ಕೈ ಪಾಳಯದಲ್ಲಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ: ನಾವೇನು ಸನ್ಯಾಸಿಗಳಾ ಎಂದ ಡಾ. ಜಿ ಪರಮೇಶ್ವರ್
ಹುಬ್ಬಳ್ಳಿ, ಜುಲೈ 31: : ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಲು ಮುಡಾ ಹಗರಣದ ಅಸ್ತ್ರವನ್ನ ಸ್ವಪಕ್ಷದವರೇ ಪ್ರಯೋಗಿಸಿದ್ದಾರೆ ಎಂದು ವಿಪಕ್ಷಗಳ ನಾಯಕರ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ರಾಜ್ಯ ರಾಜಕೀಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಕುರಿತು ಸಾಕಷ್ಟು ನಡೆಯುತ್ತಿದ್ದು, ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕಾಗಿ ಹಗ್ಗಜಗ್ಗಾಟವೂ ಸಹ ಏರ್ಪಟ್ಟಿತ್ತು. ಆದರೆ, ಇದೀಗ ಮತ್ತೆ ಮುಖ್ಯಮಂತ್ರಿ ಬದಲಾವಣೆ ಕುರಿತು ಗುಸುಗುಸು ಕೇಳಿ ಬರುತ್ತಿದೆ.

ರಾಜ್ಯದಲ್ಲಿ ದಲಿತ ಸಿಎಂ ವಿಚಾರವಾಗಿ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ನಾವೇನು ಸನ್ಯಾಸಿಗಳಾ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಅಲ್ಲದೇ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ವಾತಾವರಣವಿಲ್ಲ. ಸಿದ್ದರಾಮಯ್ಯ ಸಿಎಂ ಇದ್ದಾರೆ. ನಿನ್ನೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಂದಿನ ಮುಖ್ಯಮಂತ್ರಿ ಜಿ ಪರಮೇಶ್ವರ ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಪುಷ್ಟಿಕರಣ ಎಂಬಂತೆ ಗೃಹಸಚಿವರು ನಾವು ಸನ್ಯಾಸಿಗಳಲ್ಲ ಮಾರ್ಮಿಕವಾಗಿ ನುಡಿದಿದ್ದಾರೆ.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ವ್ಯವಸ್ಥಿತವಾಗಿದೆ. ಯಾವುದೇ ಸಂದರ್ಭದಲ್ಲಿ ಕೈಮೀರಿ ಹೋಗಿಲ್ಲ. ಸ್ವಾಭಾವಿಕವಾಗಿ ಕೆಲ ಘಟನೆಗಳು ನಡೆಯುತ್ತವೆ, ನಡೆದಿವೆ. ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಬಂದು ಕಾನೂನು ಸುವ್ಯವಸ್ಥೆ ಕಟ್ಟಿದೆ ಎಂದಿದ್ರು. ಕೈಗಾರಿಕೆಗಳು ಬರ್ತಿಲ್ಲ ಎಂದು ದೊಡ್ಡ ಅಪವಾದ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ಯಾವ ಕೈಗಾರಿಕೋದ್ಯಮಿ ಇಲ್ಲಿಂದ ಹೊರ ಹೋಗುತ್ತೆನೆ ಎಂದಿಲ್ಲ. ಹೊರಗಿನವರು ಬಂದವರು ಯಾರೂ ಅಪವಾದ ಮಾಡಿಲ್ಲ. ಸೀತಾರಾಮನ್ ಹೇಳಿರೋ ಮಾತು ಸತ್ಯಕ್ಕೆ ದೂರವಾದ ಮಾತು. ಹೀಗಾಗಿ ನಾನು ಸ್ಪಷ್ಟೀಕರಣ ಕೊಡುತ್ತಿದ್ದೇನೆ ಎಂದರು.
