Get Updates
Get notified of breaking news, exclusive insights, and must-see stories!

ಮತ್ತೆ ದೇವೇಗೌಡರ ಕುಟುಂಬದಲ್ಲಿ ಟಿಕೆಟ್‌ ಗೆ ಫೈಟ್;‌ ನಮ್ಮ ಕುಟುಂಬದಿಂದ ಯಾರಿಗೂ ಟಿಕೆಟ್‌ ಇಲ್ಲ: ಹೆಚ್‌ ಡಿ ಕುಮಾರಸ್ವಾಮಿ

ರಾಮನಗರ,ಆಗಸ್ಟ್‌ 20: ಯಾವುದೇ ಕಾರಣಕ್ಕೂ ನಮ್ಮ ಕುಟುಂಬದಿಂದ ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ.ಕಾರ್ಯಕರ್ತರನ್ನ ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಹೇಳಿದ್ದು, 2024 ರ ಲೋಕಸಭಾ ಚುನಾವಣೆಯಲ್ಲಿಯೂ ಟಿಕೆಟ್‌ ವಿಚಾರದಲ್ಲಿ ಮತ್ತೆ ದೇವೇಗೌಡರ ಕುಟುಂಬದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ.

ಈ ಕುರಿತು ಭಾನುವಾರ ಮಾಧ್ಯಮಗಳ ಜೊತೆಗೆ ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆ ಸ್ಪರ್ಧೆ ಕುರಿತು ಮಾತನಾಡಿ, ನಿಖಿಲ್ ಕುಮಾರಸ್ವಾಮಿ ಗೆ ಬದುಕಲು ಹಲವಾರು ಮಾರ್ಗಗಳಿವೆ.
ಭಗವಂತ ಅವರಿಗೆ ಕಲೆ ಕೊಟ್ಟಿದ್ದಾನೆ. ಅವರು ನೆಮ್ಮದಿಯಲ್ಲಿ ಬದುಕಬಹುದು. ರಾಜಕೀಯದಿಂದಲೇ ಬದುಕಬೇಕಾ? ಎಂದು ಪ್ರಶ್ನಿಸಿದರು.

HD Kumaraswamy: No One From Our Family Has Tickets For Lok Sabha Election

ರಾಜಕೀಯದಿಂದ ಬದುಕುವ ಅವಶ್ಯಕತೆ ಇಲ್ಲ. ಈಗ ರಾಜಕೀಯಕ್ಕೆ ಬರುವವರು ಲೂಟಿ ಹೊಡೆಯುವವರು. ಅಂತವರನ್ನೇ ಜನರು ಮೆಚ್ಚಿಕೊಳ್ಳುತ್ತಾರೆ‌, ಕೆಲಸ ಮಾಡುವವರು ಬೇಕಾಗಿಲ್ಲ.
ರಾಜಕೀಯದಲ್ಲಿ ನಿಖಿಲ್ ಕುಮಾರಸ್ವಾಮಿ ಬದುಕಬೇಕಾಗಿಲ್ಲ. ನಾನು ಹಲವಾರು ಬಾರಿ ರಾಜಕೀಯ ಬೇಡ ಎಂದೇ ಹೇಳಿದ್ದೇನೆ, ಕಾರ್ಯಕರ್ತರ ಹಿಂಸೆಗಾಗಿ ಸ್ಪರ್ಧೆ ಮಾಡಿದ್ದ. ಸದ್ಯ ನಾನು ಚುನಾವಣೆಗೆ ನಿಲ್ಲು ಅಂತ ಹೇಳುವುದಿಲ್ಲ.ಅವನು ನೆಮ್ಮದಿಯಿಂದ ಬದುಕಲಿ. ಕಷ್ಟ ಅಂತ ಬಂದವರಿಗೆ ಸಹಾಯ ಮಾಡೋಣ. ರಾಜಕೀಯ ಮಾಡೆ ಜನರ ಕಷ್ಟ ನೋಡಬೇಕಾ? ಎಂದು ಕೇಳಿದರು.

ಯಾವುದೇ ಕಾರಣಕ್ಕೂ ನಮ್ಮ ಕುಟುಂಬದಿಂದ ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ. ಕಾರ್ಯಕರ್ತರನ್ನ ನಿಲ್ಲಿಸಿ ಗೆಲ್ಲಿಸುತ್ತೇನೆ. 1999 ರಲ್ಲಿ ದೇವೇಗೌಡರು, ರೇವಣ್ಣ ಜೊತೆ ನಾನು ಸೋತೆ.
2004 ರಲ್ಲಿ ನಾವೇ ಗೆದ್ವಿ.ಇದೇ ಜನರೇ ಮತ್ತೆ ಕೈ ಹಿಡಿಯುತ್ತಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರಿಗೂ ಶಾಶ್ವತ ಇಲ್ಲ. ಜನರಿಗೆ ಬೇಕಾದಾಗೆ ನಿರ್ಧಾರ ಮಾಡುತ್ತಾರೆ‌. ಹೆದರಿಕೊಂಡು‌ ನಾವು ಎಲ್ಲೂ ಹೋಗಲ್ಲ. ರಾಮನಗರದಲ್ಲಿ ಜನರೆ ಕೈ ಹಿಡಿಯುತ್ತಾರೆ ಎಂದು ಹೇಳಿದರು.

ಏಕವಚನದಲ್ಲಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ವಾಗ್ದಾಳಿ

ತಾಜ್ ವೆಸ್ಟೇಂಡ್ ಹೋಟೆಲ್‌ನಲ್ಲಿ ಕುಮಾರಸ್ವಾಮಿ ಅಧಿಕಾರ ನಡೆಸುತ್ತಿದರು ಎಂಬ ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, INDIA ಕಾರ್ಯಕ್ರಮ ಮಾಡಿದ್ರಾಲ್ಲ, ಅದನ್ನ ಎಲ್ಲಿ ಮಾಡಿದ್ರು.
ಅವರು ಅದೇ ಜಾಗದಲ್ಲೇ ಮಾಡಿದ್ದಾರೆ. ನನ್ನಷ್ಟು ಜನಕ್ಕೆ ಹತ್ತಿರವಾಗಿ ಸಿಗೋನು ಈ ಭೂಮಿ ಮೇಲೆ‌ಯಾವನಾದ್ರೂ ಇದ್ದಾನ? ಬದುಕುವುದನ್ನ ಇವರ ಬಳಿ‌ ಕಲಿಯಬೇಕ ನಾನು. ನೈಸ್ ಕಂಪನಿ ಭೂಮಿ‌ ಲೂಟಿ ಹೊಡೆದುಕೊಂಡು ಇಂದು ಏನೇನು ಮಾಡಿಕೊಂಡಿದ್ದೀರಿ. 2013 ಎಂಪಿ ಆಗುವ ಮೊದಲು ಇವರ ಆಸ್ತಿ ಎಷ್ಟಿತ್ತು, ಎಂಪಿ ಆಗಿ 8 ವರ್ಷಕ್ಕೆ ಆಸ್ತಿ ಎಷ್ಟು ಮಾಡಿಕೊಂಡಿದ್ದಾನೆ.
ಏಕವಚನದಲ್ಲಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.

HD Kumaraswamy: No One From Our Family Has Tickets For Lok Sabha Election

ದೇವೇಗೌಡರು ಅರ್ಗಿಮೆಂಟ್ ಮಾಡಿದ್ದು ನೈಸ್ ರಸ್ತೆ ಮಾಡ್ಲಿ ಅಂತಾ. ಬೆಂಗಳೂರು ಮೈಸೂರು ಜನರಿಗೆ ತೊಂದರೆಯಾಗದಂತೆ ರಸ್ತೆ ಮಾಡಲು ಅರ್ಗಿಮೆಂಟ್ ಮಾಡಿದ್ರು. ರಾಮಕೃಷ್ಣ ಹೆಗ್ಗಡೆ ಸಿಎಂ ಆಗಿದ್ದಾಗ ಮಾಯಾಗನಹಳ್ಳಿ ಬಳಿ ಆಕ್ಸಿಡೆಂಟ್ ಆಯ್ತು. ಅಂದು ದೇವೇಗೌಡರು ಈ ರಸ್ತೆಯನ್ನ‌ ನಾಲ್ಕು ಪಥದ ರಸ್ತೆ ಮಾಡುವ ತಿರ್ಮಾನಕ್ಕೆ ಬಂದಿದ್ದರು. ದುಡ್ಡಿಲ್ಲ ಅಂತಾ ರಾಮಕೃಷ್ಣ ಹೆಗ್ಗಡೆಯವರು ಮಾಡ್ಲಿಲ್ಲ. ಇವರು ಸಿಎಂ ಆಗಿ ಆ ಪ್ರಾಜೆಕ್ಟ್‌ನ ಸರಿಯಾಗಿ ಮಾಡಿದ್ರೆ. ಇಂದು ಏಷ್ಯಾ ಖಂಡದಲ್ಲೇ ಚಟುವಟಿಕೆ ಯಾವ ರೀತಿ ಇರ್ತಿತ್ತು ಅನ್ನೋದನ್ನ ಊಹೆ ಮಾಡಲು ಸಾಧ್ಯವಿಲ್ಲ.
ಆದ್ರೆ ಇವರು ಬೆಂಗಳೂರು ಸುತ್ತಮುತ್ತ ರೈತರ ಭೂಮಿಯನ್ನ‌ ಲೂಟಿ ಹೊಡೆದರೂ. ಈ ಬಗ್ಗೆ ದಾಖಲಾತಿ ಕೊಡುತ್ತೇನೆ ಎಂದು ಹೇಳಿದರು.

