ಗದಗ ಉಚಿತ ವೈಫೈ ಪಡೆದ ಕರ್ನಾಟಕದ ಮೊದಲ ನಗರ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಗದಗ,ಮಾರ್ಚ್,16: ಸಾರ್ವಜನಿಕರಿಗೆ ಉಚಿತ ವೈಫೈ ಕಲ್ಪಿಸುವ ಯೋಜನೆಗೆ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಬುಧವಾರ ಚಾಲನೆ ನೀಡಿದ್ದು, ಈ ಮೂಲಕ ಗದಗ ಜಿಲ್ಲೆಯು ಅತ್ಯಾಧುನಿಕ ಸಂಪರ್ಕ ಸಂವಹನ ಹೊಂದಿದ ಪ್ರಥಮ ನಗರ ಎಂಬ ಹೆಮ್ಮೆ ದೊರೆತಿದೆ.

ಉಚಿತ ವೈಫೈ ಸೌಲಭ್ಯ ಯೋಜನೆಯನ್ನು ಗದಗದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದ ಕಾಗೋಡು ತಿಮ್ಮಪ್ಪ 'ತೀವ್ರಗತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ಸಂವಹನ ಸೌಲಭ್ಯ ಒದಗಿಸಬೇಕೆಂಬ ಕನಸು ಈಡೇರಿದಂತಾಗಿದೆ' ಎಂದರು.[ಉದ್ಯೋಗ ಸಿಗುವ ಭರವಸೆಯಲ್ಲಿ ಗದಗದ ಜನತೆ]

Gadag is the first WiFi city in Karnataka

ಜನತೆಗೆ ಉತ್ತಮ ಆಡಳಿತ, ಇ ಆಡಳಿತ ಸೌಲಭ್ಯಕ್ಕೆ ಪೂರಕ ಸಂವಹನ ಸೌಲಭ್ಯ, ತೀವ್ರಗತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ಸಂವಹನ ಪೂರೈಸುವ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಆಶಯ ಹಾಗೂ ಅದಕ್ಕೆ ಪೂರಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹಾಗೂ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರಣ್ಣ ಬಳಗಾನೂರ, ಆಯುಕ್ತ ವಿ.ಜಿ.ಸುಲಾಖೆ ಅವರುಗಳಿಗೆ ಅಭಿನಂದನೆ ಸಲ್ಲಿಸಿದರು.[ಚಿಕ್ಕಮಗಳೂರಿನ ನೂರು ಸ್ಥಳಗಳಲ್ಲಿ ವೈ ಫೈ ಹಾಟ್ ಸ್ಪಾಟ್]

ಪ್ರಥಮ ಹಂತದಲ್ಲಿ ಸ್ಥಾಪಿಸಬೇಕಾದ 25 ವೈಫೈ ಸೌಲಭ್ಯ ಒದಗಿಸುವ ನಗರಗಳು:

ದುರ್ಗಾವಿಹಾರ, ಕಾಟನ್ ಸೇಲ್ ಸೊಸೈಟಿ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದ ಸರಕಾರಿ ಹಾಸ್ಟೆಲ್ , ಹೆಲ್ತ ಕ್ಯಾಂಪ್ ದಲ್ಲಿ ಸೇಂಟ್ ಜಾನ್ಸ್ ಹೈಸ್ಕೂಲ್, ಬೆಟಗೇರಿ ಪೊಲೀಸ ಸ್ಟೇಶನ್, ಎಚ್.ಎಸ್.ಸಿ.ಲಾ ಕಾಲೇಜ್, ಕೆ.ಸಿಸಿ ಬ್ಯಾಂಕ್ ಹಾತಗಲೇರಿ ನಾಕಾ, ಹಳೆಯ ಬಸ್ ನಿಲ್ದಾಣ ಹಾಗೂ ಮುಳಗುಂದ ರಸ್ತೆಯ ಕೆ.ಎಚ್.ಬಿ. ಕಚೇರಿಗೆ ಹೀಗೆ 10 ಸ್ಥಳಗಳಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಪ್ರತಿಯೊಬ್ಬ ಬಳಕೆದಾರನಿಗೆ ಉಚಿತವಾಗಿ ಪ್ರತಿದಿನ 200 ಎಂಬಿ ಡಾಟಾ ಉಚಿತವಾಗಿ ಪಡೆಯುವ ವೈಫೈ ಸರ್ವೀಸ್ ಗೆ ಚಾಲನೆ ನೀಡಿದಂತಾಗಿದೆ.

ಇನ್ನುಳಿದ 15 ಸ್ಥಳಗಳಲ್ಲಿ ಈ ತಿಂಗಳಾಂತ್ಯದಲ್ಲಿ ವೈಫೈ ಸೌಲಭ್ಯ ಒದಗಿಸಲಾಗುತ್ತಿದ್ದು ಎಂದು ಧಾರವಾಡ ಡೆಲಿಕಾಂ ಮಾರ್ಕೆಟಿಂಗ್ ಡಿಜಿಎಂ ವಿಂ.ಎಂ. ಕನಕೇರಿ ತಿಳಿಸಿದರು. ಧಾರವಾಡ ಎ ಎಸ್. ಎನ್.ಎಲ್ ವೃತ್ತದ ಜಿ.ಎಂ. ವಿವೇಕ ಜೈಸ್ವಾಲ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gadag is the first city in Karnataka to be fully WiFi enabled. With WiFi facility in 25 locations across the city. This project inaugrated by Karnataka Legislative Assembly Speaker Kagodu Thimmappa in Gadag
Please Wait while comments are loading...