KRS & Kabini Dam: ಮಂಡ್ಯ ರೈತರಿಗೆ ಸಿಹಿ ಸುದ್ದಿ: KRS ಡ್ಯಾಂಗೆ ಇಂದು ಒಳಹರಿವು ಭಾರೀ ಹೆಚ್ಚಳ: ಇಲ್ಲಿದೆ ಸಂಪೂರ್ಣ ವಿವರ
ಮಂಡ್ಯ, ಜುಲೈ 19: ಕಳೆದ ವರ್ಷ ಮಳೆ ಇಲ್ಲದೆ ರೋಸಿ ಹೋಗಿದ್ದ ರೈತರು ಈ ವರ್ಷದ ಮಳೆಯಿಂದಾಗಿ ಸಂತಸದಲ್ಲಿದ್ದು, ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನಿರಂತರವಾಗಿ ಧಾರಾಕಾರವಾಗಿ ಮಳೆ ಮುಂದುವರೆದಿದೆ. ರಾಜ್ಯದ ಬಹುತೇಕ ಭಾಗಗಲ್ಲಿ ಮಳೆಯಿಂದಾಗಿ ಅವಾಂತರಗಳು ಸಂಭವಿಸುತ್ತಿವೆ. ಹಲವು ಕಡೆ ಸಾವು ನೋವುಗಳು ಸಂಭವಿಸಿದ್ದು, ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ
ಇತ್ತ ಕಳೆದ ವರ್ಷ ಕೆ ಆರ್ ಎಸ್ ನಲ್ಲಿ ನಿರೀಕ್ಷೆ ತಕ್ಕಷ್ಟು ಮಳೆಯಾಗದ ಹಿನ್ನೆಲೆ ರೈತ ಸಮುದಾಯ ಸಾಕಷ್ಟು ಸಮಸ್ಯೆಗಳನ್ನ ಅನುಭವಿಸಿದ್ದು, ಈ ವರ್ಷ ಮುಂಗಾರು ಆರಂಭಕ್ಕೂ ಮೊದಲೇ ಭರ್ಜರಿ ಮಳೆಯಾಗಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾರ್ಭಟ ಜೋರಾಗಿದೆ. ಕೊಡಗು ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಎಡೆಬಿಡದೆ ಧಾರಾಕಾರ ಮಳೆ ಮುಂದುವರಿದಿದ್ದು, ಕೃಷ್ಣರಾಜ ಅಣೆಕಟ್ಟೆ ಭರ್ತಿಯಾಗುವ ಶುಭ ಕಾಲ ಹತ್ತಿರವಾಗುತ್ತಿದೆ.

ಇಂದು ಆರ್ಎಸ್ನ ಒಳಹರಿವಿನ ಮಟ್ಟ 44,617 ಕ್ಯೂಸೆಕ್ ಇದೆ. 116.60 ಅಡಿ ನೀರಿನ ಮಟ್ಟ ತಲುಪಿದೆ. ಕೆಆರ್‌ಎಸ್ ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಆಗಿದೆ. ಕೆಆರ್‌ಎಸ್ ಡ್ಯಾಂಗೆ ಇಂದಿನ ಒಳ ಹರಿವು 46,165 ಕ್ಯೂಸೆಕ್ ನೀರು ಇದ್ರೆ ಹೊರ ಹರಿವು 2,732 ಕ್ಯೂಸೆಕ್ ಇದೆ. ಇತ್ತ ಕಾವೇರಿ ಜಲನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದೆ.
ಮುಂಜಾಗೃತ ಕ್ರಮವಾಗಿ ಡ್ಯಾಂನಿಂದ ನದಿಗೆ ನೀರು ಬಿಡುಗಡೆ ಮಾಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಧರಿಸಿದ್ದಾರೆ. ನಾಳೆಯಿಂದ (ಜುಲೈ 20) ಕಾವೇರಿ ನದಿಗೆ 1 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ನಾಳೆ ನದಿಗೆ ಮತ್ತಷ್ಟು ನೀರು ಬಿಡುಗಡೆಯಾಗುವ ಸಾಧ್ಯತೆ ಇದೆ.
ಇಂದಿನ KRS ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ - 118.10 ಅಡಿ
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
ಇಂದಿನ ಸಾಮರ್ಥ್ಯ - 40.688 ಟಿಎಂಸಿ
ಒಳ ಹರಿವು - 46,165 ಕ್ಯೂಸೆಕ್
ಹೊರ ಹರಿವು - 2,732 ಕ್ಯೂಸೆಕ್
ಇಂದಿನ ಕಬಿನಿ ಜಲಾಶಯದ ನೀರಿನ ಮಟ್ಟ
ಭರ್ಜರಿ ಮಳೆಯಿಂದಾಗಿ ಕಬಿನಿ ಜಲಾಶಯ ಭರ್ತಿಯಾಗುತ್ತಿದ್ದು, ಕಬಿನಿ ಡ್ಯಾನಿಂದ 50 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಟ್ಟಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಎದುರಾಗಿದೆ.
ಗರಿಷ್ಠ ಮಟ್ಟ: 2284.00 ಅಡಿ.
ಇಂದಿನ ಮಟ್ಟ: 2280.41 ಅಡಿ.
ಗರಿಷ್ಠ ಕ್ಯಾಪ್: 19.52Tmc.
ಇಂದಿನ ಮಿತಿ: 17.28 ಟಿಎಂಸಿ
ಒಳಹರಿವು: 46064 ಕ್ಯೂಸೆಕ್
ಹೊರಹರಿವು: 40000 ಕ್ಯೂಸೆಕ್












Click it and Unblock the Notifications