ಗೋಕರ್ಣ ದೇವಾಲಯ ವಿವಾದ: ರಾಘವೇಶ್ವರ ಶ್ರೀಗಳ ನೋವಿನ ಮಾತು

Written By:
Subscribe to Oneindia Kannada

ಗೋಕರ್ಣ (ಉ.ಕ), ಸೆ 29: ಐತಿಹಾಸಿಕ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಇಂಗಿತ ವ್ಯಕ್ತ ಪಡಿಸಿರುವ ಹಿನ್ನಲೆಯಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ವಿಷಾದದ ಹೇಳಿಕೆಯನ್ನು ನೀಡಿದ್ದಾರೆ.

ಗೋಕರ್ಣದಲ್ಲಿ ಬುಧವಾರ (ಸೆ 28) 'ಗುರಿಕ್ಕಾರರ ಸಮಾವೇಶ'ದಲ್ಲಿ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದ ಶ್ರೀಗಳು, ಕಳೆದ ಕೆಲವು ವರ್ಷಗಳಿಂದ ಶ್ರೀಮಠದ ಮೇಲೆ ನಿರಂತರವಾಗಿ ಆಕ್ರಮಣಗಳಾಗುತ್ತಿದ್ದು, ಸರ್ಕಾರೀ ವ್ಯವಸ್ಥೆಯೂ ಕೂಡ ಅನಗತ್ಯವಾಗಿ ಪ್ರಹಾರವನ್ನು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ರಾಘವೇಶ್ವರ ಶ್ರೀಗಳ ಸಂದರ್ಶನ)

ಬೇರೆಲ್ಲೂ ಕಾಣಸಿಗದ ನಿಷ್ಠೆಯಿರುವ, ಬದ್ಧತೆಯಿರುವ ಲಕ್ಷಾಂತರ ಕಾರ್ಯಕರ್ತರು ಶ್ರೀಮಠಕ್ಕಿದ್ದು, ಅನೇಕ ವರ್ಷಗಳ ಪರಿಶ್ರಮದಿಂದ ಮಠವನ್ನು ಕಟ್ಟಿ ಬೆಳಸಲಾಗಿದೆ ಎಂದು ಶ್ರೀಗಳು ಹೇಳಿದ್ದಾರೆ.

ಇಂದು ಮಠವೆಂಬ ಕಲ್ಪವೃಕ್ಷವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಬೆಳೆಯನ್ನು ಬೆಳೆದರಷ್ಟೇ ಸಾಲದು ಭದ್ರ ಬೇಲಿಯನ್ನೂ ಹಾಕಿ ಸಂರಕ್ಷಿಸಿಕೊಳ್ಳಬೇಕು ಎಂಬುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಬೇಸರದ ಸಂಗತಿಯೆಂದು ರಾಘವೇಶ್ವರ ಶ್ರೀಗಳು ವಿಷಾದ ವ್ಯಕ್ತ ಪಡಿಸಿದ್ದಾರೆ. (ಮತ್ತೆ ಮುಜರಾಯಿ ತೆಕ್ಕೆಗೆ ಗೋಕರ್ಣ ದೇವಾಲಯ)

ಕಳೆದ ಕೆಲವು ವರ್ಷಗಳಿಂದ ಶ್ರೀಮಠದ ಮೇಲೆ ನಿರಂತರವಾಗಿ ಆಕ್ರಮಣಗಳಾಗುತ್ತಿದ್ದು, ಸರ್ಕಾರೀ ವ್ಯವಸ್ಥೆಯೂ ಕೂಡ ಅನಗತ್ಯವಾಗಿ ಪ್ರಹಾರವನ್ನು ಮಾಡುತ್ತಿದೆ. ಕಾನೂನನ್ನು ಗಾಳಿಗೆ ತೂರಿ ಮಠವನ್ನೇ ಸರ್ವನಾಶ ಮಾಡಲು ಹೊರಟಿದೆ. ಶ್ರೀಗಳ ನೋವಿನ ಮಾತು.. ಮುಂದೆ ಓದಿ..

ನೀಚ ಕಾರ್ಯದಲ್ಲಿ ಕೈಜೋಡಿಸಿರುವ ಶಂಕೆ

ನೀಚ ಕಾರ್ಯದಲ್ಲಿ ಕೈಜೋಡಿಸಿರುವ ಶಂಕೆ

ಉನ್ನತ ರಾಜಕೀಯ ವ್ಯಕ್ತಿಗಳು ಹಾಗೂ ವೈಯಕ್ತಿಕ ಹಿತಾಶಕ್ತಿಯನ್ನು ಹೊಂದಿರುವ ಕೆಲವು ಜನರು ಮಠದ ವಿರುದ್ಧ ವ್ಯವಸ್ಥಿತ ದಾಳಿಯನ್ನು ಮಾಡುತ್ತಿದ್ದು, ಮಠದ ಬೆಳವಣಿಗೆಯ ಬಗ್ಗೆ ಅಸೂಯೆ ಇರುವ ಕೆಲವು ಮಠಗಳೂ ಇಂತಹ ನೀಚಕಾರ್ಯದಲ್ಲಿ ಕೈಜೋಡಿಸಿರುವ ಶಂಕೆ ಇದೆ ಎಂದು ಶ್ರೀಗಳು ಸಂಶಯ ವ್ಯಕ್ತ ಪಡಿಸಿದ್ದಾರೆ.

