ್ದರಾಮಯ್ಯ ಅವರ ಸರ್ಕಾರ ವಿಶೇಷ ಸಂದೇಶ ಕಳುಹಿಸಿದೆ. ಅಲ್ಲದೆ ಈ ಬಗ್ಗೆ ಖುದ್ದಾಗಿ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿ ತಿಳಿಸಿದ್ದು ತುರ್ತು ವೇಳೆ ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆಯನ್ನೂ ಪ್ರಕಟಿಸಲಾಗಿದೆ. ಈ ಮೂಲಕ ಕನ್ನಡಿಗರಿಗೆ ಅಗತ್ಯ ಬೆಂಬಲ ನೀಡಲು ಮುಂದಾಗಿದೆ. ಹಾಗಾದರೆ ಕರ್ನಾಟಕ ಸರ್ಕಾರದ ಸಂದೇಶದಲ್ಲಿ ಏನಿದೆ? ಮುಂದೆ ಓದಿ.

ಕನ್ನಡಿಗರಿಗೆ ಸರ್ಕಾರದ ಸೂಚನೆ

ಸಿಎಂ ಟ್ವೀಟ್‌ನಲ್ಲಿ, 'ಇಸ್ರೇಲ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿ ಇರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳ ಸೂಚನೆ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ವಿನಂತಿಸಲಾಗಿದೆ. ದಯವಿಟ್ಟು ಹೆಚ್ಚಿನ ಜಾಗರೂಕತೆ ವಹಿಸುತ್ತಾ, ಅನಗತ್ಯ ಪ್ರಯಾಣ ತಪ್ಪಿಸಿ ಮತ್ತು ಸುರಕ್ಷತಾ ಆಶ್ರಯಗಳ (Bomb Shelter) ಹತ್ತಿರ ಇರಬೇಕಾಗಿ ವಿನಂತಿ, ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಸ್ರೇಲಿ ಹೋಮ್ ಫ್ರಂಟ್ ಕಮಾಂಡ್ ವೆಬ್‌ಸೈಟ್ (https://www.oref.org.il/en) ಅಥವಾ ಅವರ ಸಿದ್ಧತೆ ಕರಪತ್ರವನ್ನು ನೋಡಿ.' ಎಂದು ತಿಳಿಸಲಾಗಿದೆ.

ಹಾಗೇ ಮತ್ತೊಂದು ಕಡೆ, 'ತುರ್ತು ಸಂದರ್ಭದಲ್ಲಿ ದಯವಿಟ್ಟು ನಮ್ಮನ್ನು +97235226748 ನಲ್ಲಿ ಸಂಪರ್ಕಿಸಿ ಅಥವಾ [email protected] ನಲ್ಲಿ e-ಮೇಲ್ ಸಂದೇಶವನ್ನು ಕಳುಹಿಸಿ, ಯಾವುದೇ ಹೆಚ್ಚಿನ ಮಾರ್ಗದರ್ಶನಕ್ಕಾಗಿ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸಿ.' ಎಂದು ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್‌ನಲ್ಲಿ ಮಾಹಿತಿ ನೀಡಲಾಗಿದೆ.

ಏನಾಗುತ್ತಿದೆ ಇಸ್ರೇಲ್ ನೆಲದಲ್ಲಿ?

ನಿನ್ನೆ ಬೆಳಗ್ಗೆ ಹಮಾಸ್ ಬಂಡುಕೋರರ ಗ್ಯಾಂಗ್ ಇಸ್ರೇಲ್ ಕಡೆಗೆ 5000ಕ್ಕೂ ಹೆಚ್ಚು ರಾಕೆಟ್‌ನ್ನ ಒಂದೇ ಬಾರಿಗೆ ಉಡಾಯಿಸಿತ್ತು. ಅಲ್ಲದೆ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್‌ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ರು. ಹೀಗಾಗಿ ಇಸ್ರೇಲ್ ಸೇನೆ ಯೋಧರು ಸಿದ್ಧವಾಗಿ ನಿಂತರು, ಈ ಸಮಯಕ್ಕೆ ಇಸ್ರೇಲ್ ಪ್ರಧಾನಿ ಕೂಡ ಯುದ್ಧವನ್ನ ಘೋಷಿಸಿಯೇ ಬಿಟ್ಟರು. ಹೀಗೆ ಶುರುವಾದ ಯುದ್ಧ ಒಂದೇ ದಿನಕ್ಕೆ ಸುಮಾರು 500 ಜನರ ಜೀವವನ್ನ ಬಲಿಪಡೆದಿದೆ ಎನ್ನಲಾಗಿದೆ. ಹಾಗೇ ಸಾಕಷ್ಟು ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ.

Karnataka government gave instructions about Israel VS Palestine conflict

ಉಗ್ರರು ಇಸ್ರೇಲ್ ಗಡಿಯಲ್ಲಿ ಹಿಂಸಾಚಾರ ನಡೆಸಿ, ಇಸ್ರೇಲ್‌ ಒಳಗೆ ನುಗ್ಗುತ್ತಿರುವ ಕಾರಣ ಭಾರಿ ಪ್ರಮಾಣದಲ್ಲಿ ಸೇನೆ ನಿಯೋಜಿಸಿದೆ ಇಸ್ರೇಲ್ ಸರ್ಕಾರ. ಅದ್ರೂ ಪರಿಸ್ಥಿತಿ ಕೈಮೀರಿ ಹೋಗಿದೆ. ಹೀಗಾಗಿ ಇಸ್ರೇಲ್ ಇನ್ಯಾವ ಭಯಾನಕ ಅಸ್ತ್ರ ಪ್ರಯೋಗ ಮಾಡುತ್ತೋ? ಎಂಬ ಆತಂಕ ಕೂಡ ಆವರಿಸಿದೆ. ಮತ್ತೊಂದ್ಕಡೆ ಇಸ್ರೇಲ್ ಅಟ್ಯಾಕ್ ನೋಡಿ ಬೆಚ್ಚಿಬಿದ್ದಿರುವ ಪ್ಯಾಲೇಸ್ತೀನ್ ಹಾಗೂ ಗಾಜಾ ಪಟ್ಟಿಯ ಅಮಾಯಕರು ಮನೆ ಬಿಟ್ಟು ಹೋಗುತ್ತಿದ್ದಾರೆ. ಹೀಗಾಗಿ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ಕಾಳಜಿ ವಹಿಸಿ ವಿಶೇಷ ಸಂದೇಶ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+