ಕೊಪ್ಪಳ : ರಾಯರ ಮಠದ ಪೂಜೆ ವಿವಾದ ಡಿ.10ಕ್ಕೆ ತೀರ್ಪು

By: ರವೀಂದ್ರ ಭಟ್
Subscribe to Oneindia Kannada

ಕೊಪ್ಪಳ, ಡಿಸೆಂಬರ್ 09 : ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿರುವ ನವಬೃಂದಾವನ ಗಡ್ಡೆಯಲ್ಲಿ ಪೂಜೆ ನಡೆಸುವ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಬುಧವಾರದಿಂದ ನವಬೃಂದಾವನ ಗಡ್ಡೆಯಲ್ಲಿ ಆರಾಧನೆ ಆರಂಭವಾಗಿದೆ.

ನವಬೃಂದಾವನ ಗಡ್ಡೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಉತ್ತರಾದಿಮಠದವರು ಗಂಗಾವತಿ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ಕೋರ್ಟ್ ತೀರ್ಪು ಕಾಯ್ದಿರಿಸಿದ್ದು, ಡಿಸೆಂಬರ್ 10ರ ಗುರುವಾರ ತೀರ್ಪು ಪ್ರಕಟಗೊಳ್ಳಲಿದೆ. [ಮಂತ್ರಾಲಯ ರಾಯರ ಮಠ ಹೊಸ ಉತ್ತರಾಧಿಕಾರಿ]

nava brindavan mutt

ಬಿಗುವಿನ ವಾತಾವರಣ : ನವಬೃಂದಾವನ ಗಡ್ಡೆಯಲ್ಲಿ ಬುಧವಾರದಿಂದ ರಾಯರ ಆರಾಧನೆ ಆರಂಭವಾಗಿದೆ. ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಗಳು ಇಂದು ಪೂಜೆ ಸಲ್ಲಿಸುವ ಮೂಲಕ ಆರಾಧನೆಗೆ ಚಾಲನೆ ನೀಡಿದ್ದಾರೆ. [ಮಂತ್ರಾಲಯ ಮಠದಲ್ಲಿ ಅತೃಪ್ತಿಯ ಕಿಡಿ, ರಾಘವೇಂದ್ರ!]

ಮಂತ್ರಾಲಯ ಮಠ ಮತ್ತು ಉತ್ತರಾದಿಮಠದ ನಡುವೆ ನವಬೃಂದಾವನ ಗಡ್ಡೆಯಲ್ಲಿ ಪೂಜೆ ಸಲ್ಲಿಸುವ ಕುರಿತು ಜಟಾಪಟಿ ನಡೆಯುತ್ತಿದೆ. ಇಂದು ಬೆಳಗ್ಗೆ ಆರಾಧನೆ ಆರಂಭವಾದ ಬಳಿಕ ಈ ಜಟಾಪಟಿ ಮುಂದುವರೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಬೆಳಗ್ಗೆ ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಗಳು ಪೂಜೆ ಸಲ್ಲಿಸಿದ್ದರಿಂದ ಅಸಮಾಧಾನಗೊಂಡ ಉತ್ತರಾದಿಮಠದವರು, ಸ್ಥಳದಿಂದ ಹೊರನಡೆದರು. ಬೆಳಗ್ಗೆಯಿಂದ ಪೂಜೆ ವಿಚಾರದಲ್ಲಿ ನಡೆದ ಸಂಧಾನ ಸಭೆ ವಿಫಲಗೊಂಡಿದೆ.

ಕೋರ್ಟ್‌ಗೆ ಅರ್ಜಿ : ನವಬೃಂದಾವನ ಗಡ್ಡೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಆರಾಧನೆ ಸಮಯದಲ್ಲಿ ಭದ್ರತೆ ನೀಡಬೇಕು ಎಂದು ಉತ್ತರಾದಿಮಠದವರು ಗಂಗಾವತಿ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಗುರುವಾರ ಹೊರಬೀಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Koppal : Gangavathi civil court on Wednesday reserved its order for December 10 in the issue of Nava Brindavan Mutt pooja issue. Aradhana Mahotsava begins on mutt on December 9, 2015.
Please Wait while comments are loading...