Get Updates
Get notified of breaking news, exclusive insights, and must-see stories!

ಇಲ್ಲಿ ಗುಂಡಿ ಮುಚ್ಚಲು ದುಡ್ಡಿಲ್ಲ, ವಯನಾಡಿಗೆ 100 ಮನೆ ಗಿಫ್ಟ್‌ ಏಕೆ? ಜೆಡಿಎಸ್‌

ರಾಜ್ಯದಲ್ಲೇ ಹಲವು ಸಮಸ್ಯೆಗಳಿದ್ದು, ರಾಜ್ಯ ಕಾಂಗ್ರೆಸ್‌ ಸರ್ಕಾರವು ಪಕ್ಕದ ಕೇರಳದ ಅಭಿವೃದ್ಧಿ ಮಾಡಲು ಮುಂದಾಗಿದೆ ಎನ್ನುವ ದೊಡ್ಡ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಪ್ರಿಯಾಂಕಾ ಗಾಂಧಿ ಗೆಲುವು ಸಾಧಿಸಿದ ವಯನಾಡಿಗೆ ರಾಜ್ಯ ಸರ್ಕಾರವು 100 ಮನೆ ಕಟ್ಟಿಕೊಡಲು ಮುಂದಾಗಿದೆ ಎಂದು ಜೆಡಿಎಸ್‌ ಆರೋಪ ಮಾಡಿದೆ. ಇದು ಕರುನಾಡಿಗೆ ಮಾರಿ, ಪರ ರಾಜ್ಯಕ್ಕೆ ಉಪಕಾರಿ, ಹೈಕಮಾಂಡ್‌ ಗುಲಾಮಗಿರಿ ಎಂದು ವ್ಯಂಗ್ಯ ಮಾಡಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಸಾವಿರಾರು ರಸ್ತೆಗಳು ಗುಂಡಿಬಿದ್ದು ಹಾಳಾಗಿವೆ. ರಸ್ತೆಗಳು ಅಭಿವೃದ್ಧಿ ಕಾಣದೆ ಜನರ ನರಕಯಾತೆ ಅನುಭವಿಸುತ್ತಿದ್ದಾರೆ. ಆದರೆ, ಹೈಕಮಾಂಡ್‌ ಗುಲಾಮಗಿರಿ ಮಾಡುತ್ತಿರುವ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು, ಕೇರಳ ಸಂಸದರನ್ನು ಮೆಚ್ಚಿಸಲು ಕರ್ನಾಟಕದ ಬೊಕ್ಕಸ ಬರಿದು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದೆ.

JDS Accuses CM Siddaramaiah Of Favoring Priyanka Gandhi s Wayanad Constituency

ಪ್ರಿಯಾಂಕಾ ಗಾಂಧಿ ಸಂಸದರಾಗಿರುವ ವಯನಾಡಿನಲ್ಲಿ 100 ಮನೆಗಳನ್ನು ಕಟ್ಟಿಕೊಡಲು ಹಾಗೂ ಭೂಮಿ ಖರೀದಿಯ ವೆಚ್ಚವನ್ನೂ ಬರಿಸುವುದಾಗಿ ಕೇರಳ ಸಿಎಂಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಯನಾಡಿಗೆ ಬಂದಿರುವುದೇ ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ ಎಂದು ಆಕ್ರೋಶ ಹೊರಹಾಕಿದೆ.

