Heavy Rain: ಮುಂದಿನ 24 ಗಂಟೆಯಲ್ಲಿ ಭರ್ಜರಿ ಮುಂಗಾರು ಮಳೆ!
ಮಳೆ ಅಬ್ಬರ ಜೋರಾಗಿದ್ದು, ಮುಂಗಾರು ಮಳೆ ಮೋಡಗಳು ಭಾಗಶಃ ಕರ್ನಾಟಕವನ್ನ ಆವರಿಸಿ ಮಳೆ ಸುರಿಸುತ್ತಿವೆ. ಹೀಗಿದ್ದಾಗ ಮುಂದಿನ 24 ಗಂಟೆಯಲ್ಲಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದರೆ ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳೋದು ಗ್ಯಾರಂಟಿ ಆಗಿದೆ? ಬನ್ನಿ ತಿಳಿಯೋಣ.
ಈಗಾಗಲೇ ಕರ್ನಾಟಕದಲ್ಲಿ ಭರ್ಜರಿ ಮಳೆ ಆಗಮನ ಆಗಿದ್ದು, ಕರ್ನಾಟಕದ ಬಹುತೇಕ ಡ್ಯಾಂ & ನದಿಗಳಲ್ಲಿ ಭಾರಿ ನೀರಿನ ಹರಿವು ದಾಖಲಾಗುತ್ತಿದೆ. ಹೀಗಿದ್ದಾಗ ಮುಂದಿನ 24 ಗಂಟೆ ಅವಧಿ ಕರ್ನಾಟಕಕ್ಕೆ ಮತ್ತೆ ಪ್ರಮುಖ ಎನ್ನಲಾಗಿದೆ. ಯಾಕಂದ್ರೆ ಮತ್ತೆ ಭರ್ಜರಿ ಮಳೆಯು ಸುರಿಯುವ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಈ ಮೂಲಕ ಕರ್ನಾಟಕದ ಇನ್ನೂ ಹಲವು ಜಿಲ್ಲೆಗಳಿಗೆ ಮಳೆ ಎಂಟ್ರಿ ಆಗಲಿದೆ. ಆ ಜಿಲ್ಲೆಗಳು ಯಾವುವು? ಮುಂದೆ ಓದಿ.

ಈ ಜಿಲ್ಲೆಗಳಿಗೆ ಭಾರಿ ಮಳೆ!
ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕೊಡಗು & ಉಡುಪಿ, ಚಾಮರಾಜನಗರ, ಮಂಡ್ಯ, ಮಂಗಳೂರು, ಉತ್ತರ ಕನ್ನಡ, ತುಮಕೂರು & ಹಾಸನ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಭರ್ಜರಿ ಮಳೆ ಆಗಲಿದ್ದು. ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಿಗೆ ಭರ್ಜರಿ ಮಳೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ, ಉತ್ತರ ಕರ್ನಾಟಕ ಭಾಗದಲ್ಲಿಯೂ ಭರ್ಜರಿ ಮಳೆಯ ಸಿಂಚನ ಆಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಉತ್ತರ ಕರ್ನಾಟಕದಲ್ಲೂ ಭಾರಿ ಮಳೆ
ವಿಜಯಪುರ & ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ಬಾಗಲಕೋಟೆ & ಬೆಳಗಾವಿ, ಬಳ್ಳಾರಿ, ಕೊಪ್ಪಳ & ಧಾರವಾಡ, ಗದಗ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸಲಿದೆ. ಮುಂದಿನ 24 ರಿಂದ 48 ಗಂಟೆ ಅವಧಿಯಲ್ಲಿ ಮಳೆ ಆರ್ಭಟ ಇನ್ನೂ ಜೋರಾಗಿ ಇರಲಿದೆ ಎಂದು ವಾರ್ನಿಂಗ್‌ನ ಕೂಡ ನೀಡಲಾಗಿದೆ. ಇದೇ ಕಾರಣಕ್ಕೆ ಈಗ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಕರ್ನಾಟಕದ ಜಲಾಶಯಗಳು ಭರ್ತಿಯಾಗುವ ಸಾಧ್ಯತೆ ದಟ್ಟವಾಗಿದೆ. ಇದೇ ರೀತಿ ಮಳೆ ಅಬ್ಬರ ಇರಲಿ ದೇವರೆ ಅಂತಾ ರೈತರು & ಕೃಷಿಕರು ವರುಣನ ಬಳಿ ಮನವಿ ಮಾಡ್ತಿದ್ದಾರೆ.












Click it and Unblock the Notifications