1300 ವರ್ಷಗಳ ಇತಿಹಾಸವಿರುವ ಶ್ರೀಮಠ

1300 ವರ್ಷಗಳ ಇತಿಹಾಸವಿರುವ ಶ್ರೀಮಠ

1300 ವರ್ಷಗಳ ಇತಿಹಾಸವಿರುವ ಶ್ರೀಮಠ ಧರ್ಮದ ಹಾದಿಯನ್ನು ಎಂದಿಗೂ ಬಿಟ್ಟಿಲ್ಲ. ನೈತಿಕವಾಗಿ ಅಥವಾ ಕಾನೂನಾತ್ಮಕವಾಗಿ ನಮ್ಮ ಮಠದಲ್ಲಿ ಯಾವುದೇ ತಪ್ಪನ್ನು ಹುಡುಕಲು ಸಾಧ್ಯವಿಲ್ಲ. ಹತ್ತು ವರ್ಷಗಳಲ್ಲಿ ಹತ್ತು ರೂಪಾಯಿಯ ವ್ಯತ್ಯಾಸವೂ ನಮ್ಮ ಮಠದಲ್ಲಿ ಕಾಣಲು ಸಿಗುವುದಿಲ್ಲ. ಹೀಗಿದ್ದರೂ ಮಠವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ - ರಾಘವೇಶ್ವರ ಶ್ರೀ

ಮಿಥ್ಯಾರೋಪಗಳ ಸುರಿಮಳೆ

ಮಿಥ್ಯಾರೋಪಗಳ ಸುರಿಮಳೆ

ಕಳೆದ ಎರಡು ವರ್ಷಗಳಲ್ಲಿ ನಮ್ಮ ಮೇಲಾದ ಮಿಥ್ಯಾರೋಪಗಳ ಹಿಂದೆಯೂ ಮಠವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ನಡೆಸಿದ್ದ ಹುನ್ನಾರವಾಗಿದ್ದು, ಈ ಎಲ್ಲಾ ವಿಫಲ ಪ್ರಯತ್ನದ ಹಿಂದೆ ಕೆಲವು ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಮಾಯಾಸಮರ ಮಾಡುತ್ತಿರುವವರು ಬೆಳಕಿಗೆ ಬಂದು ಎದುರಿಸಲಿ - ರಾಘವೇಶ್ವರ ಶ್ರೀ.

ಮಠದ ವಿಷಯ ಮಾತ್ರ ಪ್ರಸ್ತಾಪವಾಗಿದೆ

ಮಠದ ವಿಷಯ ಮಾತ್ರ ಪ್ರಸ್ತಾಪವಾಗಿದೆ

ಉಚ್ಚ ನ್ಯಾಯಾಲಯದಲ್ಲಿ ದಾಖಲಾದ PIL ನಲ್ಲಿ ಎಲ್ಲಾ ಮಠಗಳನ್ನೂ ನಿಯಂತ್ರಿಸುವಂತೆ ಕೋರಲಾಗಿದೆ, ಅದೇ ದೂರು ಸರ್ಕಾರದ ಬಳಿ ಬರುತ್ತಿದ್ದಂತೆ ರಾಮಚಂದ್ರಾಪುರ ಮಠದ ವಿಷಯ ಮಾತ್ರ ಪ್ರಸ್ತಾಪವಾಗಿದೆ. ಇದನ್ನು ಗಮನಿಸಿದರೆ ಮಠದ ಮೇಲೆ ಆಕ್ರಮಣ ನಡೆಯುತ್ತಿರುವುದು ಸ್ಪಷ್ಟವಾಗುತ್ತದೆ ಎಂದ ಶ್ರೀಗಳು, ಪ್ರಪಂಚವೇ ಎದುರಾದರೂ ಮಠದ ಅಭಿಮಾನಿ ಬಳಗ ಒಟ್ಟಾಗಿ ಎದುರಿಸಲಿದೆ ಎಂದಿದ್ದಾರೆ.

ಸರಕಾರದ ನೋಟಿಸ್

ಸರಕಾರದ ನೋಟಿಸ್

ಮಠಕ್ಕೆ ಆಡಳಿತಾಧಿಕಾರಿ ಯಾಕೆ ನೇಮಿಸಬಾರದು, ವಿಚಾರಣೆಗೆ ಹಾಜರಾಗಿ ಎಂದು ಸರಕಾರದ ನೋಟೀಸಿಗೆ, ಮಠಕ್ಕೆ ಸಂಬಂಧ ಪಟ್ಟವರು ವಿಚಾರಣೆಗೆ ಹಾಜರಾಗುವ ಮುನ್ನವೇ ಸರಕಾರ ಆಡಳಿತಾಧಿಕಾರಿಯನ್ನು ನೇಮಿಸಲು ಸಜ್ಜಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government intention to take over Gokarna Mahabaleshwara temple, Hosanagara Ramachandrapura Math Raghaveshwara Seer statement.
Please Wait while comments are loading...