Rain Alert: ಮಳೆ.. ಮಳೆ.. ಎಲ್ಲೆಲ್ಲಿ ಮಳೆ?
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಭರ್ಜರಿ ಮಳೆ ಬಿದ್ದಿದ್ದು, ಈ ಮೂಲಕ ಕನ್ನಡಿಗರು ಖುಷ್ ಆಗಿದ್ದಾರೆ. ಬೇಸಿಗೆ ಬಿಸಿಲಲ್ಲಿ ಕನ್ನಡಿಗರು ನರಳಾಡಿದ್ದು, ಹನಿ ಹನಿ ನೀರಿಗೂ ಪರದಾಡಿದ್ದರು ಜನ. ಆದರೆ ಕಳೆದ 1 ವಾರದಿಂದ ಕನ್ನಡ ನಾಡಿನಲ್ಲಿ ಭರ್ಜರಿಯಾಗಿ ಮಳೆ ಬೀಳುತ್ತಿದೆ. ಹಾಗಾದ್ರೆ ಈಗ ಹೇಗಿದೆ ಹವಾಮಾನ?
ಕನ್ನಡಿಗರ ಮೇಲೆ ಮುನಿಸಿಕೊಂಡಿದ್ದ ವರುಣ ದೇವ ಕೆಲವು ದಿನಗಳ ಹಿಂದೆ ಒಂದಷ್ಟು ಕರುಣೆ ತೋರಿಸಿದ್ದು ರಾಜ್ಯದಲ್ಲಿ ಬೇಸಿಗೆ ಬಿರು ಬಿಸಿಲಿನ ನಡುವೆ ಭಾರಿ ಮಳೆ ಬಂದಿತ್ತು. ಅದರಲ್ಲಿಯೂ ಕನ್ನಡ ನಾಡಿನ ಮಲೆನಾಡು ಭಾಗ ಸೇರಿ, ಕರಾವಳಿ ಪ್ರದೇಶದಲ್ಲಿ ಸುರಿಯುತ್ತಿದ್ದ ಮಳೆ ಇದೀಗ ಬಯಲು ಸೀಮೆ ಪ್ರದೇಶವಾದ ಉತ್ತರ ಕರ್ನಾಟಕದಲ್ಲಿ ಕೂಡ ಅಬ್ಬರಿಸಲು ಶುರು ಮಾಡಿತ್ತು ಈ ಮೂಲಕ ಜನ ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಹೇಗಿದೆ ಮಳೆಯ ಮುನ್ಸೂಚನೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಈ ಜಿಲ್ಲೆಗಳಲ್ಲಿ ಮಳೆಯ ಬಗ್ಗೆ...
ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿ ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಚಿತ್ರದುರ್ಗ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ ಜಿಲ್ಲೆ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಬಹುತೇಕ ಮಳೆ ಸುರಿದಿತ್ತು. ಆದರೆ ಈಗ ಸೀನ್ ಚೇಂಜ್ ಆಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಮಳೆ ಬೀಳುವ ಪ್ರದೇಶಗಳು ಕಡಿಮೆ ಆಗುತ್ತಿದ್ದು, ಕಳೆದ ವಾರ ಕರ್ನಾಟಕದಲ್ಲಿ ಅಬ್ಬರಿಸಿದ್ದ ಮಳೆರಾಯ ಈಗ ಸೈಲೆಂಟ್ ಆಗಿ, ಮತ್ತೆ ಬಿಸಿಲು ಅಬ್ಬರಿಸುತ್ತಿದೆ. ಆದರೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ಇದೆ, ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.
ಮುಂದಿನ 24 ಗಂಟೆಗಳ ಕಾಲ...
ಇಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು, ಬೀದರ್, ಕೊಪ್ಪಳ ಸೇರಿದಂತೆ ಕೆಲವೇ ಕೆಲವು ಜಿಲ್ಲೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ 24 ಗಂಟೆಗಳ ಕಾಲ ಯಾವುದೇ ಭರ್ಜರಿ ಮಳೆಯ ಆಗಮನ ಆಗಲ್ಲ ಎನ್ನಲಾಗುತ್ತಿದೆ. ಈ ಮೂಲಕ ಮತ್ತೊಮ್ಮೆ ಮಳೆರಾಯ ಕನ್ನಡ ನಾಡಿಗೆ ಆಘಾತ ನೀಡುತ್ತಿದ್ದಾನೆ. ಯಾಕಂದ್ರೆ ಬಿಸಿಲಿನ ಆರ್ಭಟದ ಮುಂದೆ ಭರ್ಜರಿಯಾಗಿ ಮಳೆಯ ಆರ್ಭಟ ಕೂಡ ಇರಬೇಕಿತ್ತು. ಆದರೆ ಈಗ ಎಲ್ಲವೂ ಉಲ್ಟಾ ಆಗುತ್ತಿರುವುದು ಚಿಂತೆಯನ್ನು ಹೆಚ್ಚು ಮಾಡಿದೆ.
ಒಟ್ನಲ್ಲಿ ಭೀಕರ ಬಿಸಿಲಿನ ನಡುವೆ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಹೀಗೆ ಬೆಳೆ ಉಳಿಸಿಕೊಳ್ಳಲು ಕರ್ನಾಟಕದ ಕೃಷಿಕರು ಪರದಾಡುವ ಸಮಯದಲ್ಲೇ ಮಳೆರಾಯನಿಂದ ಮತ್ತೊಮ್ಮೆ ಆಘಾತ ಎದುರಾಗಿದೆ. ಇನ್ನೇನು ಉತ್ತಮವಾಗಿ ಮಳೆ ಬೀಳಲಿದೆ ಬಿಡು ದೇವರೆ ಅಂತಾ ಜನರು ಅಂದುಕೊಳ್ಳುವ ಸಮಯದಲ್ಲೇ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ.












Click it and Unblock the Notifications