ಯಾವುದೇ ಕಾರಣಕ್ಕೂ ನಾನು ಕೂಡ ಈ ಮಣ್ಣನ್ನ ಬಿಡೋದಿಲ್ಲ: ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಲು ಸುಮಲತಾ ಸುಳಿವು
ಮಂಡ್ಯ, ಫೆಬ್ರವರಿ 19: 2019 ರ ಲೋಕಸಭಾ ಚುನಾವಣೆಯಂತೆ ಈ ಬಾರಿಯೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಕುತೂಹಲಕಾರಿ ಕ್ಷೇತ್ರವಾಗಿಲಿದೆ. ಮತ್ತೊಮ್ಮೆ ಮಂಡ್ಯ ಲೋಕ ಸಭಾ ಅಖಾಡಕ್ಕೆ ಸುಮಲತಾ ಅಂಬರೀಶ್ ಅವರು ಇಳಿಯುತ್ತಿರುವುದು ಬಹುತೇಕ ಫಿಕ್ಸ್ ಆಗಿದೆ.
ಹೌದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿರುವ ಆಡಳಿತರೂಢ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಇತ್ತ ಸೀಟು ಹಂಚಿಕೆ ಅಂತಿಮ ಮಾತುಕತೆ ನಡೆದಿದ್ದು, ಮಂಡ್ಯ ಕ್ಷೇತ್ರಕ್ಕಾಗಿ ದಳಪತಿಗಳು ಪಟ್ಟು ಹಿಡಿದಿದ್ದಾರೆ. ಇತ್ತ ಬಿಜೆಪಿಗೆ ಬೆಂಬಲ ನೀಡಿದ ಹಾಲಿ ಮಂಡ್ಯ ಸಂಸದೆ ಸಮಲತಾ ಅಂಬರೀಶ್ ಅವರು, ಯಾವುದೇ ಕಾರಣಕ್ಕೂ ನಾನು ಕೂಡ ಈ ಮಣ್ಣನ್ನ ಬಿಡೋದಿಲ್ಲ ಎಂದು ಹೇಳಿದ್ದು, ದಳಪತಿಗಳ ನಿದ್ದೆಗೆಡಿಸುವಂತೆ ಮಾಡಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಂದನವನಕ್ಕೆ ಕಾಲಿಟ್ಟು 25 ವರ್ಷಗಳು ತುಂಬಿದ ಹಿನ್ನೆಲೆ ಸಕ್ಕರೆನಾಡು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಅದ್ದೂರಿಯಾಗಿ ಬೆಳ್ಳಿಹಬ್ಬ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಂಡ್ಯ ಹಾಲಿ ಸಂಸದೆಯಾದ ಸುಮಲತಾ ಅಂಬರೀಶ್ ತಮ್ಮ ಸ್ಪರ್ಧೆ ಬಗ್ಗೆ ಮತ್ತೆ ಸುಳಿವು ಕೊಟ್ಟಿದ್ದಾರೆ.
ಇನ್ನೂ ಮಂಡ್ಯ ಮಣ್ಣು ಬಿಡಲ್ಲ ಎನ್ನುತ್ತಲೇ ಎದುರಾಳಿಗಳಿಗೆ ಸಂದೇಶ ರವಾನಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೂ ಮಂಡ್ಯ ಕಣ್ಣಕ್ಕಿಳಿಯುವ ಸೂಚನೆ ನೀಡಿದ್ದಾರೆ. 2019ರ ಚುನಾವಣೆ ನೆನೆದು ಸುಮಲತಾ ಅವರು ಭಾವುಕರಾದರು. ಆ ಸಂದರ್ಭದಲ್ಲಿ ದರ್ಶನ್, ಯಶ್ ನನಗೆ ಧೈರ್ಯ ತುಂಬಿದ್ರು. ಕಳೆದ 5 ವರ್ಷ ಮಂಡ್ಯ ಜನರ ಪ್ರೀತಿಗಳಿಸಿದ್ದೇನೆ. ಮಂಡ್ಯದ ಮಣ್ಣಿನ ತಿಲಕವಿಟ್ಟು ಅಂಬರೀಶ್ಗೆ ಬೀಳ್ಕೊಟ್ಟೆವು. ಯಾವುದೇ ಕಾರಣಕ್ಕೂ ನಾನು ಕೂಡ ಈ ಮಣ್ಣನ್ನ ಬಿಡೋದಿಲ್ಲ ಎಂದು ರಾಜಕೀಯ ಎದುರಾಳಿಗಳ ವಿರುದ್ಧ ಮತ್ತೆ ಮಂಡ್ಯದಿಂದ ಸ್ಪರ್ಧಿಸುವ ಕುರಿತು ಸುಳಿವು ನೀಡಿದ್ದಾರೆ.
ಈ ಚುನಾವಣೆಯಲ್ಲಿಯೂ ದರ್ಶನ್ ತನ್ನ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎನ್ನುವ ಮೂಲಕವೇ ಸುಳಿವು ಕೊಟ್ಟಿದ್ದಾರೆ. ನನ್ನ ಹಿಂದೆ ನನ್ನ ಮಕ್ಕಳಿದ್ದಾರೆ ಎನ್ನುವ ಮೂಲಕ ಚುನಾವಣೆ ಹತ್ತಿರವಾಗ್ತಿದ್ದಂತೆ ಮಂಡ್ಯ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರ ಹೇಳಿಕೆ ಸಾಕಷ್ಟು ಕುತೂಹಲ ಹೆಚ್ಚಿಸಿದೆ.












Click it and Unblock the Notifications