ಡ್ರಗ್ಸ್ ದಂಧೆ ಇದೆ ಎಲ್ಲವೂ ನಿಜ, ಎಷ್ಟರ ಮಟ್ಟಿಗೆ ಇದೆ ಅನ್ನೋದು ಮುಖ್ಯ. ಇದೆಲ್ಲ ನಾವು ಅಧಿಕಾರಕ್ಕೆ ಬಂದ ಮೇಲೆ ಆಗಿದೆಯಾ.? ಬಿಜೆಪಿ ಅಧಿಕಾರದಲ್ಲಿ ಕಡಿಮೆ ಕೊಲೆ,ಕಡಿಮೆ ಕಳ್ಳತನ ಆಗಿದೆಯಾ..? ನಾವು ಪೊಲೀಸರ ಜೊತೆ ಮೀಟಿಂಗ್ ಮಾಡೋವಾಗ ಡ್ರಗ್ಸ್ ದಂಧೆ ನಿಲ್ಲಿಸೋ ಘೋಷಣೆ ಮಾಡಿದ್ದೇವೆ. ದೊಡ್ಡ ಆಂದೋಲನ ಆರಂಭ ಮಾಡಿದ್ದೇವೆ. ಸಾವಿರಾರು ಕೋಟಿ ರೂಪಾಯಿ ಡ್ರಗ್ಸ್ ಸುಟ್ಟು ಹಾಕಿದ್ದೇವೆ. ಕೆಲವು ಡ್ರಗ್ಸ್ ದಂಧೆಕೋರರಿಗೆ ಗುಂಡು ಹಾಕೋ ಪ್ರಯತ್ನ ಆಗಿದೆ. ಈ ಭಾಗದಲ್ಲೂ ಡ್ರಗ್ಸ್ ಮಾನಿಟರಿಂಗ್ ಕೆಲಸ ಮಾಡ್ತೀದ್ದೇವೆ. ಡ್ರಗ್ಸ್ ಹಾವಳಿ ಮೊದಲಿಗಿಂತ ಕಡಿಮೆ ಆಗಿದೆ. ಬಹಳ ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದರು.
ಸೈಬರ್ ಕ್ರೈಂ ತಡೆಗಟ್ಟಲು ಕ್ರಮ ತಗೆದುಕೊಂಡಿದ್ದೇವೆ. ಸೈಬರ್ ಕ್ರೈಂ ಪೊಲೀಸ್ ಠಾಣೆಗಳು ಜಾಸ್ತಿ ಮಾಡಿದ್ದೇವೆ. ಸಾವಿರಾರು ಜನರಿಗೆ ನಾವು ಹಣ ಕೊಡಿಸಿದ್ದೇವೆ. ಇಷ್ಟೆಲ್ಲ ಕ್ರಮ ಕೈಗೊಂಡು ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಎಲ್ಲರೂ ಶಾಂತಿಯುತವಾಗಿ ಹಬ್ಬ ಮಾಡಿದ್ದೇವೆ. ಗಣೇಶ ಹಬ್ಬದಲ್ಲಿ ಎಲ್ಲೂ ಗಲಾಟೆ ಆಗಿಲ್ಲ. ರಂಜಾನ್ ಹಬ್ಬ ಕೂಡ ಮಾಡಿದ್ದೇವೆ ಎಂದರು. ನೂರಾರು ಫೆಡ್ಲರ್ ರನ್ನು ವಶಕ್ಕೆ ಪಡೆದಿದ್ದೇವೆ. ಫಾರಿನ್,ನೈಜೇರಿಯಾ ಮೂಲದವರನ್ನು ಅರೆಸ್ಟ್ ಮಾಡಿದ್ದೇವೆ. ಡ್ರಗ್ಸ್ ಎಲ್ಲಿಂದ ಆದರೂ ಬರಲಿ,ನಾವು ಅವರ ಮೂಲಕ್ಕೆ ಹೋಗುತ್ತೇವೆ ಎಂದು ತಿಳಿಸಿದರು.
ನಿರ್ಮಲಾ ಸೀತಾರಾಮನ್ SC ST ಹಣ ಡೈವರ್ಟ್ ಮಾಡಿದ್ದಾರೆ ಅನ್ನೋ ದೊಡ್ಡ ಆರೋಪ ಮಾಡಿದ್ದಾರೆ. ಅವರಿಗೆ ಯಾರು ಅಂಕಿ ಸಂಖ್ಯೆ ಕೊಟ್ಟಿದ್ದು? ನಿಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ನೋಡಿಕೊಳ್ಳಬೇಕು.
ಬೇರೆಯವರ ತಟ್ಟೆಯಲ್ಲಿ ನೋಣ ಬಿದ್ದಿದೆ ಅಂತಾ ಹೇಳೋದಲ್ಲ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಾವು ಹಣ ಡೈವರ್ಟ್ ಮಾಡಿಲ್ಲ,ಕಾರ್ಯಕ್ರಮಕ್ಕೆ ಹಣ ಉಪಯೋಗ ಮಾಡಿದ್ದೇವೆ. ಬಿಜೆಪಿಯವರು ಕೇವಲ ಪ್ರಚಾರಕ್ಕೆ ಮಾತಾಡ್ತಾರೆ. ರಾಹುಲ್ ಗಾಂಧಿ ವಿರುದ್ದ ಮಾತಾಡಿದ ಅನುರಾಗ್ ಠಾಕೂರ್ ಗೆ ತಿರುಗೇಟು ನೀಡಿದರು.












Click it and Unblock the Notifications