ಸೋಲಿನ ಭಯದಿಂದ ಸಕ್ಕರೆ ಹಂಚಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ: ಸಿದ್ದರಾಮಯ್ಯ ಹೇಳಿದ್ದೇನು.?

ಈ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಅನೈತಿಕ ಮಾರ್ಗದಲ್ಲಿ, ಒಬ್ಬೊಬ್ಬ ಶಾಸಕನಿಗೆ 25 ರಿಂದ 30 ಕೋಟಿ ಹಣ ಕೊಟ್ಟ ಖರೀದಿ ಮಾಡಿ, ಆಪರೇಷನ್‌ ಕಮಲದ ಮೂಲಕ ಸರ್ಕಾರ ರಚಿಸಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಬಾಗಲಕೋಟೆ,ಫೆಬ್ರವರಿ15: ಜನರಿಗೆ ಸಕ್ಕರೆ ಕೊಡಲು ನಿರಾಣಿ ಬಳಿ ದುಡ್ಡು ಬಂದಿರುವುದೇ ಕಬ್ಬು ಹಾಕುವ ರೈತರಿಗೆ ಮೋಸ ಮಾಡಿರುವುದರಿಂದ. ಸೋಲಿನ ಭಯದಿಂದ ಸಕ್ಕರೆ ಹಂಚಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಈ ಕುರಿತು ಬಾಗಲಕೋಟೆ ಜಿಲ್ಲೆ ಬೀಳಗಿಯ ನಡೆದ ಪ್ರಜಾಧ್ವನಿ ಯಾತ್ರೆಯ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು,ಇಲ್ಲಿನ ಮುಳುಗಡೆಪೀಡಿತ ಜನರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಿದ್ದಾರ? ಈ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಅನೈತಿಕ ಮಾರ್ಗದಲ್ಲಿ, ಒಬ್ಬೊಬ್ಬ ಶಾಸಕನಿಗೆ 25 ರಿಂದ 30 ಕೋಟಿ ಹಣ ಕೊಟ್ಟ ಖರೀದಿ ಮಾಡಿ, ಆಪರೇಷನ್‌ ಕಮಲದ ಮೂಲಕ ಸರ್ಕಾರ ರಚಿಸಿದ್ದಾರೆ ಎಂದು ಕಿಡಿಕಾರಿದರು.

ಚುನಾವಣೆಗೆ ಇನ್ನು ಎರಡು ತಿಂಗಳು ಬಾಕಿ ಇದೆ, ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಇನ್ನು ಒಂದು ತಿಂಗಳಷ್ಟೇ ಅವಕಾಶ ಇದೆ, ಅದಾದ ನಂತರ ಜನ ಅವರನ್ನು ಮನೆಗೆ ಕಳುಹಿಸಲು ಕಾಯುತ್ತಿದ್ದಾರೆ. ಮತದಾರರಿಗೆ ಸಕ್ಕರೆ ಕೊಡುತ್ತೇವೆ ಎಂದು ಆಮಿಷ ಒಡ್ಡಿ ಚುನಾವಣೆ ಗೆಲ್ಲಲು ತಯಾರಿ ಮಾಡುತ್ತಿರುವ ಇವರನ್ನು ಮನೆಗೆ ಕಳುಹಿಸದೆ ಬಿಟ್ಟರೆ ರಾಜ್ಯವನ್ನು ಲೂಡಿ ಮಾಡುತ್ತಾರೆ. ಅದಕ್ಕೆ ಈ ಸರ್ಕಾರವನ್ನು ಅಲಿಬಾಬಾ ಮತ್ತು 40 ಮಂದಿ ಕಳ್ಳರ ಕೂಟ ಎಂದು ಕರೆಯುವುದು. ಇವರಿಗೆ ಮಾನ ಮಾರ್ಯಾದಿ ಏನು ಇಲ್ಲ, ಲಜ್ಜೆಗೆಟ್ಟ ಜನರು. ಇವರು ಮತ್ತೆ ಅಧಿಕಾರಕ್ಕೆ ಬಂದರೆ ರೈತರು, ಅಲ್ಪಸಂಖ್ಯಾತರು, ಬಡವರು, ಮಹಿಳೆಯರು ಯಾರೂ ಉಳಿಯುವುದಿಲ್ಲ.

Former chief minister Siddaramaiah Outraged On BJP Government

ಬಿಜೆಪಿ ಸರ್ಕಾರ ಕಳೆದ 4 ವರ್ಷದಿಂದ ಒಂದೇ ಒಂದು ಹೊಸ ಮನೆ ಮಂಜೂರು ಮಾಡಿಕೊಟ್ಟಿಲ್ಲ. ನಾವು ಅಧಿಕಾರಕ್ಕೆ ಬಂದ ನಂತರ ದುರ್ಬಲ ಜನರಿಗೆ ಸೂರು ನೀಡುವ ಕೆಲಸ ಮಾಡುತ್ತೇವೆ. ಸೈಟ್‌ ಕೊಡುತ್ತೇವೆ. ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ ನಡ್ಡಾ ಯಾರೇ ಬಂದರೂ ಅವರ ಮಾತುಗಳಿಗೆ ಮರುಳಾಗದೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡುತ್ತೇನೆ.

Former chief minister Siddaramaiah Outraged On BJP Government

ಮಂಡ್ಯದಲ್ಲಿ ಸಚಿವ ಅಶ್ವತ್ಥ್‌ ನಾರಾಯಣ ಅವರು ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್‌ ರೀತಿ ಹೊಡೆದು ಹಾಕಬೇಕು ಎಂದು ಹೇಳಿದ್ದಾರೆ. ನೀವೆಲ್ಲ ನನ್ನನ್ನು ಹೊಡೆದುಹಾಕಲು ಬಿಡುತ್ತೀರ? ನಾನು ಟಿಪ್ಪು ಸುಲ್ತಾನ್‌, ಸಂಗೊಳ್ಳಿ ರಾಯಣ್ಣ, ಸಂತ ಸೇವಾಲಾಲ್‌, ಬಸವಣ್ಣ, ಕನಕದಾಸರು ಈ ಎಲ್ಲರನ್ನೂ ಗೌರವಿಸುತ್ತೇನೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಹೀಗೆ ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುತ್ತೇನೆ. ಎಲ್ಲ ಜನರನ್ನು ಪ್ರೀತಿ ಮಾಡುತ್ತೇನೆ. ಬಿಜೆಪಿಯವರು ಸಮಾಜದಲ್ಲಿ ದ್ವೇಷ ಹುಟ್ಟುಹಾಕುವವರು, ದಯವಿಟ್ಟು ಇಂಥಾ ಸ್ವಾರ್ಥಿಗಳಿಗೆ ನಿಮ್ಮ ಮತ ನೀಡಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+