Get Updates
Get notified of breaking news, exclusive insights, and must-see stories!

High Court Kannada Verdict: ಕನ್ನಡದಲ್ಲಿ ತೀರ್ಪು ಪ್ರಕಟಿಸಿ ಇತಿಹಾಸ ಸೃಷ್ಟಿಸಿ ಹೈಕೋರ್ಟ್‌; ಉದ್ದೇಶ ಏನು?

High Court Kannada Verdict: ಕನ್ನಡ ವಿಚಾರ ಆಗಾಗಾ ಮುನ್ನಲೆಗೆ ಬರುತ್ತಲೇ ಇರುತ್ತದೆ. ಯಾಕೆಂದರೆ ಕರ್ನಾಟಕದಲ್ಲಿ ಪರಭಾಷಿಗರ ದರ್ಬಾರ್‌ ಹೆಚ್ಚಾಗಿದ್ದು, ಇದನ್ನು ಮಟ್ಟ ಹಾಕುವ ಕೆಲಸಗಳು ನಡೆಯುತ್ತಿವೆ. ಇದರ ನಡುವೆಯೂ ಹಲವು ಜಿಲ್ಲೆಗಳಲ್ಲಿ ವೈದ್ಯರು ಕನ್ನಡದಲ್ಲಿಯೇ ಔ‍ಷಧಿ ಚೀಟಿಗಳನ್ನು ಬರೆದು ಗಮನ ಸೆಳೆದಿದ್ದರು. ಇದೀಗ ಹೈಕೋರ್ಟ್ ಕನ್ನಡದಲ್ಲೇ ತೀರ್ಪು ನೀಡಿ ಇತಿಹಾಸ ಸೃಷ್ಟಿಸಿದೆ.

ಸಾಮಾನ್ಯವಾಗಿ ವೈದ್ಯರು ಔಷಧಿ ಚೀಟಿಗಳನ್ನು ಆಂಗ್ಲ ಭಾಷೆಯಲ್ಲೇ ಬರೆಯುತ್ತಾರೆ. ಇಂತಹದ್ದರ ನಡುವೆಯೂ ಕೆಲವು ಜಿಲ್ಲೆಗಳಲ್ಲಿ ವೈದ್ಯರು ಕನ್ನಡದಲ್ಲಿ ಔಷಧಿ ಚೀಟಿ ಬರೆದಿದ್ದು, ಭಾರೀ ವೈರಲ್‌ ಆಗಿದ್ದವು. ಇನ್ನು ಕರುನಾಡ ಜನರಿಂದ ಪ್ರಶಂಸೆಗಳ ಸರಮಾಲೆಯೇ ಹರಿದುಬಂದಿತ್ತು. ಇದೀಗ ಹೈಕೋರ್ಟ್‌ನಲ್ಲೂ ಸಹ ಕನ್ನಡ ಅಭಿಮಾನದ ಹೊಳೆ ಹರಿದಿದೆ.

High Court Verdict in Kannada Huge viral

ಕರ್ನಾಟಕ ಹೈಕೋರ್ಟ್​​ ಇದೇ ಮೊದಲ ಬಾರಿಗೆ ಪ್ರಕಣವೊಂದರ ತೀರ್ಪನ್ನು ಕನ್ನಡದಲ್ಲೇ ಪ್ರಕಟಿಸಿದ್ದು, ಇದು ಭಾರೀ ಪ್ರಶಂಸೆಗೆ ಕಾರಣವಾಗಿದೆ. ಡಿಸೆಂಬರ್ 11ರಂದು ಭಾರತ ಭಾಷಾ ದಿವಸದ ಪ್ರಯುಕ್ತ ಸಾಂಕೇತಿಕವಾಗಿ ಇಂದು (ಡಿಸೆಂಬರ್ 12) ನ್ಯಾ.ಕೃಷ್ಣ ಎಸ್.ದೀಕ್ಷಿತ್, ನ್ಯಾ.ಸಿ.ಎಂ.ಜೋಶಿ ಅವರಿದ್ದ ಪೀಠ, ನಂಜಾವಧೂತ ಸ್ವಾಮಿ ವಿರುದ್ಧ ಎಸ್.ಲಿಂಗಣ್ಣ ಪ್ರಕರಣದಲ್ಲಿ ಕನ್ನಡದಲ್ಲೇ ತೀರ್ಪು ಪ್ರಕಟಿಸಿ ಗಮನ ಸೆಳೆದಿದೆ.

ತುಮಕೂರಿನ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯಲ್ಲಿರುವ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ ವಿರುದ್ಧ ಎಸ್‌.ಲಿಂಗಣ್ಣ ಎಂಬುವರು ಸಲ್ಲಿಸಿದ್ದ ಮೂಲ ಮೇಲ್ಮನವಿಯನ್ನು ಪೀಠ ಪುರಸ್ಕರಿಸಿದೆ. ಈ ಪ್ರಕರಣದ ತೀರ್ಪನ್ನು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ನ್ಯಾಯಮೂರ್ತಿಗಳು ಬರೆದಿದ್ದಾರೆ. ತೀರ್ಪಿನ ಕಾರ್ಯಕಾರಿ ಭಾಗವನ್ನು ನ್ಯಾ. ದೀಕ್ಷಿತ್‌ ಅವರು ಕನ್ನಡದಲ್ಲಿ ಓದಿದ್ದು, ಈ ಮೂಲಕ ಕನ್ನಡದ ಮೇಲಿನ ಪ್ರೇಮವನ್ನು ಮೆರೆದಿದ್ದಾರೆ.

ಕನ್ನಡದಲ್ಲೇ ತೀರ್ಪು ಓದಿದ ನಂತರ ನ್ಯಾ.ದೀಕ್ಷಿತ್‌ ಅವರು, ಇಂಗ್ಲೆಂಡ್‌​ನಲ್ಲಿ 1730ರ ವರೆಗೆ ಲ್ಯಾಟಿನ್ ಭಾಷೆಯಲ್ಲಿ ಕೋರ್ಟ್ ಕಲಾಪ ನಡೆಯುತ್ತಿತ್ತು. 1730ರಿಂದ ಅವರ ಸ್ವಭಾಷೆ ಇಂಗ್ಲೀಷ್‌ನಲ್ಲೇ ಕಲಾಪ ಆರಂಭ ಮಾಡಿದ್ದರು. ಆದರೆ, ಜನಸಾಮಾನ್ಯರಿಗೆ ಕೋರ್ಟ್‌ ತೀರ್ಪು ಏನಿದೆ ಎಂದು ತಿಳಿಯಬೇಕು ಎಂದು ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ. ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳು ಕನ್ನಡದಲ್ಲೇ ವ್ಯವಹರಿಸುವಂತೆ ಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಮೊಟ್ಟ ಮೊದಲ ಬಾರಿ ಮೊದಲಿಗೆ ಇಂಗ್ಲಿಷ್‌ನಲ್ಲಿ ತೀರ್ಪು ಓದಿದ ನ್ಯಾ.ದೀಕ್ಷಿತ್‌ ಅವರು ನಂತರ ಕನ್ನಡದಲ್ಲಿ ಓದಿದರು. ಮೇಲ್ಕಾಣಿಸಿದ ಕಾರಣಗಳಿಂದ ಈ ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ. ಏಕಸದಸ್ಯ ನ್ಯಾಯಾಧೀಶರ ಪ್ರಶ್ನಿತ ತೀರ್ಪು ಮತ್ತು ಆದೇಶವನ್ನು ರದ್ದುಗೊಳಿಸಲಾಗಿದೆ. ಪ್ರತಿವಾದಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ.

ತತ್‌ಪರಿಣಾಮವಾಗಿ ಟಿಒಎಸ್‌ ಸಂಖ್ಯೆ 1/2023ರಲ್ಲಿ ಮೇಲ್ಮನವಿದಾರರ ದಾವೆಯನ್ನು ಪುನರುಜ್ಜೀವನಗೊಳಿಸಲಾಗಿದೆ. ಅದನ್ನು ಕಾನೂನು ರೀತೀಯಲ್ಲಿ ವಿಚಾರಣೆ ಮತ್ತು ವಿಲೇವಾರಿ ಮಾಡಬೇಕಾಗುತ್ತದೆ. ಯಾರೂ ವೆಚ್ಚವನ್ನು ಭರಿಸುವಂತಿಲ್ಲ ಎಂದರು.

ನಂತರ ವಕೀಲರೊಬ್ಬರು ಇದು ಸಾಮಾನ್ಯ ಜನರಿಗೆ ಅರ್ಥ ಆಗುತ್ತದೆ. ನ್ಯಾಯಮೂರ್ತಿಗಳ ಈ ತೀರ್ಪು ಉತ್ತಮ ಸಂದೇಶ ನೀಡುವಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ನ್ಯಾ. ದೀಕ್ಷಿತ್‌ ಅವರು ಹೌದು, ಸಾಮಾನ್ಯ ಜನರಿಗೆ ಅರ್ಥವಾಗಬೇಕು. ಇಂಗ್ಲಿಷ್‌ ಅಥವಾ ಅವರಿಗೆ ತಿಳಿಯದ ಭಾಷೆಯಲ್ಲಿ ಹೇಳಿದರೆ ಅದು ಅರ್ಥವಾಗುವುದಿಲ್ಲ. ನಾವು ನಮ್ಮ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಈ ಹಿಂದೆ ನ್ಯಾ.ಅರಳಿ ನಾಗರಾಜ್‌ ಅವರು ಸಹ ಕನ್ನಡದಲ್ಲಿಯೇ ತೀರ್ಪು ನೀಡುವ ಮೂಲಕ ಕರುನಾಡಿನ ಗಮನ ಸೆಳೆದಿದ್ದರು. ಆದರೆ, ಅವರ ಕನ್ನಡ ತೀರ್ಪು ಇಂಗ್ಲಿಷ್‌ ತೀರ್ಪಿನ ಅನುವಾದ ಆಗಿತ್ತು. ಎರಡೂ ತೀರ್ಪುಗಳನ್ನು ಮೂಲ ತೀರ್ಪೆಂದು ಪರಿಗಣಿಸಬೇಕು ಎಂದು ಅವರು ಆಗ ಹೇಳಿದ್ದರು. ಇದೀಗ ಕೋರ್ಟ್‌ನಲ್ಲಿ ಕನ್ನಡ ಮತ್ತೆ ಮೊಳಗಿದಂತಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+