ಕೇರಳದಲ್ಲಿ ಆನೆ ದಾಳಿಗೆ ಬಲಿಯಾದರೂ ಕರ್ನಾಟಕದ ದುಡ್ಡನ್ನೇ ಕೊಡಬೇಕು. ಈಗ ವಯನಾಡಿಗೆ 100 ಮನೆ ಕೊಟ್ಟಿಕೊಡುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟೋ ಕುಟುಂಬಗಳು ಸೂರಿಲ್ಲದೇ ನಿರ್ಗತಿಕರಾಗಿದ್ದಾರೆ. ಆದರೆ, ಇಟಲಿ ಮಾತೆ ಮತ್ತು ಅವರ ಮಕ್ಕಳನ್ನು ಮೆಚ್ಚಿಸಲು ಸಿದ್ದರಾಮಯ್ಯ ಅವರು ನಮ್ಮ ನಾಡಿನ ತೆರಿಗೆ ಹಣ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

JDS Accuses CM Siddaramaiah Of Favoring Priyanka Gandhi s Wayanad Constituency

ರಾಜ್ಯದಲ್ಲಿ 350ಕ್ಕೂ ಹೆಚ್ಚು ಶಿಶುಮರಣಗಳು, 40 ತಾಯಂದಿರ ಸಾವುಗಳು, ವಕ್ಫ್ ಜಿಹಾದ್‌ನಿಂದ ಭೂಮಿಯನ್ನು ಕಳೆದುಕೊಳ್ಳುವ ರೈತರು, ವೇತನವಿಲ್ಲದ ಆಂಬ್ಯುಲೆನ್ಸ್ ಚಾಲಕರು ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಬೆಂಗಳೂರಿನ ಮೂಲ ಸೌಕರ್ಯಗಳು ಕುಸಿದು ರಾಜ್ಯವು ಹೀನಾಯ ಸ್ಥಿತಿಯಲ್ಲಿದೆ. ಆದರೂ, ತೆರಿಗೆದಾರರ ಹಣವನ್ನು ಕೇರಳದಲ್ಲಿ ಭೂಮಿ ಖರೀದಿಸಲು ಮತ್ತು ಮನೆಗಳನ್ನು ನಿರ್ಮಿಸಲು ಬೇರೆಡೆಗೆ ತಿರುಗಿಸಲಾಗುತ್ತಿದೆ. ಇದೊಂದು ರಾಜ್ಯ ಸರ್ಕಾರದ ದೊಡ್ಡ ಹಗರಣ ಎಂದು ಬಿಜೆಪಿ ಕೂಡ ಆರೋಪ ಮಾಡಿದೆ.

ಇದು ಕಿರೀಟ ರಾಜಕುಮಾರ ರಾಹುಲ್ ಗಾಂಧಿ ಅವರನ್ನು ಸಮಾಧಾನಪಡಿಸುವ ಒಂದು ಅಬ್ಬರದ ಪ್ರಯತ್ನ. ಕರ್ನಾಟಕಕ್ಕೆ ತನ್ನ ಜನರಿಗೆ ಆದ್ಯತೆ ನೀಡುವ ನಾಯಕರ ಅಗತ್ಯವಿದೆಯೇ ಹೊರತು ಬೇರೆಯವರಿಗೆ ತಲೆಬಾಗುವ ಏಜೆಂಟ್‌ಗಳಿಗಲ್ಲ. ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಇನ್ನು ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಬರೆದಿದ್ದಾರೆ ಎನ್ನಲಾದ ಪತ್ರವನ್ನು ಬಿಜೆಪಿ ಹಾಗೂ ಜೆಡಿಎಸ್‌ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದು, ಇದರಲ್ಲಿ ವಯನಾಡಿನಲ್ಲಿ 100 ಮನೆಗಳನ್ನು ಕಟ್ಟಿಕೊಡಲು ಹಾಗೂ ಅದರ ಭೂಮಿ ಖರೀದಿಯ ವೆಚ್ಚವನ್ನೂ ಬರಿಸುವುದಾಗಿ ಸಿಎಂ ಉಲ್ಲೇಖಿಸಿದ್ದಾರೆ ಎಂದು ವಿಪಕ್ಷಗಳು ಆರೋಪ ಮಾಡಿವೆ. ಈ ಮೂಲಕ ಹೈಕಮಾಂಡ್‌ ಅನ್ನು ಮೆಚ್ಚಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ದೂರಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+