HD Kumaraswamy: ಈ ಹಾಡು ಕೇಳಿ ಅನೇಕ ಸಲ ಮೈಮರೆತಿದ್ದೇನೆ: ಹೆಚ್ ಡಿ ಕುಮಾರಸ್ವಾಮಿ
ಮಂಡ್ಯ,ಡಿಸೆಂಬರ್ 23: ಕನ್ನಡ ಚಿತ್ರರಂಗದಿಂದ ಬಂದವನು ನಾನು, ಅಂದಿನ ಚಿತ್ರ ಕಥೆಗಳು ಇಂದಿನ ಚಿತ್ರ ಕಥೆಗಳ ನಡುವೆ ಬಹಳ ವ್ಯತ್ಯಾಸವಿದೆ. ಸಮಾಜವನ್ನು ಯಾವ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಬೇಸರವಾಗುತ್ತದೆ. ಡಾ.ರಾಜ್ ಕುಮಾರ್ ಅವರು ಹಾಡಿರುವ 'ಹಾಲಿನ ಹೊಳೆಯೋ.. ಜೇನಿನ ಮಳೆಯೋ..' ಹಾಡನ್ನು ಕೇಳುತ್ತಾ ಅನೇಕ ಸಲ ಮೈಮರೆತಿದ್ದೇನೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಇಂದಿನ ಚಿತ್ರರಂಗದಲ್ಲಿ ಉತ್ತಮ, ಸದಭಿರುಚಿಯ ಚಿತ್ರಗಳು ಬರಬೇಕು, ಉತ್ತಮ ಕಥೆಗಳ, ಸಮಾಜಕ್ಕೆ ಒಳ್ಳೆಯದು ಮಾಡುವ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. ಸಮಾಜದಲ್ಲಿ ನೆಮ್ಮದಿಯ ವಾತಾವರಣ ನೆಲೆಸಬೇಕಿದೆ. ಮನುಷ್ಯ ಸಂಬಂಧಗಳು ಹಾಳಾಗಬಾರದು. ಅವುಗಳನ್ನು ಕಾಪಾಡಿಕೊಳ್ಳಬೇಕು. ಹಳ್ಳಿಗಳಲ್ಲಿ ಎಲ್ಲರೂ ಕೂತು ಪಂಕ್ತಿಭೋಜನ ಮಾಡುವ ದಿನಗಳು ಮತ್ತೆ ಬರಬೇಕು. ಈಗ ಎಲ್ಲವೂ ಇದೆ, ಆದರೆ ಏನೂ ಇಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹಿಂದಿನ ನಮ್ಮ ಸಂಸ್ಕೃತಿ, ಬಾಂಧವ್ಯ, ಸಂಬಂಧಗಳು ಮರುಕಳಿಸಬೇಕು ಎಂಬ ಆಶಯವನ್ನು ಕುಮಾರಸ್ವಾಮಿ ಅವರು ವ್ಯಕ್ತಪಡಿಸಿದರು.

ಅನ್ಯಭಾಷೆಗಳ ಹೇರಿಕೆಯ ಬಗ್ಗೆ ಇರುವ ಆತಂಕಗಳ ಬಗ್ಗೆ ಅಧ್ಯಕ್ಷರು ಚರ್ಚೆ ಮಾಡಿದ್ದಾರೆ. ಅವರ ಅಷ್ಟೂ ಭಾಷಣವನ್ನು ಓದಿದ್ದೇನೆ. ನಾನು ಯಾವುದೇ ಕಾರಣಕ್ಕೂ ರಾಜಕೀಯ ಭಾಷಣಕ್ಕೆ ಈ ವೇದಿಕೆಯನ್ನು ಬಳಕೆ ಮಾಡಿಕೊಳ್ಳಲಾರೆ, ಮಾಡಿಕೊಳ್ಳಬಾರದು ಕೂಡ. ಕನ್ನಡ ಶಾಲೆಗಳಿಗೆ ಪ್ರೋತ್ಸಾಹ ಕೊಡುವ ವಿಷಯದಲ್ಲಿ ಲೋಪಗಳಾಗಿವೆ. ಅದನ್ನು ನಾವು ಸರಿ ಮಾಡಿಕೊಳ್ಳಬೇಕು. ಇಲ್ಲವಾದರೆ ಮಕ್ಕಳು, ಪೋಷಕರು ಮಾತೃಭಾಷೆಯಿಂದ ವಿಮುಖರಾಗುತ್ತಾರೆ ಎಂದು ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.
