ನಟ ಪುನೀತ್ ರಾಜ್‌ಕುಮಾರ್ ನಿಧನ: ನಟ-ನಟಿಯರ ಸಂತಾಪ
ಬೆಂಗಳೂರು, ಅಕ್ಟೋಬರ್ 29: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಂದು(ಅ.29)ರಂದು ಕೊನೆಯುಸಿರೆಳೆದಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದ ಪುನೀತ್ ರಾಜ್‌ಕುಮಾರ್ ಈಗ ನೆನಪು ಮಾತ್ರ, ಪುನೀತ್ ಇಂದು ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸಿದ್ದಾರೆ.
ಪುನೀತ್ ಅವರು ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು, ಅಪ್ಪು ಸಿನಿಮಾ ಮೂಲಕ ನಾಯಕ ನಟರಾಗಿ ಯಶಸ್ಸು ಪಡೆದಿದ್ದರು. ಶುಕ್ರವಾರ ಜಿಮ್‌ನಲ್ಲಿ ವರ್ಕ್ಔಟ್ ಮಾಡುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ರಮಣಶ್ರೀ ಕ್ಲಿನಿಕ್‌ಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು.
ಹೃದಯಾಘಾತಕ್ಕೆ ಒಳಗಾಗಿದ್ದ ಪುನೀತ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
|
ಸೋನು ಸೂದ್ ಕಂಬನಿ
ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಲೇ ರಿಯಲ್ ಹೀರೋ ಎನಿಸಿಕೊಂಡಿರುವ ಬಾಲಿವುಡ್ ನಟ ಸೋನುಸೂದ್ ' ಹೃದಯ ವಿದ್ರಾವಕ, ನಿಮ್ಮನ್ನು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತೇನೆ ಸಹೋದರ ಎಂದು ಟ್ವೀಟ್ ಮಾಡಿದ್ದಾರೆ.
|
ಪ್ರಕಾಶ್ ರಾಜ್ ಸಂತಾಪ
ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡಾ ಟ್ವೀಟ್ ಮಾಡಿದ್ದು, ಬೇಗ ಹೋದೆ ನನ್ನ ಪ್ರೀತಿಯ ಅಪ್ಪು, ನಾನು ಛಿದ್ರಗೊಂಡಿದ್ದೇನೆ, ಹೃದಯ ಒಡೆದುಹಹೋಗಿದೆ, ಇದು ಸರಿಯಲ್ಲ ಎಂದು ಹೇಳಿದ್ದಾರೆ.
|
ಮಹೇಶ್ ಬಾಬು ಟ್ವೀಟ್
ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ಕೇಳಿ ಆಘಾತವಾಯಿತು, ತೀವ್ರ ದುಃಖವಾಯಿತು, ನಾನು ಭೇಟಿಯಾದ ಮತ್ತು ಮಾತುಕತೆ ನಡೆಸಿದ ಅತ್ಯಂತ ವಿನಮ್ರ ವ್ಯಕ್ತಿಗಳನ್ನು ಅವರೊಬ್ಬರು. ಅವರ ಕುಟುಂಬ ಹಾಗೂ ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.
|
ಅಪ್ಪು ನಿಧನಕ್ಕೆ ಖುಷ್ಬೂ ಸಂತಾಪ
ಜೀವನ ಎಂಬುದು ಅನಿರೀಕ್ಷಿತವಾದದ್ದು, ಸಾಧ್ಯವಾದಷ್ಟು ನಗುವನ್ನು ಚೆಲ್ಲಿ, ದ್ವೇಷ ಇಟ್ಟುಕೊಳ್ಳಬೇಡಿ, ಕೇವಲ ಸಂತೋಷವನ್ನು ಹಂಷಿ ಎಂದು ಟ್ವೀಟ್ ಮಾಡಿದ್ದಾರೆ.
ನಿಮ್ಮಂತಹ ಅಬ್ಧುತ ವ್ಯಕ್ತಿಯನ್ನು ಕಳೆದುಕೊಂಡಿರುವುದು ಹೃದಯ ಒಡೆದಂತಾಗಿದೆ ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ.











Click it and Unblock the Notifications