ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತ ಕೊನೆ ಎಂದು ಗೋಮೂತ್ರದಿಂದ ವಿಧಾನಸೌಧವನ್ನು ಸ್ವಚ್ಛಗೊಳಿಸಿದ ಕಾಂಗ್ರೆಸ್

ಬೆಂಗಳೂರು, ಮೇ 22: ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಲವು ಭ್ರಷ್ಟಾಚಾರದ ಆರೋಪಗಳ ವಿರುದ್ದ ಕಾಂಗ್ರೆಸ್‌ ಕಿಡಿಕಾರಿದ್ದು, ಭ್ರಷ್ಟಾಚಾರದಿಂದ ವಿಧಾನಸೌಧವನ್ನು ಮಲೀನಗೊಳಿಸಿದೆ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು ಗೋಮೂತ್ರದಿಂದ ವಿಧಾನಸೌಧವನ್ನು ಸ್ವಚ್ಛಗೊಳಿಸಿ ಶುದ್ದೀಕರಣ ಮಾಡಿದ್ದಾರೆ.

ಸೋಮವಾರ ವಿಧಾನಸಭೆ ಅಧಿವೇಶನ ಆರಂಭಕ್ಕೂ ಮುನ್ನ ಕಾಂಗ್ರೆಸ್‌ ಮುಖಂಡ ಮನೋಹರ್ ನೇತೃತ್ವದಲ್ಲಿ ಗೋಮೂತ್ರದಿಂದ ವಿಧಾನಸೌಧವನ್ನು ಸ್ವಚ್ಛಗೊಳಿಸಿದ್ದಾರೆ. ವಿಧಾನಸೌಧದ ಮುಂಭಾಗ ಪೂಜೆ ಸಲ್ಲಿಸಿ, ವಿಧಾನಸೌಧದ ಸುತ್ತಲೂ ಗೋಮೂತ್ರವನ್ನ ಸಿಂಪಡಿಸಿ ಸ್ವಚ್ಛಗೊಳಿಸಿ ಶುದ್ದೀಕರಣ ಮಾಡಿದ್ದಾರೆ.

 Congress Cleans Vidhana Soudha

ಇನ್ನೂ ಕಾಂಗ್ರೆಸ್‌ ಐತಿಹಾಸಿಕ ಗೆಲುವು ಸಾಧಿಸಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಯಲಿದೆ. ಕೋಮು-ದ್ವೇಷ ರಹಿತ ಸರಕಾರ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರದಿಂದ ವಿಧಾನಸೌಧ ಕಲುಷಿತಗೊಂಡಿದೆ ಎಂದು ಆರೋಪಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಾವು ಅಧಿಕಾರಕ್ಕೆ ಬಂದ ನಂತರ ಡೆಟಾಲ್ ಮತ್ತು ಗೋಮೂತ್ರದಿಂದ ವಿಧಾನಸೌಧವನ್ನು ಶುದ್ಧೀಕರಿಸುವುದಾಗಿ ಹೇಳಿದ್ದರು, ಅದರಂತೆ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಅದರಂತೆ ಸೋಮವಾರ ಕಾಂಗ್ರೆಸ್ಸ್‌ ಕಾರ್ಯಕರ್ತರು ಗೋಮೂತ್ರ ಸಿಂಪಡಿಸಿ ಸ್ವಚ್ಛಗೊಳಿಸಿ ಶುದ್ದೀಕರಣ ಮಾಡಿದ್ದಾರೆ.

 Congress Cleans Vidhana Soudha

ನಿಮ್ಮ ಟೆಂಟ್‌ಗಳನ್ನು ಪ್ಯಾಕ್ ಮಾಡಿ ಮತ್ತು ಉಳಿದಿರುವ ಸಂಗ್ರಹವನ್ನು ಮಾಡಿ ಮತ್ತು ಹೋಗಿ. ವಿಧಾನಸೌಧ ಸ್ವಚ್ಛಗೊಳಿಸಲು ಡೆಟಾಲ್ ನೊಂದಿಗೆ ಬರುತ್ತೇವೆ. ಶುದ್ಧೀಕರಣಕ್ಕಾಗಿ ನಾನು ಸ್ವಲ್ಪ ಗಂಜಲವನ್ನು (ಗೋಮೂತ್ರ) ತೆಗೆದುಕೊಂಡು ಸ್ವಚ್ಚಗೊಳಿಸುವುದಾಗಿ ಡಿ ಕೆ ಶಿವಕುಮಾರ್ ಹೇಳಿದರು. ಅದರಂತೆ ಕಾಂಗ್ರೆಸ್‌ ಸರ್ಕಾರ ರಚನೆಯಾಗಿ ಎರಡು ದಿನದ ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ಗೋಮೂತ್ರದಿಂದ ವಿಧಾನಸೌಧವನ್ನು ಸ್ವಚ್ಛಗೊಳಿಸಿ ಶುದ್ದೀಕರಣ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+