Government Employees: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್: ಇಷ್ಟು ದಿನ ಇನ್ಮುಂದೆ ಹೆಚ್ಚುವರಿ ರಜೆ!
Government Employees: ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ದೇಶದಾದ್ಯಂತ ಬರೋಬ್ಬರಿ 50 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಹಾಗೂ ಕೆಲಸ ಎರಡನ್ನೂ ಬ್ಯಾಲೆನ್ಸ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಉದ್ಯೋಗಿಗಳು ಅಳಲು ತೊಡಿಕೊಂಡಿದ್ದರು. ಈ ರೀತಿ ಇರುವಾಗಲೇ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಕೇಂದ್ರ ಸರ್ಕಾರವು ಇದೀಗ ಸರ್ಕಾರಿ ನೌಕರರಿಗೆ ಪ್ರತಿ ವರ್ಷವೂ 42 ಹೆಚ್ಚುವರಿ ರಜೆಗಳನ್ನು ನೀಡಲಾಗಿದೆ.
ಹೌದು ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಭರ್ಜರಿ ರಜೆ ಸುದ್ದಿಯನ್ನು ನೀಡಿದೆ. ಅದೂ ಸಹ ಒಂದಲ್ಲ.. ಎರಡಲ್ಲ ಬರೋಬ್ಬರಿ 42 ದಿನಗಳ ಕಾಲ ರಜೆ ಸಿಗಲಿದೆ. ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಸಚಿವಾಲಯದ ಹೊಸ ನೀತಿ ಜಾರಿ ಮಾಡಲಾಗಿದ್ದು. ಇದರಿಂದ ಲಕ್ಷಾಂತರ ಜನರಿಗೆ ಗುಡ್‌ನ್ಯೂಸ್ ಸಿಕ್ಕಂತೆ ಆಗಿದೆ.

ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸರ್ಕಾರಿ ನೌಕರರು ನಿರಂತರವಾಗಿ ಹಾಗೂ ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಹೆಚ್ಚುವರಿ ಕೆಲಸಗಳನ್ನು ಮಾಡಿದ್ದಾರೆ. ಅಲ್ಲದೇ ಕಠಿಣ ಶ್ರಮ ಹಾಕಿದ್ದಾರೆ. ಸರ್ಕಾರಿ ಕೆಲಸವನ್ನು ಸುಗಮವಾಗಿ ಮಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಂದುವರಿದು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ರೀತಿ ಸರ್ಕಾರಿ ನೌಕರರು ನಿರಂತರವಾಗಿ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ವಿಶ್ರಾಂತಿಯನ್ನು ಪಡೆಯುವ ಅವಶ್ಯಕತೆ ಇದೆ ಎಂದು ಹೇಳಲಾಗಿದ್ದು. ಕುಟುಂಬದೊಂದಿಗೆ ಅವರು ಸಮಯವನ್ನು ಕಳೆಯುವುದಕ್ಕೆ ಅವಶ್ಯಕತೆ ಇದೆ ಎಂದು ಪರಿಗಣಿಸಿ ಈ ನಿರ್ಧಾರ ಮಾಡಲಾಗಿದೆ. ಇನ್ನು ಕೇಂದ್ರ ಸರ್ಕಾರವು 2025ರ ಜುಲೈ 1ರಿಂದ ಹೊಸ ರಜೆ ನೀತಿಯನ್ನು ಜಾರಿಗೆ ತರಲಿದೆ ಎಂದು ವರದಿಯಾಗಿದೆ.
ಯಾವೆಲ್ಲ ಸರ್ಕಾರಿ ನೌಕರರಿಗೆ ಈ ರಜೆ ಸಿಗಲಿದೆ: ಇನ್ನು ಕೇಂದ್ರ ಸರ್ಕಾರವು ರಜೆ ವಿಚಾರದಲ್ಲಿ ಗುಡ್‌ನ್ಯೂಸ್ ನೀಡಿದೆಯಾದರೂ ಈ ರಜೆ ಎಲ್ಲರಿಗೂ ಅನ್ವಯವಾಗುವುದಿಲ್ಲ. ಕಾಯಂ ಸರ್ಕಾರಿ ನೌಕರರು ಹಾಗೂ ಒಂದು ವರ್ಷದ ಸೇವೆ ಪೂರ್ಣ ಮಾಡಿರುವವರಿಗೆ ಮಾತ್ರ ಈ ರಜೆ ಅನ್ವಯಿಸಲಿದೆ. ಹೀಗಾಗಿ, ಈ ಸರ್ಕಾರಿ ನೌಕರರಿಗೆ ಮಾತ್ರ ಹೆಚ್ಚುವರಿ 42 ದಿನ ರಜೆಗಳು ಸಿಗಲಿವೆ ಎಂದು ಹೇಳಲಾಗಿದೆ. ಅಲ್ಲದೇ ಅರೆಕಾಲಿಕ ನೌಕರರು, ಗುತ್ತಿಗೆದಾರರು ಇಲ್ಲವೇ ತಾತ್ಕಾಲಿಕ ಸಿಬ್ಬಂದಿಗೆ ಈ ಸೌಲಭ್ಯ ಸಿಗುವುದಿಲ್ಲ ಎಂದು ಹೇಳಲಾಗಿದೆ. ಅಲ್ಲದೇ ಇದರೊಂದಿಗೆ ಸಾಮಾನ್ಯ ರಜೆ (CL), ಅರ್ನ್ಡ್ ಲೀವ್ (EL) ಹಾಗೂ ವೈದ್ಯಕೀಯ ರಜೆಗಳೊಂದಿಗೆ 42 ದಿನಗಳ ಹೆಚ್ಚುವರಿ ರಜೆಗಳ ಸೇವೆ ಸಿಗಲಿದೆ ಎಂದು ಹೇಳಲಾಗಿದೆ.
ಸರ್ಕಾರಿ ನೌಕರರಿಗೆ ರಜೆ ವಿಷಯದಲ್ಲಿ ನೀಡಿರುವ ಅಪ್ಡೇಟ್‌ನಿಂದ ಸರ್ಕಾರಿ ನೌಕರರು ಭಾರೀ ಖುಷಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಕ್ಕೆ ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ ಹೆಚ್ಚಳವಾಗುತ್ತಿದೆ. ಹೀಗಾಗಿ, ಈ ರಜೆ ಅವರಿಗೆ ಅನುಕೂಲವಾಗಿದೆ ಎಂದು ಹೇಳಲಾಗಿದೆ.












Click it and Unblock the Notifications