ಅಚ್ಚರಿ : ಚಾಮರಾಜನಗರದ ಮಹಿಳೆ ತಲೆಯಲ್ಲಿ ಕೊಂಬು!

ಚಾಮರಾಜನಗರ, ಮಾರ್ಚ್ 24 : ದನದ ಕರುಗಳಿಗೆ ಕೊಂಬುಗಳು ಮೂಡಿ ಬರುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಕೆಲವರಿಗೆ 'ಅಹಂಕಾರ'ದ ಕೊಂಬು ಬಂದಿರುವುದನ್ನೂ ನೋಡಿದ್ದೇವೆ. ಆದರೆ, ಈ ಮಹಿಳೆಯ ಮೇಲೆ ಬೆಳೆಯುತ್ತಿರುವ ಕೊಂಬಿದೆಯಲ್ಲ, ಅದು ತಲೆನೋವಿನ ಕೊಂಬು!

ಹೌದು, ಇದು ಅಚ್ಚರಿಯಾದರೂ ಸತ್ಯ. ಚಾಮರಾಜನಗರ ಜಿಲ್ಲೆಯ ಪುಣಜನೂರು ಸಮೀಪದ ಹೊಸಪೋಡು ಕಾಲೋನಿಯಲ್ಲಿ ವಾಸವಿರುವ ಮಹಿಳೆಯ ತಲೆಮೇಲೆ ಕೊಂಬು ಕಾಣಿಸಿಕೊಂಡಿದ್ದು, ಮಹಿಳೆ ಮತ್ತು ಕುಟುಂಬದವರಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ. [ಬೆತ್ತಲಾದಳು ಚಾಮರಾಜನಗರದ ಗುರುಬಸವಿ!]

Horn on the head of woman in Chamarajanagar

ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮ ಪಂಚಾಯಿತಿಗೆ ಸೇರಿದ ಹೊಸಪೋಡು ಕಾಲೋನಿಯಲ್ಲಿ ವಾಸ ಮಾಡುತ್ತಿರುವ ಸೋಲಿಗ ಮಾದಮ್ಮರವರ ತಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಕೊಂಬು ಬೆಳೆದು ಬಳಿಕ ಉದುರಿ ಬೀಳುತ್ತದೆಯಂತೆ. ಮತ್ತೆ ಪುನಃ ಬೆಳೆಯುತ್ತದೆಯಂತೆ. ಈ ವಿಚಿತ್ರ ಘಟನೆ ನಿರಂತರವಾಗಿ ನಡೆಯುತ್ತಲೇ ಇದೆಯಂತೆ.

ಮೂಲತಃ ಬೇಡಗುಳಿ ನಿವಾಸಿಯಾಗಿರುವ ಮಾದಮ್ಮ ಕಳೆದ ಕೆಲ ವರ್ಷಗಳಿಂದ ಬೇಡಗುಳಿಯಿಂದ ಹೊಸಪೋಡಿಗೆ ಬಂದು ಸಂಸಾರ ಸಾಗಿಸುತ್ತಿದ್ದಾರೆ. ತಲೆಯಲ್ಲಿ ಕೊಂಬು ಮೂಡುತ್ತಿದ್ದಾಗ ತಲೆ ನೋವು ಆರಂಭವಾಗುತ್ತದೆ. ಕೊಂಬು ತಲೆಯಲ್ಲಿ ಇರುವ ತನಕ ವಿಪರೀತ ತಲೆನೋವು ಇರುತ್ತದೆಯಂತೆ. [ಚಾಮರಾಜನಗರದಲ್ಲಿ ಕಾವಲುಗಾರನನ್ನು ಬೇಟೆಯಾಡಿದ ಹುಲಿ]

Horn on the head of woman in Chamarajanagar

ತುಂಬು ಸಂಸಾರದ ಮಧ್ಯೆ ಜೀವನ ನಡೆಸುತ್ತಿರುವ ಮಾದಮ್ಮನಿಗೆ ಸದಾ ತಲೆಯ ಕೊಂಬಿನದೇ ಚಿಂತೆಯಾಗಿದೆ. ಆರೇಳು ತಿಂಗಳಿಗೊಮ್ಮೆ ಬೆಳೆಯುವ ಈ ಕೊಂಬು ಬಳಿಕ ಉದುರಿ ಬೀಳುತ್ತದೆ. ಬಡತನದಲ್ಲಿರುವ ಕಾರಣ ಮಹಿಳೆ ಯಾವುದೇ ಆಸ್ಪತ್ರೆಗೆ ತೆರಳಿಲ್ಲ.

ಒಂದು ವೇಳೆ ಯಾರಾದರೂ ಈ ಬಗ್ಗೆ ಅಧ್ಯಯನ ಮಾಡಿಯೋ ಅಥವಾ ಶಸ್ತ್ರಚಿಕಿತ್ಸೆ ನಡೆಸಿ ಕೊಂಬು ಬೆಳೆಯುವ ತೊಂದರೆಯಿಂದ ರಕ್ಷಿಸಬಹುದಾ ಎಂದು ಅವರು ಕಾಯುತ್ತಿದ್ದಾರೆ. ಆದರೂ ಇದೊಂದು ರೀತಿಯಲ್ಲಿ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+