ಶ್ರೀರಂಗಪಟ್ಟಣದ ಕೆ.ಶೆಟ್ಟಿಹಳ್ಳಿ ಕ್ರಾಸ್ ಪ್ರಯಾಣಿಕರ ಯಮಪಾಶ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ,ಮಾರ್ಚ್,16: ಮೈಸೂರಿನಿಂದ ಬೆಂಗಳೂರಿಗೆ ಹೋಗುವವರು ಮತ್ತು ಬೆಂಗಳೂರಿನಿಂದ ಮೈಸೂರಿನತ್ತ ಬರುವವರು ಶ್ರೀರಂಗಪಟ್ಟಣ ಬಳಿಯ ಕೆ.ಶೆಟ್ಟಹಳ್ಳಿಯ ತಿರುವಿನ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಕಾರಣ ಈ ತಿರುವು ರಸ್ತೆ ಅಪಘಾತ ಆಹ್ವಾನಿಸುವ ಮೂಲಕ ಜನರ ಪಾಲಿಗೆ ಯಮನಾಗಿ ಗೋಚರಿಸುತ್ತಿದೆ.

ಮೈಸೂರು-ಬೆಂಗಳೂರು ಹೆದ್ದಾರಿಯಾಗಿರುವುದರಿಂದ ಈ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಓಡಾಡುತ್ತಿರುತ್ತವೆ. ಆದರೆ ಇತ್ತೀಚೆಗೆ ಈ ತಿರುವು ಹಲವರನ್ನು ಬಲಿಪಡೆದಿದೆ. ಮಾರ್ಚ್ 1ರಿಂದ ಇಲ್ಲಿಯವರೆಗೆ 4 ಅಪಘಾತಗಳು, ಕಳೆದೆರಡು ತಿಂಗಳಿನಿಂದ 15ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ನಡೆದಿವೆ. ಒಟ್ಟು 15 ಮಂದಿ ಮೃತಪಟ್ಟಿದ್ದಾರೆ.[ಸ್ವಿಫ್ಟ್ ಕಾರಿಗೆ ಮಿನಿ ಲಾರಿ ಡಿಕ್ಕಿ: ಒಂದೇ ಕುಟುಂಬದ 4 ದುರ್ಮರಣ]

K.Shettihalli cross very dangerous to Bengaluru to Mysuru travellers

ವೇಗವಾಗಿ ಬರುವ ವಾಹನಗಳು ತಿರುವಿನಲ್ಲಿ ಚಾಲಕರ ನಿಯಂತ್ರಣ ಕಳೆದುಕೊಳ್ಳುವುದೇ ಕೆ.ಶೆಟ್ಟಹಳ್ಳಿಯ ತಿರುವಿನಲ್ಲಿ ಅಪಘಾತ ಸಂಭವಿಸಲು ಮುಖ್ಯ ಕಾರಣ. ವಾಹನಗಳು ಹೆಚ್ಚಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯುವುದರಿಂದ ಅಪಘಾತಗಳು ಉಂಟಾಗುತ್ತವೆ.

ಕೆಲವರ ಪ್ರಕಾರ ಹೆದ್ದಾರಿಗೆ ನಿರ್ಮಿಸಿರುವ ಅವ್ಶೆಜ್ಞಾನಿಕ ತಿರುವು ಅಪಘಾತಕ್ಕೆ ಕಾರಣವಾಗಿದೆ. ಜತೆಗೆ ತಿರುವು ನಿರ್ಮಿಸಿರುವ ಹೆದ್ದಾರಿ ಪ್ರಾಧಿಕಾರ ಅಥವಾ ಪೊಲೀಸ್ ಇಲಾಖೆ ಈ ತಿರುವಿನ ಬಗ್ಗೆ ಯಾವುದೇ ಮಾಹಿತಿ ಫಲಕ ಅಳವಡಿಸಿಲ್ಲ. [ಸಿಗ್ನಲ್ ಜಂಪ್ ಮಾಡಲು ಹೋಗಿ ಸಾವನ್ನಪ್ಪಿದ ದಂಪತಿ]

ಇದರಿಂದಾಗಿ ಬೆಂಗಳೂರು ಕಡೆಯಿಂದ ವೇಗವಾಗಿ ಬರುವ ವಾಹನಗಳು ಈ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗುತ್ತಿವೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಇಷ್ಟೆಲ್ಲಾ ಅಪಘಾತಗಳು ನಡೆದರೂ ವಾಹನಗಳ ವೇಗವನ್ನು ತಡೆಯುವಲ್ಲಿ ಇಲ್ಲಿ ಯಾವುದೇ ರಸ್ತೆ ಉಬ್ಬುಗಳಾಗಲೀ ಇಲ್ಲ. ಇರುವ ಜಿಗ್ ಜಾಗ್ ಬ್ಯಾರಿಕೇಡ್ ಗಳು ಸಂಪೂರ್ಣ ಮುರಿದು ಬಿದ್ದಿವೆ.[ಅಪಘಾತವಾದಾಗ ಜೀವ ಉಳಿಸಲು ನೆರವಾಗಿ]

ಇದರಿಂದಾಗಿಯೇ ಬೆಂಗಳೂರು ಕಡೆಯಿಂದ ವೇಗವಾಗಿ ಬರುವ ವಾಹನಗಳು ಕೆಲವೊಮ್ಮೆ ಚಾಲಕನ ನಿಯಂತ್ರಣ ತಪ್ಪಿ ತಿರುವಿನ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸುತ್ತಿವೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸುವವರೇ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
K.Shettihalli cross very dangerous to Bengaluru to Mysuru travellers.This is in near of Srirangapatna. Many more road accident held here. But no one officials worried about this cross. don't put the guide panel.
Please Wait while comments are loading...