ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಬ್ರಹ್ಮಾಸ್ತ್ರ! ಏನದು ಗೊತ್ತಾ?

ಬಿಜೆಪಿ & ಕಾಂಗ್ರೆಸ್ ನಡುವೆ ಐಟಿ ಫೈಟ್ ವಿಚಾರ ಜೋರಾಗಿರುವ ಸಮಯದಲ್ಲೇ, ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಹಾಗಾದರೆ ಸಿಎಂ ಸಿದ್ದರಾಮಯ್ಯ, ಇದೀಗ ಬಿಜೆಪಿ ನಾಯಕರ ವಿರುದ್ಧ ಪ್ರಯೋಗಿಸಿದ ಅಸ್ತ್ರ ಯಾವುದು ಗೊತ್ತಾ? ಬಿಜೆಪಿ ಸರ್ಕಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದು ಏನು?

ಸಿಎಂ ಸಿದ್ದರಾಮಯ್ಯ ಈ ಹಿಂದೆ ಕರ್ನಾಟಕದಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, 'ತಮ್ಮ 4 ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಯುನಿಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸದೆ, ಬರೀ ಕಮಿಷನ್ ಕೊಳ್ಳೆ ಹೊಡೆಯುವುದರಲ್ಲೇ ಮಗ್ನವಾಗಿದ್ದ ಬಿಜೆಪಿ ಸರ್ಕಾರದ ಪಾಪದ ಫಲವನ್ನು ನಾಡಿನ ಜನ ಅನುಭವಿಸುವಂತಾಗಿದೆ.' ಅಂತಾ ಬಿಜೆಪಿ ನಾಯಕರಿಗೆ ಸಿಎಂ ಸಿದ್ದು ಗುದ್ದು ನೀಡಿದ್ದಾರೆ.

Karnataka CM Siddaramaiah allegations on BJP government

'ಬಿಜೆಪಿ ಕರ್ಮಕಾಂಡಗಳನ್ನು ತಿಳಿಯಲು...'

ಹಾಗೇ ತಮ್ಮ ಮಾತು ಮುಂದುವರಿಸಿ '2013 ರಿಂದ 2018ರ ನಮ್ಮ ಸರ್ಕಾರದ ಅವಧಿಯಲ್ಲಿ 11,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿ ಒಟ್ಟು ಉತ್ಪಾದನೆಯನ್ನು ದುಪ್ಪಟ್ಟುಗೊಳಿಸಿದ್ದೆವು. ಹಿಂದಿನ ಬಿಜೆಪಿ ಸರ್ಕಾರ ಸೌರ ವಿದ್ಯುತ್, ಪವನ ವಿದ್ಯುತ್ ಹಾಗೂ ಥರ್ಮಲ್ ವಿದ್ಯುತ್ ಉತ್ಪಾದನೆ ಹೆಚ್ಚಿಸುವತ್ತ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಂಡಿದ್ದರೆ ಇಂದಿನ ಪರಿಸ್ಥಿತಿಯೇ ಬೇರೆಯದಾಗಿರುತ್ತಿತ್ತು. ಕರ್ನಾಟಕವನ್ನು ಕತ್ತಲಿಗೆ ದೂಡಿದ ಬಿಜೆಪಿಯ ಕರ್ಮಕಾಂಡಗಳನ್ನು ತಿಳಿಯಲು ಈ ವೀಡಿಯೋ ನೋಡಿ.' ಅಂತಾ ಸಿಎಂ ಟ್ವೀಟ್ ಮಾಡಿ ಹೊಸ ಬಾಂಬ್ ಸಿಡಿಸಿದ್ದಾರೆ.

ಇತ್ತ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಈ ರೀತಿಯಾಗಿ ಗುದ್ದು ನೀಡಿದ್ರೆ, ಮತ್ತೊಂದು ಕಡೆ ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡುತ್ತಿದೆ. ಅದ್ರಲ್ಲೂ ರಾಜ್ಯದಲ್ಲಿ ನಡೆದಿರುವ ಐಟಿ ದಾಳಿ ವಿಚಾರವನ್ನ ಮುಂದಿಟ್ಟು ಕಾಂಗ್ರೆಸ್ ನಾಯಕರ ಬಗ್ಗೆ ವಾಗ್ದಾಳಿ ನಡೆಸುತ್ತಿದೆ ಬಿಜೆಪಿ. ಹಾಗಾದ್ರೆ ಇಂದು ಬಿಜೆಪಿ ಹೇಳಿದ್ದು ಏನು ಗೊತ್ತಾ? ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

'ರಾಜ್ಯವನ್ನು ಲೂಟಿ ಹೊಡೆದು...'

ಬಿಜೆಪಿ ಆರೋಪದ ಪ್ರಕಾರ, 'ರಾಜ್ಯದ #ATMSarkara ಅಲಿಯಾಸ್‌ #ಕಲೆಕ್ಷನ್ ಮಾಸ್ಟರ್‌ ಸರ್ಕಾರ ಉರ್ಫ್ #ಕಮಿಷನ್‌ ಏಜೆಂಟ್‌ಗಳ ಸರ್ಕಾರ ಯಾನೆ @INCKarnataka, ನಾಲ್ಕು ತಿಂಗಳಲ್ಲಿ ಬೇಕಾಬಿಟ್ಟಿಯಾಗಿ ರಾಜ್ಯವನ್ನು ಲೂಟಿ ಹೊಡೆದು, ಮಾಡಬಾರದ ಅನಾಚಾರಗಳೆಲ್ಲವನ್ನೂ ಮಾಡಿ, ಈಗ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿರುವುದು ಅಸಹ್ಯದ ಪರಮಾವಧಿ.'

'ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ಗ್ಯಾರಂಟಿ ಎಂಬ ಹೆಸರಿನಲ್ಲಿ, ಕಿವಿ ಮೇಲೆ ಬಣ್ಣ ಬಣ್ಣದ ಹೂವಿಟ್ಟು, ತನ್ನ ಮನೆ ಕಾಯುವ ಕೆಲವು ಆಯ್ದ ಗುತ್ತಿಗೆದಾರರಿಂದ ನಿರಂತರವಾಗಿ ಸುಳ್ಳು ಹೇಳಿಸಿ, ಅಧಿಕಾರಕ್ಕೇರಿದ ಕಾಂಗ್ರೆಸ್‌, ತಾನು ಅಧಿಕಾರಕ್ಕೆ ಬಂದ ಮೇಲೆ ಮಾಡಿದ್ದೆಲ್ಲವೂ ಮೋಸ, ವಂಚನೆ, ವಚನ ಭ್ರಷ್ಟತೆ ಮತ್ತು ಭ್ರಷ್ಟಾಚಾರ.' ಎಂದು ಆರೋಪಿಸಿದೆ ಬಿಜೆಪಿ.

ನುಡಿದದ್ದಕ್ಕೆಲ್ಲಾ ಸಂಪೂರ್ಣ ತದ್ವಿರುದ್ಧ

ಹೀಗೆ ಸರಣಿ ಟ್ವೀಟ್ ಮೂಲಕ ಬಿಜೆಪಿ, 'ನುಡಿದಂತೆ ನಡೆದಿದ್ದೇವೆ ಎಂದು ಸಿಎಂ @siddaramaiah ಅವರು ಮತ್ತು ಡಿಸಿಎಂ @DKShivakumar ಅವರು ಹೇಳುವುದು ಕೇವಲ ಜಾಹಿರಾತಿನಲ್ಲಿ ಮಾತ್ರ. ರಾಜ್ಯವನ್ನು ದೆಹಲಿಯ ಹೈಕಮಾಂಡ್‌ಗೆ #ATM ಮಾಡುವಲ್ಲಿ ಮಾತ್ರ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ ಹೊರತು, ಉಳಿದೆಲ್ಲಾ ವಲಯಗಳಲ್ಲಿ ನುಡಿದದ್ದಕ್ಕೆಲ್ಲಾ ಸಂಪೂರ್ಣ ತದ್ವಿರುದ್ಧ.' ಎಂದಿದೆ ಕಮಲ ಪಾಳಯ.

'ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ಎಂದು ಹೇಳಿ, ಒಂದು ಕೆಜಿ ಅಕ್ಕಿಯನ್ನು ಸಹ ಇದುವರೆಗೂ ನೀಡಿಲ್ಲ. ಕೇಂದ್ರ ಸರ್ಕಾರ ನೀಡುವ 05 ಕೆಜಿ ಅಕ್ಕಿಯಲ್ಲಿ 02 ಕೆಜಿ ಅಕ್ಕಿ ಕಡಿತ ಮಾಡಿದ್ದೇ ಕಾಂಗ್ರೆಸ್‌ ಸರ್ಕಾರದ ಮಹಾನ್‌ ಸಾಧನೆ. ನಿಜಕ್ಕೂ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದ್ದರೆ, ಕೇಂದ್ರ ಸರ್ಕಾರ ನೀಡುವ 05ಕೆಜಿ ಅಕ್ಕಿ ಜೊತೆ, ರಾಜ್ಯ ಸರ್ಕಾರದ 10 ಕೆಜಿ ಅಕ್ಕಿ ಸೇರಿ, ಒಟ್ಟು 15 ಕೆಜಿ ಅಕ್ಕಿ ಬಡವರ ಮನೆ ತಲುಪಬೇಕಾಗಿತ್ತು. ಆದರೆ ಅನ್ನಭಾಗ್ಯದ ಅಕ್ರಮದ "ಮನಿ" ಕಾಂಗ್ರೆಸ್ಸಿಗರ ಮನೆ ತಲುಪಿದೆ ಹೊರತು, ಬಡವರ ಹಸಿವನ್ನು ಮತ್ತಷ್ಟು ಹೆಚ್ಚಿಸಿದೆ.' ಎಂಬ ಗಂಭೀರ ಆರೋಪ ಮಾಡಿದೆ ಬಿಜೆಪಿ.