2006ರಲ್ಲಿ ನಾನು ಬಿಜೆಪಿ ಪಕ್ಷದ ಜತೆ ಮೈತ್ರಿ ಸರಕಾರ ರಚನೆ ಮಾಡಿದ್ದಾಗ ಈ ವೇದಿಕೆಯಲ್ಲಿರುವ ಹಾಲಿ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಪ್ರಾಥಮಿಕ ಶಿಕ್ಷಣ ಖಾತೆ ಸಚಿವರಾಗಿದ್ದರು. ಆಗ ರಾಜ್ಯದಲ್ಲಿ 169 ಪ್ರಥಮ ದರ್ಜೆ ಕಾಲೇಜುಗಳು ಇದ್ದವು, ಆಗ ಕಾಲೇಜುಗಳ ಕೊರತೆ ಹೆಚ್ಚಾಗಿತ್ತು. ಅದಕ್ಕೆ ಅಂದಿನ ನಮ್ಮ ಸರಕಾರ ಸ್ಪಂದಿಸಿತು. ಹೊಸದಾಗಿ 189 ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪನೆ ಮಾಡಲಾಯಿತು. ಅದರಲ್ಲಿ ವಿಜ್ಞಾನ ಕಾಲೇಜುಗಳನ್ನು ಹೆಚ್ಚು ತೆರೆಯಲಾಯಿತು. 500 ಜ್ಯೂನಿಯರ್ ಕಾಲೇಜುಗಳು, ಆರು ಎಂಜಿನಿಯರಿಂಗ್ ಕಾಲೇಜ್ ಹಾಗೂ ಸಾವಿರಾರು ಶಾಲೆಗಳನ್ನು ಆರಂಭ ಮಾಡಿದ್ದೆವು. ಇದರಿಂದ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಯೇ ಆಯಿತು ಎನ್ನುವುದು ನನ್ನ ಭಾವನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಪೋಷಕರ ಮನಸ್ಥಿತಿ ಹಾಗೂ ಪೈಪೋಟಿ ಮನೋಭಾವನೆಯಿಂದ ಗ್ರಾಮೀಣ ಭಾಗದ ಮಕ್ಕಳ ಮಾತೃಭಾಷಾ ಕಲಿಕೆ ಪ್ರಮಾಣ ಕುಸಿಯುತ್ತಿದೆ. ನಗರ ಪ್ರದೇಶಗಳ ಮಕ್ಕಳ ಜತೆ ಅವರು ಪೈಪೋಟಿ ನಡೆಸಬೇಕಿದೆ. ಹೀಗಾಗಿ ಪೋಷಕರ ಆಲೋಚನೆಯೇ ಬೇರೆಯಾಗಿದೆ. ಅವರಿಗೆ ಮಕ್ಕಳ ಭವಿಷ್ಯವನ್ನು ರೂಪಿಸುವುದೇ ಸವಾಲಿನ ಕೆಲಸವಾಗಿದೆ. ಇಂತಹ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ನಾನು ಎರಡನೇ ಬಾರಿಗೆ ಮುಖ್ಯಮಂತ್ರಿ ಆದಾಗ, ಸಾವಿರ ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡಲು ಹೊರಟಿದ್ದು ನಿಜ. ಕನ್ನಡಕ್ಕೆ ಅಪಾಯ ಉಂಟು ಮಾಡಬೇಕು ಎಂದು ಆ ನಿರ್ಧಾರ ಮಾಡಲಿಲ್ಲ. ನಗರ ಪ್ರದೇಶಗಳ ಮಕ್ಕಳ ಜತೆ ಪೈಪೋಟಿಗೆ ಹಳ್ಳಿ ಮಕ್ಕಳನ್ನು ಸಜ್ಜು ಮಾಡುವ ಸದುದ್ದೇಶದಿಂದ ನಾನು ಆ ನಿರ್ಧಾರ ಮಾಡಿದ್ದೆ. ಜತೆಗೆ, ಕಲಿಕೆಯಲ್ಲಿ ಕನ್ನಡಕ್ಕೆ ಒತ್ತು ಕೊಡುವ ಕೆಲಸವನ್ನು ನಾನು ಮಾಡಿದ್ದೆ ಎಂದರು.
ಸಾಹಿತ್ಯ ಕುರಿತಾದ ತಮ್ಮ ಆಸಕ್ತಿಯನ್ನು ಸಭಿಕರ ಮುಂದೆ ಹಂಚಿಕೊಂಡ ಕೇಂದ್ರ ಸಚಿವರು; 'ದುರ್ಗಾಸ್ತಮಾನ' ನಾನು ಬಹುವಾಗಿ ಇಷ್ಟಪಟ್ಟು ಓದಿದ ಬೃಹತ್ ಕಾದಂಬರಿ. ಸಾವಿರ ಪುಟಗಳ ಆ ಮಹಾನ್ ಕಾದಂಬರಿಯನ್ನು ಓದಿ ರೋಮಾಂಚನಗೊಂಡಿದ್ದೇನೆ. ಆ ಕಾದಂಬರಿಯಲ್ಲಿ ವೀರ ಮದಕರಿನಾಯಕರ ಅಂತ್ಯದ ಕಥನ ಓದಿದರೆ ಎಂತಹವರ ಹೃದಯವೂ ಕರಗುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ವ್ಯಾಸರಾಯ ಬಲ್ಲಾಳರ ಕಾದಂಬರಿಗಳಿಗೆ ನಾನು ಹೆಚ್ಚು ಆಕರ್ಷಿತನಾಗಿದ್ದೇನೆ. ಗಜಾನನ ಶರ್ಮ ಅವರ 'ಚನ್ನಾಭೈರಾದೇವಿ' ಕಾದಂಬರಿ, ಗೋಪಾಲಕೃಷ್ಣ ಪೈ ಅವರ 'ಸ್ವಪ್ನ ಸಾರಸ್ವತ', ಬೊಳುವಾರು ಮುಹಮ್ಮದ್ ಕುಂಞಿ ಅವರ 'ಸ್ವಾತಂತ್ರ್ಯದ ಓಟ' ಇತ್ಯಾದಿ ಕಾದಂಬರಿಗಳನ್ನು ಓದಿದ್ದೇನೆ ಎಂದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications