ಹಲವು ವಿಶೇಷತೆ ಒಳಗೊಂಡಿದೆ ಈ ಬಾರಿಯ ವಿಧಾನಸಭೆ! ನಿಮಗೆ ತಿಳಿಯದೇ ಇರುವ ವಿಚಾರಗಳು ಇಲ್ಲಿವೆ ನೋಡಿ!

ಬೆಂಗಳೂರು, ಮೇ 22: ಕರ್ನಾಟಕ ವಿಧಾನಸಭೆಯ 16ನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆದಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ 135 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಗೆಲುವು ಸಾಧಿಸಿದೆ.

ಮೂರು ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಬಿಜೆಪಿ ಈ ಬಾರೀ ಚುನಾವಣೆಯಲ್ಲಿ ಕೇವಲ 66 ಸ್ಥಾನಗಳನ್ನ ಪಡೆದುಕೊಂಡಿದ್ರೆ, 123 ಟಾರ್ಗೆಟ್‌ ಹಾಕಿಕೊಂಡಿದ್ದ ಜೆಡಿಎಸ್‌ 19 ಸ್ಥಾನಗಳನ್ನ ಪಡೆದುಕೊಂಡಿದೆ. ಇನ್ನೂ ಈ ಬಾರೀ ನಾಲ್ಕು ಜನ ಇತರರು ಆಯ್ಕೆಯಗಿದ್ದಾರೆ. ಒಟ್ನಿಲಿ 16ನೇ ಕರ್ನಾಟಕ ವಿಧಾನಸಭೆ ಹಲವು ವಿಶೇಷತೆಗೆ ಕಾರಣವಾಗಿದ್ದು, ಹಲವು ವಿಶೇಷತೆಗಳು ಈ ಕೆಳಗಿನಂತಿವೆ.

karnataka Assembly Elections 2023

92 ವರ್ಷದ ಅತಿ ಹಿರಿಯ ಶಾಸಕ!

ಕಾಂಗ್ರೆಸ್‌ ನ ಹಿರಿಯ ನಾಯಕ ಹಾಗೂ ವಿಧಾನಸಭೆಯ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರುವ ಶಾಮನೂರು ಶಿವಶಂಕರಪ್ಪ ಅವರಿಗೆ 92 ವರ್ಷವಾಗಿದ್ದು, ಸದನಲ್ಲಿಯೇ ಅತ್ಯಂತ ಹಿರಿಯ ನಾಯಕರಾಗಿದ್ದಾರೆ. ಇನ್ನೂ ಮಾನ್ವಿ ಶಾಸಕ ಜಿ ಹಂಪಯ್ಯ ನಾಯ್ಕ್‌ (84), ಅಫಜಲಪುರ ಶಾಸಕ ಎಂವೈ ಪಾಟೀಲ್‌ (82), ಬಾಗಲಕೋಟೆ ಶಾಸಕ ಎಚ್‌ವೈ ಮೇಟಿ (77), ಹಳಿಯಾಳ ಶಾಸಕ ಆರ್‌ವಿ ದೇಶಪಾಂಡೆ (76) ಹಿರಿಯ ಶಾಸಕರಾಗಿ 16 ನೇ ವಿಧಾನಸಭೆ ಪ್ರವೇಶಿಸಿರುವುದು ವಿಶೇಷವಾಗಿದೆ.

28 ವರ್ಷದ ಅತಿ ಕಿರಿಯ ಶಾಸಕ!

16ನೇ ವಿಧಾನಸಭೆಗೆ ಅತಿ ಕಿರಿಯ ಸದಸ್ಯರಾಗಿ ದರ್ಶನ್‌ ಧ್ರುವನಾರಾಯಣ್‌ ಪ್ರವೇಶಿಸಿದ್ದು, 28 ವರ್ಷದ ದರ್ಶನ್‌ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಡಾ. ಚಂದ್ರು ಲಮಾಣಿ (34), ಅವಿನಾಶ್‌ ಜಾಧವ್‌ (34), ಜಿಡಿ ಹರೀಶ್‌ ಗೌಡ (36), ಡಾ ಮಂಥರ್‌ಗೌಡ (38), ಪ್ರದೀಪ್‌ ಈಶ್ವರ್‌ (38), ಪ್ರಿಯಕೃಷ್ಣ (39) ಹಾಗೂ ಸ್ವರೂಪ್‌ ಪ್ರಕಾಶ್‌ (40) ಇತರ ಕಿರಿಯ ಶಾಸಕರಾಗಿ ವಿಧಾನಸಭೆಯನ್ನ ಪ್ರವೇಶಿಸಿದ್ದಾರೆ.

karnataka Assembly Elections 2023

ಈ ಬಾರಿ ಚುನಾವಣೆಯಲ್ಲಿ ಗೆದ್ದ ಮಾಜಿ ಸಿಎಂಗಳು!

2023 ರ ಕರ್ನಾಟಕ ವಿಧಾನಸಭೆಗೆ ಈ ಬಾರಿ ಮೂವರು ಮಾಜಿ ಮುಖ್ಯಮಂತ್ರಿಗಳು ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ,ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ನಿರ್ಗಮಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಮುಖ್ಯಮಂತ್ರಿಗಳ ಪುತ್ರರು ಶಾಸಕರಾಗಿ ಆಯ್ಕೆ!

ಈ ಬಾರೀ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 7 ಜನ ಮುಖ್ಯಮಂತ್ರಿಗಳು ಮಕ್ಕಳು ಚುನಾವಣೆಯಲ್ಲಿ ಗೆದ್ದು ವಿಧಾನಸಭೆಯನ್ನ ಪ್ರವೇಶಿಸಿದ್ದಾರೆ. ಮಾಜಿ ಸಿಎಂ ಆಗಿರುವ ದೇವೇಗೌಡರ ಪುತ್ರರಾದ ಎಚ್‌ ಡಿ ಕುಮಾರಸ್ವಾಮಿ ಹಾಗೂ ಎಚ್‌ ಡಿ ರೇವಣ್ಣ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ವಿಧಾನಸಭೆಗೆ ಆಯ್ಕೆಯಾಗಿ ಬಂದಿದ್ದಾರೆ. ಇನ್ನೂ ಎಸ್‌ ಆರ್‌ ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ, ಎಸ್‌ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ, ಆರ್‌ ಗುಂಡೂರಾವ್‌ ಅವರ ಪುತ್ರ ದಿನೇಶ್‌ ಗುಂಡೂರಾವ್‌, ಧರಂ ಸಿಂಗ್‌ ಅವರ ಪುತ್ರ ಅಜಯ್‌‌ ಸಿಂಗ್‌ ಈ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.

ಬರೋಬ್ಬರಿ 58 ಜನ ಸದನದಲ್ಲಿ ಹೊಸ ಮುಖಗಳು!

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ ಈ ಬಾರಿಯ ವಿಧಾನಸಭೆಗೆ ಮೊದಲ ಬಾರಿಗೆ ಬರೋಬ್ಬರಿ 58 ಜನ ಪ್ರದೇಶಿಸಿದ್ದಾರೆ. ಕಾಂಗ್ರೆಸ್‌ನಿಂದ 32, ಬಿಜೆಪಿಯಿಂದ 22, ಜೆಡಿಎಸ್‌ನಿಂದ 8 ಜನ ಮತ್ತು 4 ಪಕ್ಷೇತರರು ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಈ ಬಾರೀ 4 ಜನ ಪಕ್ಷೇತರರಾಗಿ ಆಯ್ಕೆ!

ಕರ್ನಾಟಕ ಸರ್ವೋದಯ ಪಕ್ಷದಿಂದ ಮೇಲುಕೋಟೆ ಕ್ಷೇತ್ರದಲ್ಲಿ ದರ್ಶನ್‌ ಪುಟ್ಟಣ್ಣಯ್ಯ ಆಯ್ಕೆಯಾಗಿದ್ದರೆ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಗಂಗಾವತಿ ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ಆಯ್ಕೆಯಾಗಿದ್ದಾರೆ. ಗೌರಿಬಿದನೂರು ಕ್ಷೇತ್ರದಲ್ಲಿ ಕೆಎಚ್‌ ಪುಟ್ಟಸ್ವಾಮಿಗೌಡ, ಹರಪನಹಳ್ಳಿ ಕ್ಷೇತ್ರದಲ್ಲಿ ಲತಾ ಮಲ್ಲಿಕಾರ್ಜುನ್‌ ಗೆಲುವು ಸಾಧಿಸಿದ್ದಾರೆ. ಇಬ್ಬರು ಕೂಡ ಈಗಾಗಲೇ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.ಇನ್ನೂ ದರ್ಶನ್‌ ಪುಟ್ಟಣ್ಣಯ್ಯ ಕೂಡ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+