Karnataka rain: ರಾಜ್ಯಕ್ಕೆ ಮಳೆ ಕೊಂಚ ರಿಲೀಫ್, ಅ.9ರವರೆಗೆ ಸಾಧಾರಣ ಮಳೆ

ಬೆಂಗಳೂರು, ಅಕ್ಟೋಬರ್ 03: ಕರ್ನಾಟಕದ ಮಟ್ಟಿಗೆ ಮಳೆ ಮುಂದಿನ ಅಕ್ಟೋಬರ್ 9 ರವರೆಗೆ ಮುಂದುವರಿಯಲಿದೆ. ಈ ಪೈಕಿ ಅಬ್ಬರಿಸಿದ್ದ ಕರಾವಳಿ ಭಾಗದಲ್ಲಿ ಜೋರಾಗಿದ್ದ ಮಳೆ ಕೊಂಚ ಕಡಿಮೆಯಾಗಿದೆ. ಈ ಭಾಗದಲ್ಲಿ ಸಾಧಾರಣದಿಂದ ವ್ಯಾಪಕ ಮಳೆ ಸಾಧ್ಯತೆ ಇದೆ. ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಹ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಒಂದು ವಾರದಿಂದ ಹಳದಿ ಎಚ್ಚರಿಕೆ ಪಡೆದಿದ್ದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಜಿಲ್ಲೆಗಳಿಗೆ ಮಳೆರಾಯ ತುಸು ವಿರಾಮ ನೀಡಿದ್ದಾನೆ. ಈ ಭಾಗದಲ್ಲಿ ಮುಂದಿನ ಐದಾರು ದಿನ ಸಾಧಾರಣವಾಗಿ ಮಳೆ ಆಗಲಿದೆ.

IMD Predicts Normal to Moderate Rain Will Continue Till October 9 in Karnataka Several Districts

ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಮಾನ್ಯವಾಗಿ ಮಳೆ ಆಗಬಹುದು ಎಂದು ಅಂದಾಜಿಸಲಾಗಿದೆ. ಉಳಿದಂತೆ ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಬಿರುಸು ಮಳೆ ಸುರಿಯಲಿದೆ.

ರಾಜ್ಯದಲ್ಲಿ ಮತ್ತು ಶುಷ್ಕ ವಾತಾವರಣ?

ಸದ್ಯ ಮಳೆಯ ತಂಪು ವಾತಾವರಣ ಕಡಿಮೆ ಆಗಿದ್ದು ಇಡಿ ದಿನ ಶುಷ್ಕ ವಾತಾವರಣವೇ ನಿಧಾನವಾಗಿ ಏರಿಕೆ ಆಗುತ್ತದೆ. ಸಂಜೆ ನಂತರ ತೇವಭರಿತ ಗಾಳಿ ಬೀಸುತ್ತಿದೆ. ಇದನ್ನು ಬಿಟ್ಟರೆ ಸದ್ಯಕ್ಕೆ ಯಾವ ಗಂಭೀರ ಬದಲಾವಣೆಗಳು ಇಲ್ಲ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ, ಬೀದರ್, ಕಲಬುರಗಿ, ದಕ್ಷಿಣ ಕನ್ನಡ, ಬೆಳಗಾವಿ, ಉಡುಪಿ, ಬಾಗಲಕೋಟೆ, ಕೊಡಗು, ಚಿಕ್ಕಮಗಳೂರು, ಯಾದಗಿರಿ, ಶಿವಮೊಗ್ಗ ಜಿಲ್ಲೆಗಳಾದ್ಯಂತ ಉತ್ತಮ ಮಳೆ ದಾಖಲಾಗಿದೆ.

IMD Predicts Normal to Moderate Rain Will Continue Till October 9 in Karnataka Several Districts

ಹಲವೆಡೆ ಗರಿಷ್ಠ ತಾಪಮಾನ ದಾಖಲು

ರಾಜ್ಯದ ಗರಿಷ್ಠ ತಾಪಮಾನ ಮಂಡ್ಯ ಮತ್ತು ಕಾರವಾರದಲ್ಲಿ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಉಳಿದಂತೆ ಬೆಂಗಳೂರು ಎಚ್‌ಎಎಲ್ ಮತ್ತು ಬೀದರ್‌ ನಲ್ಲಿ 30 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ ಎಂದು ಇಲಾಖೆ ವರದಿ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ತುಂತುರು ಮಳೆ ಆಗಲಿದೆ. ಇಲ್ಲಿ ಸಹ ಮಳೆ ಕೊಂಚ ಬ್ರೇಕ್ ನೀಡುವ ಮುನ್ಸೂಚನೆ ಇದೆ. ಅಲ್ಲಲ್ಲಿ ಚದುರಿದಂತೆ ಮಳೆ ಆಗಬಹುದು. ಉಳಿದಂತೆ ಯಾವುದೇ ಅಬ್ಬರ ಮಳೆಯ ಲಕ್ಷಣಗಳು ಇಲ್ಲ. ನಗರದಲ್ಲಿ ತಾಪಮಾನದಲ್ಲಿ ಏರಿಕೆ ಕಂಡು ಬರುವ ಸಾಧ್ಯತೆಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+