Rain News: 48 ಗಂಟೆಯಲ್ಲಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಗ್ಯಾರಂಟಿ!

ಕರ್ನಾಟಕದಲ್ಲಿ ಮುಂಗಾರು ಮಳೆ ಕಣ್ಣಾಮುಚ್ಚಾಲೆ ಮುಂದುವರಿಸಿದ್ದು ಬರದ ಛಾಯೆಯ ನಡುವೆ ರೈತರು ನಲುಗಿ ಹೋಗಿದ್ದಾರೆ. ಅದರಲ್ಲೂ ಮಳೆಯನ್ನೇ ನಂಬಿ ಬದುಕುವ ಮತ್ತು ನೀರಾವರಿ ಸೌಲಭ್ಯ ಇಲ್ಲದ ಪ್ರದೇಶಗಳಲ್ಲಿ ನಡುಕ ಶುರುವಾಗಿದೆ. ಆಗಸ್ಟ್ ಮುಗಿಯುತ್ತಿದ್ರು ಭೂಮಿ ಒದ್ದೆಯಾಗುವಷ್ಟು ಮಳೆ ಸುರಿದಿಲ್ಲ. ಹೀಗಿದ್ದಾಗಲೇ ಹವಾಮಾನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಫಿಕ್ಸ್ ಆಗಿದೆ.

ಕಳೆದ 5-6 ವರ್ಷದಿಂದ ರಾಜ್ಯದಲ್ಲಿ ಉತ್ತಮವಾಗಿ ಮಳೆ ಸುರಿದಿತ್ತು. ಹೀಗಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದಿರಲಿಲ್ಲ. ಆದರೆ ಇದೀಗ ಮತ್ತೆ ಪ್ರಕೃತಿ ಮಾತೆಯ ಮನಿಸಿಗೆ ಕರ್ನಾಟಕ ಜನರು ನಲುಗಿದ್ದಾರೆ. ಅದರಲ್ಲೂ ಅನ್ನದಾತ ಪ್ರಭು ಕೃಷಿಕರು ಬರದ ಛಾಯೆಯ ನಡುವೆ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಮುಗಿಲು ನೋಡುತ್ತಾ ಮೋಡಗಳು ಮಳೆ ಸುರಿಸುವ ಮುನ್ಸೂಚನೆಗೆ ಕಾಯುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ರಾಜ್ಯದ ಉದ್ದಗಲಕ್ಕೂ ಭರ್ಜರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಅಬ್ಬರ ಜೋರಾಗುವುದು ಫಿಕ್ಸ್ ಆಗಿದೆ.

IMD Rain alert for these districts of Karnataka in next several days

ಯಾವ ಯಾವ ಜಿಲ್ಲೆಯಲ್ಲಿ ಮಳೆ?

ಹೌದು, ಈ ಬಾರಿ ಕರಾವಳಿ ಭಾಗಕ್ಕೆ ಭಾರಿ ಮಳೆ ಸುರಿದಿತ್ತು. ಬೇಸಿಗೆ ಸಮಯದಲ್ಲಿ ಇದೇ ಭಾಗದಲ್ಲಿ ಒಣಗಿ ಹೋಗಿದ್ದ ನದಿಗಳು ಮಳೆ ಆರಂಭ ಆಗುತ್ತಿದ್ದಂತೆ ತುಂಬಿ ತುಳುಕುತ್ತಿವೆ. ಹೀಗಾಗಿ ಜನರು ನಿಲ್ಲೋ ನಿಲ್ಲೋ ಮಳೆರಾಯ ಅಂತಿದ್ದಾರೆ. ಆದ್ರೆ ಮಳೆಗೆ ಜನರ ಕೋರಿಕೆ ಕೇಳಿಸಿಲ್ಲ ಹೀಗಾಗಿ ಮತ್ತೊಮ್ಮೆ ಕರಾವಳಿ ಭಾಗದಲ್ಲಿ ಭಾರಿ ಮಳೆ ಬೀಳುವ ಬಗ್ಗೆ ಸೂಚನೆ ಸಿಕ್ಕಿದೆ. ಕರಾವಳಿಯ ಕೆಲ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಸೆಪ್ಟೆಂಬರ್ 3ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಈ ಪಟ್ಟಿಯಲ್ಲಿ ಯಾವೆಲ್ಲಾ ಜಿಲ್ಲೆಗಳು ಇವೆ? ಎಲ್ಲೆಲ್ಲಿ ಮಳೆ ಸುರಿಯುತ್ತೆ? ಮುಂದೆ ಓದಿ.

