Congress Candidates List : ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮ; ಬಾಕಿ 21 ಕ್ಷೇತ್ರಗಳ ಸಂಭಾವ್ಯರ ಪಟ್ಟಿ ಇಲ್ಲಿದೆ
ಬೆಂಗಳೂರು, ಮಾರ್ಚ್ 16: ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ 7 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ಬಿಡುಗಡೆಗೊಳಿಸಿದೆ. ಬಾಕಿ ಉಳಿದ 21 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಈ ವಾರಾಂತ್ಯದಲ್ಲೇ ಎರಡನೇ ಪಟ್ಟಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.
ಈಗಾಗಲೇ ರಾಜ್ಯ ಕಾಂಗ್ರೆಸ್ ಗೆ ಕಗ್ಗಂಟಾಗಿದ್ದ ಆರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ನಾಯಕರು ಅಂತಿಮಗೊಳಿಸಿ, ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ (ಸಿಇಸಿ) ರವಾನಿಸಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಸಿಇಸಿ ಸಭೆಯ ಅನುಮೋದನೆ ಬಳಿಕ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಏಳು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಇದೀಗ ಎರಡನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

21 ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ?
ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ
ಬೆಂಗಳೂರು ದಕ್ಷಿಣ - ಸೌಮ್ಯ ರೆಡ್ಡಿ
ಬೆಂಗಳೂರು ಉತ್ತರ - ಪ್ರೊ.ರಾಜೀವ್‌ಗೌಡ
ಬೆಂಗಳೂರು ಸೆಂಟ್ರಲ್ -ಮನ್ಸೂರ್ ಆಲಿ ಖಾನ್
ಕಲಬುರಗಿ -ರಾಧಾಕೃಷ್ಣ ದೊಡ್ಡಮನಿ
ಬಳ್ಳಾರಿ -ವೆಂಕಟೇಶ ಪ್ರಸಾದ್
ಕೋಲಾರ -ಕೆ.ಎಚ್.ಮುನಿಯಪ್ಪ/ ಡಾ.ಎಲ್.ಹನುಮಂತಯ್ಯ
ಚಾಮರಾಜನಗರ -ಸುನಿಲ್ ಬೋಸ್
ಮೈಸೂರು -ಎಂ.ಲಕ್ಷ್ಮಣ್
ಚಿಕ್ಕಮಗಳೂರು- ಉಡುಪಿ -ಜಯಪ್ರಕಾಶ್ ಹೆಗ್ಡೆ
ದಕ್ಷಿಣ ಕನ್ನಡ -ಪದ್ಮರಾಜ್
ಚಿತ್ರದುರ್ಗ -ಬಿ.ಎನ್.ಚಂದ್ರಪ್ಪ
ಬೆಳಗಾವಿ -ಮೃಣಾಲ್ ಹೆಬ್ಬಾಳ್ಕರ್
ಚಿಕ್ಕೋಡಿ -ಪ್ರಿಯಾಂಕಾ ಜಾರಕಿಹೊಳಿ
ಹುಬ್ಬಳ್ಳಿ -ಧಾರವಾಡ -ವಿನೋದ್ ಅಸೂಟಿ
ಬಾಗಲಕೋಟೆ -ಸಂಯುಕ್ತ ಪಾಟೀಲ್
ಉತ್ತರಕನ್ನಡ -ಅಂಜಲಿ ನಿಂಬಾಳ್ಕರ್
ದಾವಣಗೆರೆ - ಲತಾ ಮಲ್ಲಿಕಾರ್ಜುನ
ಕೊಪ್ಪಳ -ರಾಜಶೇಖರ ಹಿಟ್ನಾಳ/ ಅಮರೇಗೌಡ ಬಯ್ಯಾಪುರ
ರಾಯಚೂರು -ಜಿ. ಕುಮಾರ ನಾಯ್ಕ್
ಬೀದರ್ - ರಾಜಶೇಖರ ಪಾಟೀಲ/ ಸಾಗರ್ ಬಿ. ಖಂಡ್ರೆ
ಕರ್ನಾಟಕದ 7 ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
* ಶಿವಮೊಗ್ಗ- ಗೀತಾ ಶಿವರಾಜ್ ಕುಮಾರ್
* ತುಮಕೂರು- ಎಸ್ಪಿ ಮುದ್ದಹನುಮೇಗೌಡ
* ಮಂಡ್ಯ- ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
* ಹಾಸನ- ಶ್ರೇಯಸ್ ಪಟೇಲ್
* ಬೆಂಗಳೂರು ಗ್ರಾಮಾಂತರ- ಡಿಕೆ ಸುರೇಶ್
* ವಿಜಯಪುರ- ಎಚ್ಆರ್ ಅಲ್ಗೂರ್
* ಹಾವೇರಿ: ಆನಂದ್ ಸ್ವಾಮಿ ಗಡ್ಡ ದೇವರಮಠ
ಇನ್ನೂ ಬೆಂಗಳೂರು ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಗಳ ಹುಡುಕಾಟವನ್ನ ನಡೆಸುತ್ತಿದೆ. ಈ ಕುರಿತು ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ್ರೆ. ಇತ್ತ ಕಾಂಗ್ರೆಸ್ ನಿಂದ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರನ್ನ ಕಣಕ್ಕಿಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಚಿಂತನೆ ನಡೆಸಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥಳೀಯ ಮುಖಂಡರೊಂದಿಗೆ ರಾಮಲಿಂಗಾರೆಡ್ಡಿ ಅವರು ಸಭೆ ನಡೆಸಿದ್ದಾರೆ.
ಬಿಜೆಪಿಯ ಭದ್ರಕೋಟೆಯಾಗಿರುವ ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ ಅವರಿಗೆ ಬಿಜೆಪಿ ಹೈಕಮಾಂಡ್ ಕಣಕ್ಕಿಳಿಸಿದ್ರೆ, ಕಾಂಗ್ರೆಸ್ ನಾಯಕರು ಪ್ರಿಯಾ ಕೃಷ್ಣ ಅವರನ್ನ ಕಣಕ್ಕಿಳಿಸಲು ಹಲವು ತಂತ್ರಗಾರಿಕೆಯನ್ನ ನಡೆಸಿದೆ. ಅಲ್ಲದೇ ಬೆಂಗಳೂರು ಕೇಂದ್ರದಿಂದ ಪಿ ಸಿ ಮೋಹನ್ ಕಣಕ್ಕಿಳಿದಿದ್ದು, ಕಾಂಗ್ರೆಸ್ ನಿಂದ ಹ್ಯಾರಿಸ್ ಅವರನ್ನ ಕಣಕ್ಕಿಳಿಸಲು ಕೈ ನಾಯಕರು ಮುಂದಾಗಿದ್ದು, ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತೆ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications