ಐಐಟಿ ಹಾಸನದಲ್ಲಿ ಸ್ಥಾಪನೆಯಾಗಬೇಕು ಅಂದ್ರು ದೇವೇಗೌಡ್ರು

ಹಾಸನ, ಮಾ.9 : ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ರಾಜ್ಯದ ಯಾವ ಜಿಲ್ಲೆಯಲ್ಲಿ ಸ್ಥಾಪಿಸಬೇಕು? ಎಂಬ ಚರ್ಚೆ ಜೋರಾಗಿದೆ. ಹಾಸನ ಜಿಲ್ಲೆಯಲ್ಲಿ ಐಐಟಿ ಸ್ಥಾಪನೆ ಮಾಡಬೇಕು ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಹಾಸನ ಜಿಲ್ಲೆ ಹೊಳೇನರಸಿಪುರದ ಮಾವನೂರು ಗ್ರಾಮದಲ್ಲಿ ಭಾನುವಾರ ಮಾತನಾಡಿದ ದೇವೇಗೌಡರು, ಹಾಸನದಲ್ಲಿ ಐಐಟಿ ಸ್ಥಾಪನೆಗೆ ಅಗತ್ಯವಾದ ಮೂಲಸೌಕರ್ಯವಿದೆ. ಯಾವ ಜಿಲ್ಲೆಯಲ್ಲಿ ಐಐಟಿ ಸ್ಥಾಪಿಸಬೇಕು ಎಂಬ ಬಗ್ಗೆ ಚರ್ಚಿಸಲು ತಜ್ಞರ ಸಮಿತಿ ರಚಿಸುವ ಅಗತ್ಯವಿಲ್ಲ, ಹಾಸನದಲ್ಲಿಯೇ ಸ್ಥಾಪನೆ ಮಾಡಬಹುದು ಎಂದು ತಿಳಿಸಿದರು. [ಐಐಟಿ ಎಲ್ಲಿ ಸ್ಥಾಪನೆ ಆಗಬೇಕು? ಪ್ರಶ್ನೆಗೆ ಉತ್ತರ ಸಿಕ್ಕಿದೆ!]

deve gowda

ಕಳೆದ ವಾರ ಬೆಳಗಾವಿಯಲ್ಲಿ ಐಐಟಿ ಸ್ಥಾಪಿಸುವಂತೆ ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಸದ್ಯ, ದೇವೇಗೌಡರು, ಹಾಸನದಲ್ಲೇ ಸ್ಥಾಪಿಸಬೇಕು ಎಂದು ಹೇಳಿದ್ದಾರೆ. [ಯಾವ ಜಿಲ್ಲೆಗೆ ಐಐಟಿ, ನಿಮ್ಮ ಅಭಿಪ್ರಾಯ ತಿಳಿಸಿ]

ನಮ್ಮ ಓದುಗರು ಹಾಸನಕ್ಕೆ ಮತ ಹಾಕಿದ್ದರು : ಒನ್ ಇಂಡಿಯಾ ಕನ್ನಡದ ಓದುಗರು ಐಐಟಿ ಸ್ಥಾಪಿಸಲು ಹಾಸನ ಪ್ರಶಸ್ತವಾದ ಜಾಗ, ಏಕೆಂದರೆ, ಅಲ್ಲಿ ಸರ್ಕಾರದಿದಂದ ಮಾನ್ಯತೆ ಪಡೆದ ಯಾವ ದೊಡ್ಡ ಕಂಪನಿಗಳು ಇಲ್ಲ. ಆದ್ದರಿಂದ ಐಐಟಿ ಸ್ಥಾಪನೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಆದರೆ, ಧಾರವಾಡದಲ್ಲಿ ಸ್ಥಾಪನೆ ಮಾಡಬೇಕು ಎಂದು ಹೆಚ್ಚು ಜನರು ಮತ ಹಾಕಿದ್ದರು. [ಐಐಟಿ ಸ್ಥಾಪನೆಗೆ ಬೆಳಗಾವಿ ಉತ್ತಮ ಸ್ಥಳ]

ಕೇಂದ್ರ ಸರ್ಕಾರ 2015-16ನೇ ಸಾಲಿನ ಬಜೆಟ್‌ನಲ್ಲಿ ಕರ್ನಾಟಕದಲ್ಲಿ ಐಐಟಿ ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡುತ್ತಿದ್ದಂತೆ ಯಾವ ಜಿಲ್ಲೆಗೆ ಐಐಟಿ ಬರಬೇಕು ಎಂಬ ಚರ್ಚೆ ನಡೆಯುತ್ತಿದೆ. ಎಲ್ಲಿ ಸ್ಥಾಪನೆಯಾಗಬೇಕು ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿರುವುದು ಒಳ್ಳೆಯದೇ. ಸಾರ್ವಜನಿಕರ ಅಭಿಪ್ರಾಯ, ಬೇಕು-ಬೇಡಗಳನ್ನು ಅರಿತು ಸರ್ಕಾರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದು ಸೂಕ್ತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+