Karnataka Rain: ಕೆಲವೇ ಕ್ಷಣಗಳಲ್ಲಿ 06 ಜಿಲ್ಲೆಗಳಿಗೆ ಭಾರೀ ಮಳೆ, 03 ದಿನದ ಹವಾಮಾನ ವರದಿ

ಬೆಂಗಳೂರು, ಅಕ್ಟೋಬರ್ 01: ಕರ್ನಾಟಕದಾದ್ಯಂತ ಅಬ್ಬರಿಸಿದ್ದ ಮಳೆರಾಯ ಇದೀಗ ಕೆಲವು ಕಡೆಗಳಲ್ಲಿ ಮಾತ್ರ ಸೀಮಿತವಾಗಿ ಅಬ್ಬರಿಸುತ್ತಿದ್ದಾರೆ. ಮಲೆನಾಡು ಕರಾವಳಿ ಭಾಗದ ಜಿಲ್ಲೆಗಳ ಬಳಿಕ ಉತ್ತರ ಹಾಗು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ವಿಸ್ತರಣೆ ಆಗಿದೆ. ಇಂದಿನಿಂದ ಮೂರು ದಿನ ಉತ್ತಮ ಮಳೆ ಆಗಲಿ. ಈ ಪೈಕಿ ಇಂದು ಮಂಗಳವಾರ ಅಕ್ಟೊಬರ್ 01 ರಂದು 06 ಜಿಲ್ಲೆಗಳಿಗೆ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಹೌದು, ಮುಂಗಾರು ಮಳೆ ಬಹುತೇಕ ಅಂತ್ಯದ ಕಡೆಗೆ ಬಂದಿದೆ. ಅಧಿಕೃತವಾಗಿ ಸೆಪ್ಟಂಬರ್ 30ರಂದು ಮುಂಗಾರು ಮಳೆ ಅಂತ್ಯಗೊಳ್ಳುತ್ತದೆ. ನಂತರ ಹಿಂಗಾರು ಮಳೆ ಆರಂಭವಾಗಬೇಕು. ಇದೀಗ ಮುಂಗಾರು ಮಳೆಯೇ ರಾಜ್ಯದ ವಿವಿಧೆಡೆ ಸಕ್ರಿಯವಾಗಿದೆ.

IMD Has Predicted For Heavy Rain For Karnataka s these Districts in Next 3 days see more

ಇಂದು 110 ಮಿಲಿ ಮೀಟರ್‌ ಮಳೆ ಸಾಧ್ಯತೆ

ಇಂದು ಮಂಗಳವಾರ ರಾಜ್ಯದ ತುಮಕೂರು, ಮಂಡ್ಯ, ಮೈಸೂರು, ಹಾಸನ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗರಿಷ್ಠ 110 ಮಿಲಿ ಮೀಟರ್‌ನಷ್ಟು ಮಳೆ ಆಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಈ ಜಿಲ್ಲೆಗಳಿಗೆ ಒಂದು ದಿನ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಉಳಿದಂತೆ ಒಟ್ಟಾರೆ ಮುಂದಿನ ಮೂರು ದಿನಗಳ ಕಾಲ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಹಾವೇರಿ, ಧಾರವಾಡ, ಗದಗ, ಕೊಪ್ಪಳ ಜಿಲ್ಲೆಗಳು ಹಾಗೂ ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯ ನಿರೀಕ್ಷೆ ಇದೆ. ಇನ್ನು ಕೆಲವು ಕಡೆಗಳಲ್ಲಿ ಜೋರು ಮಳೆ ಆಗಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ರಾಜ್ಯದ ಎಲ್ಲೆಲ್ಲೆ ಎಷ್ಟು ಮಳೆ ಆಗಿದೆ? ವಿವರ

ಕಳೆದ 24 ಗಂಟೆಯಲ್ಲಿ ಅಂದರೆ ಸೋಮವಾರ ಉತ್ತರ ಒಳನಾಡಿನಲ್ಲಿ ಹೆಚ್ಚು ಮಳೆ ದಾಖಲಾಗಿದೆ. ದಾವಣಗೆರೆ ಮತ್ತು ಧಾರವಾಡದಲ್ಲಿ ತಲಾ 5 ಸೆಂಟಿ ಮೀಟರ್ ಮಳೆ ಆಗಿದೆ. ಕಳಸ 4, ಮಾನಿ, ಮಧುಗಿರಿ, ಹಿರಿಯೂರು, ಹರಪನಹಳ್ಳಿ, ಚಿತ್ರದುರ್ಗ, ಪಾವಗಡ, ಗದಗ ವ್ಯಾಪ್ತಿಯಲ್ಲಿ ತಲಾ 03 ಸೆಂಟಿ ಮೀಟರ್ ಮಳೆ ದಾಖಲಾಗಿದೆ.

ಬೆಂಗಳೂರಿನಲ್ಲಿ ಕಳೆದ ಎರಡು ದಿನ ಮಳೆಯ ವಾತಾವರಣ ಕಂಡು ಬಂದಿತ್ತು. ಶನಿವಾರ ರಾತ್ರಿ ಅತ್ಯಧಿಕ ಮಳೆ ಕಂಡು ದಾಖಲಾಗಿತ್ತು. ನಂತರ ಕಡಿಮೆಯಾದ ಮಳೆ, ಮಂಗಳವಾರದ ಹೊತ್ತಿಗೆ ನೀಲಿ ಆಕಾಶದ ವಾತಾವರಣ, ಅಧಿಕ ಬಿಸಿಲು ಸೃಷ್ಟಿಯಾಗಿದೆ.

ಮುಂಗಾರು ಮಳೆಯ ಅಂತ್ಯದ ಹೊತ್ತಿಗೆ ಉತ್ತರ ಒಳನಾಡಿನಲ್ಲಿ ಮಳೆ ಚುರುಕಾಗಿದೆ. ಕರಾವಳಿಯಲ್ಲೂ ಮಳೆ ಕಡಿಮೆ ಆಗಿದೆ. ಮಲೆನಾಡಿನ ವಿವಿಧ ಕಡೆಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಎರಡು ದಿನ ಸುರಿದಿದ್ದ ಮಳೆ ಮತ್ತೆ ಕಡಿಮೆ ಯಾಗಿದೆ. ರಾಜ್ಯದ ವಿವಿಧೆಡೆ ಅಕ್ಟೋಬರ್ ಮೊದಲ ವಾರದೊತ್ತಿಗೆ ಅತ್ಯಧಿಕ ಬಿಸಲಿನ ವಾತಾವರಣ ಕಂಡು ಬರುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+