ರಾಮನಗರ ಅಭಿವೃದ್ಧಿಯಾಗೇ ಇಲ್ವಂತೆ. 6 ನೇ ಗ್ಯಾರಂಟಿ ವಾಟರ್ ಗೆ ನೀಡುತ್ತಾರಂತೆ, 30 ವರ್ಷಗಳ ಹಿಂದೆ ರಾಮನಗರ ಹೇಗಿತ್ತು. ದೇವೇಗೌಡರ ಕುಟುಂಬ ಬರುವುದಕ್ಕೂ ಮೊದಲು ಈ ತಾಲೂಕು ಹೇಗಿತ್ತು. ಅರ್ಥಿಕ ವಿಚಾರದಲ್ಲಿ ರಾಮನಗರ ಮೊದಲನೇ ಸ್ಥಾನದಲ್ಲಿದೆ. ಇದು ದೇವೇಗೌಡರ ಕುಟುಂಬ ಜಿಲ್ಲೆಗೆ ಕೊಟ್ಟಿರುವ ಕೊಡುಗೆಯಾಗಿದೆ. ನಾನು ಮಾಡಿರುವ ಕೆಲಸಕ್ಕೆ ನೀವು ಸುಣ್ಣ, ಬಣ್ಣ ಹೊಡೆಸಿಕೊಂಡು ಇರಿ. ನೀವೇನು ಹೊಸ ಕೆಲಸ ತರುವುದು ಬೇಕಾಗಿಲ್ಲ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ವಿರುದ್ದ ವ್ಯಂಗ್ಯವಾಡಿದರು.

ಕಾವೇರಿಯಿಂದ ರಾಮನಗರ - ಚನ್ನಪಟ್ಟಣಕ್ಕೆ ಕುಡಿಯುವ ನೀರು ಕೊಟ್ಟಿದ್ದ ದೇವೇಗೌಡರ ಕಾಲದಲ್ಲಿ. 2013-18 ರ ವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಆಗ ಡಿ.ಕೆ.ಶಿವಕುಮಾರ್ ಜಿಲ್ಲೆಗೆ ಮಂತ್ರಿಯಾಗಿದ್ರು. ಅವತ್ತೇ ಜಿಲ್ಲೆಗೆ ನೀರು ತರಬಹುದಿತ್ತಲ್ವಾ.ಆ 5 ವರ್ಷ ಡಿ ಕೆ ಶಿವಕುಮಾರ್ ಬಂಡೆ ಹೊಡೆಯುತ್ತಾ ಕುತ್ತಿದ್ರಾ?. ಸಾಕ್ಷಿಗುಡ್ಡೆಗಳನ್ನ ರೆಡಿ ಮಾಡ್ತಾ ಕೂತಿದ್ರಾ?. ಕುಮಾರಸ್ವಾಮಿ ಸಾಕ್ಷಿಗುಡ್ಡೆ ಎಲ್ಲಾ ಕಡೆ ಕಣ್ಣಿಗೆ ಕಾಣುತ್ತವೆ. ಇವರದ್ದು ಕಲ್ಲು ಬಂಡೆ ಹೊಡೆದು ಚೈನಾಗೆ ಸಾಗಿಸಿದ್ದೇ ಸಾಕ್ಷಿಗುಡ್ಡೆ ಎಂದು ಕಿಡಿಕಾರಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+