ಲೋಡ್‌ ಶೆಡ್ಡಿಂಗ್‌ ಹೇರಿ

'ಪ್ರತಿ ಮನೆಗೆ 200 ಯೂನಿಟ್‌ ಕರೆಂಟ್‌ ಫ್ರೀ, ಮಾದೇವಪ್ಪಂಗೂ ಫ್ರೀ, ಕಾಕಾ ಪಾಟೀಲ್‌ಗೂ ಫ್ರೀ ಎಂದು ಹೇಳಿದ ಸಿದ್ದರಾಮಯ್ಯರವರು, ರಾಜ್ಯದ ಒಂದೇ ಒಂದು ಮನೆಗೂ ಇದುವರೆಗೂ 200 ಯೂನಿಟ್ ಕರೆಂಟ್‌ ಫ್ರೀ ಕೊಟ್ಟಿಲ್ಲ. ಬದಲಿಗೆ 200 ಯೂನಿಟ್‌ ಕರೆಂಟ್‌ ಫ್ರೀ ಕೊಡುತ್ತಾರೆಂದು ಮತ ನೀಡಿದ ಮತದಾರ ಪ್ರಭುಗಳಿಗೆ ಲೋಡ್‌ ಶೆಡ್ಡಿಂಗ್‌ ಹೇರಿ, ಅವರನ್ನು ಸಂಪೂರ್ಣ ಕತ್ತಲಲ್ಲಿರಿಸಿದ್ದಾರೆ.' ಎಂದು ಗಂಭೀರ ಆರೋಪ ಮಾಡಿದೆ ಬಿಜೆಪಿ.

'ಇನ್ನು ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2000 ಎಂದು ಹೇಳಿದ ಗೃಹಲಕ್ಷ್ಮಿಯ ನೋಂದಣಿ ಸಮಯದಲ್ಲಿಯೆ, ಗೋಲ್‌ ಮಾಲ್‌ ಆರಂಭಿಸಿದ್ದ ಸರ್ಕಾರ, @RahulGandhi ಅವರನ್ನು ಕರೆಸಿ, ರಾಜ್ಯದ ಜನರ ಅಮೂಲ್ಯ ತೆರಿಗೆ ಹಣವನ್ನು ವ್ಯಯಿಸಿ ಸಮಾವೇಶ ಮಾಡಿದ್ದಷ್ಟೆ. ಇದುವರೆಗೂ ನೋಂದಣಿ ಮಾಡಿಸಿದ್ದ ಬಹುತೇಕರಿಗೆ ಹಣ ಬಂದಿಲ್ಲ. ಗೃಹಲಕ್ಷ್ಮಿ ಯೋಜನೆಯ ಹಣ ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಗೃಹಲಕ್ಷ್ಮಿಯರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.' ಎಂದಿದೆ ಕರ್ನಾಟಕ ಬಿಜೆಪಿ.

ಉಚಿತ ವಿದ್ಯುತ್ ವಿರುದ್ಧ ಆರೋಪ

ಹಾಗೇ ಮತ್ತೊಂದು ಕಡೆ, 'ಇನ್ನು ನಿರುದ್ಯೋಗಿಗಳಿಗೆ ನೀಡುವ ಸಹಾಯಧನದ ಯುವನಿಧಿ ಯೋಜನೆ, ಮಹೂರ್ತದಲ್ಲಿಯೇ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಮುಗಿಸಿ, ಡಬ್ಬಾ ಸೇರಿದ ಸಿನಿಮಾದಂತೆ. ಸಂಪೂರ್ಣ ಉಚಿತ ಪ್ರಯಾಣ ಎಂದು ಹೇಳಿದ್ದ ಶಕ್ತಿ ಯೋಜನೆಗೆ ನೂರೆಂಟು ಕಂಡೀಷನ್‌!! ನೇಕಾರರಿಗೆ ಕೈಮಗ್ಗಗಳಿಗೆ ಉಚಿತ ವಿದ್ಯುತ್‌ ಕೇವಲ ಘೋಷಣೆಗೆ ಮಾತ್ರ ಸೀಮಿತವಾಯಿತು, ನಿಮ್ಮ ದಮ್ಮಯ್ಯಾ, ನಮಗೆ ಉಚಿತ ವಿದ್ಯುತ್‌ ಬೇಡ, ಹಿಂದಿನ ಸರ್ಕಾರದ ಅವಧಿಯಲ್ಲಿ ನಮಗೆ ನಿರಂತರವಾಗಿ ನೀಡುತ್ತಿದ್ದ ವಿದ್ಯುತ್‌ ಕೊಡಿ ಸಾಕು ಎನ್ನುವಷ್ಟರ ಮಟ್ಟಿಗೆ ನೇಕಾರರು ಕೈ ಸರ್ಕಾರದ ನೀತಿಗಳಿಂದ ಹೈರಾಣಾಗಿದ್ದಾರೆ.' ಎಂದು ಹೇಳಿದೆ ಬಿಜೆಪಿ.

ಹಾಗೇ 'ತನ್ನ ನಿಷ್ಠ ಗುತ್ತಿಗೆದಾರರಿಂದ ಬಿಜೆಪಿ ಸರ್ಕಾರದ ಮೇಲೆ 40% ಎಂಬ ಸುಳ್ಳು ಆರೋಪ ಮಾಡಿದ್ದ ಕಾಂಗ್ರೆಸ್‌, ಈಗ 80% ಕಮಿಷನ್‌ ಪೀಕುತ್ತಿದೆ ಎಂಬುದಕ್ಕೆ, ಈಗ ಅದೇ ಗುತ್ತಿಗೆದಾರರ ಮನೆಯಲ್ಲಿ ಸಿಕ್ಕ ₹102 ಕೋಟಿಯೇ ಸಾಕ್ಷಿ.' ಎಂಬ ಆರೋಪವನ್ನೂ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಹೊರಿಸಿದೆ.

ಅಂತಿಮವಾಗಿ, 'ಮೀನುಗಾರರಿಗೆ, ರೈತರಿಗೆ ಪ್ರಣಾಳಿಕೆಯಲ್ಲಿ ಏನು ಘೋಷಿಸಿದ್ದೇವೆಂಬುದನ್ನು , ಕರ್ನಾಟಕವನ್ನು ಲೂಟಿ ಮಾಡುವ ಭರದಲ್ಲಿ ಕಾಂಗ್ರೆಸ್‌ ಮರೆತಂತೆ ಕಾಣಿಸುತ್ತಿದೆ. ಹೀಗೆ ಪ್ರತಿಯೊಂದು ವಲಯದಲ್ಲಿ ನುಡಿದಂತೆ ನಡೆಯದೇ, ರಾಜ್ಯದ ಇತಿಹಾಸದಲ್ಲಿ ಸರ್ಕಾರವೊಂದು ತನ್ನ ನಾಲ್ಕು ತಿಂಗಳ ಆಡಳಿತದಲ್ಲಿ ಅತಿ ಹೆಚ್ಚು ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವುದು ಇದೇ ಮೊದಲು. ಕಾಂಗ್ರೆಸ್‌ಗೆ ಬೇರೆಯವರು ಡ್ಯಾಮೇಜ್‌ ಮಾಡಿಲ್ಲ. ತನ್ನ ಸ್ವಯಂಕೃತ ತಪ್ಪುಗಳಿಂದ ತನಗೆ ತಾನೇ ಡ್ಯಾಮೇಜ್‌ ಮಾಡಿಕೊಂಡಿದೆ.'

'ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳದೇ, ರಾಜ್ಯದ ಜನತೆಯ ನೀರಿಕ್ಷೆಗಳಿಗೆ ತಣ್ಣೀರೆರಚಿ, ಲೆಕ್ಕಾಚಾರಗಳೆಲ್ಲವನ್ನೂ ತಲೆಕೆಳಗು ಮಾಡಿ, ಸಂಪದ್ಭರಿತ ರಾಜ್ಯವನ್ನು ದಿವಾಳಿ ಮಾಡಿ, ಈಗ ಡ್ಯಾಮೇಜ್‌ ಕಂಟ್ರೋಲ್‌ ಮಾಡುತ್ತೇವೆಂಬುದು ನಾಚಿಕೆಗೇಡಿನ ಸಂಗತಿಯಲ್ಲದೆ ಮತ್ತೇನು..??!!' ಎಂದು ಪ್ರಶ್ನೆ ಮಾಡಿದೆ ಕರ್ನಾಟಕ ಬಿಜೆಪಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+