ಮುಂದಿನ ಕೆಲ ದಿನಗಳ ಕಾಲ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ಸೇರಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು & ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗದಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಆದರೆ ಅತಿಹೆಚ್ಚು ಪ್ರಮಾಣದಲ್ಲಿ ಮಳೆ ಬೀಳದಿದ್ದರು ಒಂದಷ್ಟು ಮಳೆ ಸುರಿಯುತ್ತಿರುವುದು ರೈತರಿಗೆ ಖುಷಿ ಕೊಟ್ಟಿದೆ.

ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆ ಕಾಲ?

ಈ ಬಾರಿ ಮಳೆಗಾಲ ಕೂಡ ಬೇಸಿಗೆಯಂತೆ ಭಾಸವಾಗುತ್ತಿದೆ. ಅದರಲ್ಲೂ ರಾಜಧಾನಿ ಜನ ಸೆಕೆಯ ತಾಪಕ್ಕೆ ನಲುಗಿ ಹೋಗಿದ್ದಾರೆ. ಇದೀಗ ಬೆಂಗಳೂರಿಗೂ ಗುಡ್ ನ್ಯೂಸ್ ಸಿಗುತ್ತಿದ್ದು ಮುಂದಿನ ಕೆಲವು ದಿನಗಳ ಕಾಲ ಉತ್ತಮವಾಗಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಒಂದಷ್ಟು ರಿಲೀಫ್ ಸಿಗಲಿದೆ. ಅದರಲ್ಲೂ ಬೆಂಗಳೂರು ಹೊರ ವಲಯದಲ್ಲಿ ಭಾರಿ ಮಳೆ ಕೊರತೆ ಎದುರಾಗಿದ್ದು ಬೋರ್‌ಗಳು ಕೂಡ ಬತ್ತಿ ಹೋಗುತ್ತಿವೆ. ಹೀಗಾಗಿ ಮಳೆ ಬಂದರೆ ಮಾತ್ರ ಕೆರೆಗಳು ತುಂಬಿ, ಬೋರ್‌ವೆಲ್‌ಗೆ ನೀರು ಮತ್ತೆ ಬರಲಿದೆ. ಇಲ್ಲ ಹೀಗೆ ಮಳೆ ಕೊರತೆ ಮುಂದುವರಿದರೆ ಸಂಕಷ್ಟ ಪಕ್ಕಾ.

IMD Rain alert for these districts of Karnataka in next several days

ಒಟ್ನಲ್ಲಿ ರಾಜ್ಯದಲ್ಲಿ ಮಳೆ ಕೊರತೆ ಸಾಕಷ್ಟು ಸವಾಲು ತಂದಿದ್ದು, ರಾಜ್ಯ ಸರ್ಕಾರ ಕೂಡ ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಾಗಿದೆ. ಈ ಮಧ್ಯೆ ತಮಿಳುನಾಡು ಸರ್ಕಾರ ನೀರು ಬೇಕು ಅಂತಾ ಕಿರಿಕ್ ಜೋರು ಮಾಡಿದ್ದು ಇಬ್ಬರ ಕಿತ್ತಾಟ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದೆ. ಹೀಗಾಗಿ ರಾಜ್ಯದ ಜನ ಕೂಡ ಮಳೆ ಬರಲಿ ದೇವರೆ ಅಂತಾ ಬೇಡುತ್ತಿದ್ದಾರೆ. ಹಾಗೇ ರೈತ ಸಮುದಾಯ ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಾ ಕುಳಿತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ರೈತರಿಗೆ ಒಂದಷ್ಟು ರಿಲೀಫ್ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+