Karnataka Weather Forecast: ರಾಜಾದ್ಯಂತ ಒಣ ಹವೆ ಎಚ್ಚರಿಕೆ! ಜಿಲ್ಲಾವಾರು ತಾಪಮಾನ ವರದಿ

ಬೆಂಗಳೂರು ಫೆಬ್ರವರಿ 18: ಕರ್ನಾಟಕ ರಾಜ್ಯದಲ್ಲಿ ಬೇಸಿಗೆಯ ಆರಂಭಿಕ ದಿನಗಳು ಅತ್ಯಧಿಕ ತಾಪಮಾನದಿಂದ ಕೂಡಿವೆ. ಉದ್ಯಾನ ನಗರಿಯಿಂದ ಹಿಡಿದು, ಬಯಲು ಸೀಮೆ, ರಾಜ್ಯ ಗಡಿ ಜಿಲ್ಲೆಗಳವರೆಗೆ ಒಂದೇ ತೆರನಾದ ವಾತಾವರಣ ನಿರ್ಮಾಣವಾಗಿದೆ. ಎಲ್ಲೆಲ್ಲೂ ರಣ ಬೀಕರ ಬಿಸಿಲು ಕಂಡು ಬರುತ್ತಿದೆ. ಸದ್ಯ ಒಣಹವೆ ನೋಡಿದರೆ, ಮುಂದಿನ ಎರಡು ತಿಂಗಳು ಉಷ್ಣ ಅಲೆಯ ಪ್ರಭಾವ ರಾಜ್ಯದಲ್ಲಿ ಹೇಗಿರಲಿದೆ ಎಂಬದುರ ಮುನ್ಸೂಚನೆ ಇದ್ದಂತೆ ಭಾಸವಾಗಿದೆ.

ಹವಾಮಾನ ಇಲಾಖೆ ಪ್ರಕಾರ, ರಾಜ್ಯದಲ್ಲಿ ಸ್ವಚ್ಛ ನೀಲಿ ಆಕಾಶ ಇದೆ. ಯಾವ ಭಾಗದಲ್ಲೂ ಮೋಡ ಕವಿದ, ಮಳೆ ವಾತಾವರಣ ಇಲ್ಲ. ಇದ್ದ ಚಳಿ ವಾತಾವರಣ ಎರಡು ವಾರಗಳ ಹಿಂದೆಯೇ ಕಣ್ಮರೆಯಾಗಿದೆ. ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಕಾದ ನೆಲ-ರಸ್ತೆಗಳು, ಕಣ್ಣು ಕುಕ್ಕುವ ಸೂರ್ಯನ ಬಿಸಿಲಿಗೆ ಜನರು ತತ್ತರಿಸುತ್ತಿದ್ದಾರೆ.

IMD Predicdtion Temperature Increased in These Districts of Katnataka Weather Forecast

ಬೆಂಗಳೂರು, ತುಮಕೂರು, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ದಾವಣಗೆರೆ, ಹಾಸನ, ಶಿವಮೊಗ್ಗದಲ್ಲಿ ಉಷ್ಣ ಅಲೆ ಎಚ್ಚರಿಕೆ ನೀಡಲಾಗಿದೆ. ಈ ಭಾಗದಲ್ಲಿ ತಾಪಮಾನ ಏರುಗತಿಯಲ್ಲಿದೆ. ಆದರೆ ದಾವಣಗೆರೆ, ಹಾವೇರಿ, ಗದಗ, ಬೆಳಗಾವಿ, ವಿಜಯಪುರ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ಬೀದರ್, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ ಗರಿಷ್ಠ ಪ್ರಮಾಣ ತಲುಪಿದೆ.

ಮಾರ್ಚ್, ಏಪ್ರಿಲ್‌ಗೆ ಇನ್ನೂ ಸಂಕಷ್ಟ

ಮುಂದಿನ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉಷ್ಣ ಅಲೆಯ ಪ್ರಭಾವ ಹೇರಳ ಪ್ರಮಾಣ ಉಂಟಾಗಲಿದೆ. ಬೆಂಗಳೂರಿನಲ್ಲೇ ಏಪ್ರಿಲ್ ಹೊತ್ತಿಗೆ 37-39 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ನಗರದಲ್ಲಿ 2.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆ ಆಗಿದೆ.

ಇನ್ನೂ ಕಲಬುರಗಿಯಲ್ಲಿ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು 40 ಡಿಗ್ರಿ ಸೆ. ದಾಟುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಹೀಟ್ ವೇವ್ ಸೃಷ್ಟಿಯಾಗಿದೆ. ಜನರು ಹೈರಾಣಾಗಿದ್ದು, ಮನೆಯಿಂದ ಹೊರ ಬರಲು ಅಂಜುತ್ತಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ತಡರಾತ್ರಿ, ಮತ್ತು ಬೆಳಗ್ಗೆ ಕೊಂಚ ತಂಪು ಅನುಭವ ಉಂಟಾಗುತ್ತಿದೆ. ಪರಿಪೂರ್ಣವಾಗಿ ಸೆಕೆಯ ಅನುಭವ ಆಗುತ್ತಿಲ್ಲ ಎಂದು ತಿಳಿದು ಬಂದಿದೆ.

ದೇಶದ ಹವಾಮಾನ ಮುನ್ಸೂಚನೆ

ಇನ್ನೂ ದೆಹಲಿ ಸೇರಿದಂತೆ ಕೆಲವೆಡೆ ಬಿಸಿಲಿನ ಪ್ರಮಾಣ ನಿರಂತರವಾಗಿ ಏರಿಕೆ ಆಗುತ್ತಿದೆ. ದೇಶದ ಕೆಲವು ರಾಜ್ಯಗಳಲ್ಲಿ ಬಿಸಿಲಿ ಉಂಟಾದರೆ, ಕೆಲವೆಡೆ ಹಿಮಪಾತವಾಗುತ್ತಿದೆ. ಸೈಕ್ಲೋನ್ ಪ್ರಭಾದಿಂದ ಭಾರೀ ಮಳೆ ಎದುರಿಸಲಿವೆ ಎಂದು ಮಂಗಳವಾರದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+