Drumstick Price: ಚಿಕನ್‌ಗಿಂತಲೂ ನುಗ್ಗೆಕಾಯಿ ದುಬಾರಿ, ಕೆ.ಜಿ.ಗೆ 500-700 ರೂಪಾಯಿ!
ತರಕಾರಿಗಳ ದರ ಪೈಕಿ ನುಗ್ಗೆಕಾಯಿ ಬೆಲೆ ಸಾಮಾನ್ಯವಾಗಿ ಕಡಿಮೆಯೇ ಇರುತಿತ್ತು. ಆದರೆ, ಇತ್ತೀಚೆಗೆ ನುಗ್ಗೆಕಾಯಿ ಚಿಕನ್ ಹಾಗೂ ಮಟನ್‌ಗಿಂತಲೂ ದುಬಾರಿಯಾಗುವ ಮೂಲಕ ಜನಸಾಮಾನ್ಯರ ನಿದ್ದೆಗೆಡಿಸಿದೆ. ಇದರಿಂದ ಗ್ರಾಹಕರು "ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ" ಎನುತ್ತಿದ್ದಾರೆ. ಸದ್ಯ ತರಕಾರಿ ಮಾರುಕಟ್ಟೆಗಳಲ್ಲಿ ನುಗ್ಗೆಕಾಯಿಗೆ ಭಾರೀ ಡಿಮ್ಯಾಂಡ್ ಹೆಚ್ಚಾಗಿದ್ದು, ಬೆಲೆ ಕೆ.ಜಿ.ಗೆ 500 ರೂಪಾಯಿಯಿಂದ 700 ರೂಪಾಯಿವರೆಗೆ ಇದೆ ಎಂದು ತಿಳಿದುಬಂದಿದೆ. ಈ ದಿಢೀರ್ ಬೆಲೆ ಏರಿಕೆಗೆ ಅಸಲಿ ಕಾರಣವೇನು ಎಂದು ತರಕಾರಿ ವ್ಯಾಪಾರಿಗಳು ಹೇಳಿದ್ದಾರೆ.
ಉಳಿದ ತರಕಾರಿ ಬೆಲೆಗಳು ಕಡಿಮೆಯೇ ಇದೆ. ಆದರೆ ಚಳಿಗಾಲ ಆದ ಕಾರಣ ನುಗ್ಗೆಕಾಯಿಗೆ ಸ್ವಲ್ಪ ಬೇಡಿಕೆ ಇರುತ್ತದೆ. ಆದರೆ ಈ ಬಾರಿ ದರಗಳು ಏರಿಕೆ ಕಂಡಿವೆ. ಕಳೆದ ಮೂರು ದಿನಗಳಿಂದ ನುಗ್ಗೆಕಾಯಿ ದರವು ಏರುತ್ತಿದೆ. ಆರಂಭಿಕ ಬೆಲೆಯೇ ಕೆ.ಜಿ.ಗೆ 500 ರೂಪಾಯಿ ಇದೆ. ರೈತರೇ ನಮಗೆ 400 ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಹೀಗಾಗಿ ನಾವು ಲಾಭ ಇಟ್ಟುಕೊಂಡು ಈ ದರಕ್ಕೆ ಮಾರಲೇಬೇಕಾಗಿದೆ ಎಂದು ತರಕಾರಿ ವ್ಯಾಪಾರಿಗಳು ವಿವರಿಸಿದ್ದಾರೆ.

ನುಗ್ಗೆಕಾಯಿಯನ್ನು ಬೇರೆ ತರಕಾರಿಯಂತೆ ಎಲ್ಲೆಡೆ ರೈತರು ಬೆಳೆಯುವುದಿಲ್ಲ. ಕೆಲವೆಡೆ ಮಾತ್ರವೇ ಇದನ್ನು ಬೆಳೆಯುವುದರಿಂದ ದರಗಳು ಏರುತ್ತವೆ. ಚಳಿಗಾಲದಲ್ಲಿ ಇದರ ಇಳುವರಿಯೂ ಕಡಿಮೆ. ಇದರಿಂದಾಗಿ ರಾಜ್ಯದಲ್ಲಿ ನುಗ್ಗೆಕಾಯಿ ಬೆಲೆ ಗಗನಕ್ಕೇರಿದೆ. ಒಂದು ಕೆ.ಜಿ. ನುಗ್ಗೆಕಾಯಿ ಬೆಲೆ ಮಟನ್ ಬೆಲೆಗೆ ಸರಿಸಮನಾಗಿದೆ. ಈ ಹಿಂದೆ ಕೆ.ಜಿಗೆ ಹೆಚ್ಚೆಂದರೆ 150-200 ರೂಪಾಯಿ ಮಾತ್ರ ಇರುತ್ತಿತ್ತು.
ಇಳುವರಿ ಕಡಿಮೆ
ಈಗ ನುಗ್ಗೆಕಾಯಿ ಈಗ 500-700 ರೂಪಾಯಿಗೆ ತಲುಪಿದೆ. ತಮಿಳುನಾಡಿನಲ್ಲಿ ಬೆಳೆ ತಡವಾಗಿರುವುದು ಮತ್ತು ಇತ್ತೀಚಿನ ಚಂಡಮಾರುತದ ಪರಿಣಾಮದಿಂದ ನುಗ್ಗೆಕಾಯಿ ಪೂರೈಕೆ ಕಡಿಮೆಯಾಗಿರುವುದು ದರ ಏರಿಕೆ ಪ್ರಮುಖ ಕಾರಣ ಎನ್ನಲಾಗಿದೆ. ನುಗ್ಗೆಕಾಯಿ ದುಬಾರಿಯಾಗಿರುವುದರಿಂದ ಕೆಲ ಮಾರಾಟಗಾರರು ಇದನ್ನು ತಂದು ಮಾರಾಟ ದುಬಾರಿ ದರಕ್ಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಎರಡು ನುಗ್ಗೇಕಾಯಿ ಬೆಲೆಯೇ 100 ರೂಪಾಯಿ ತಲುಪಿದೆ. ಈ ಹಿಂದೆ ಟೊಮೊಟೋ, ಈರುಳ್ಳಿ ದರಗಳು ಹೆಚ್ಚಾಗಿ ಬೆಲೆ ಏರಿಕೆ ಸಾಲಿನಲ್ಲಿರುತ್ತಿದ್ದವು. ಆದರೆ ಈಗ ನುಗ್ಗೆಕಾಯಿ ದರ ನೋಡಿ ಜನ ಹೆದರುವಂತಾಗಿದೆ. ಪ್ರತಿದಿನವೂ ಸುಮಾರು 100 ಟನ್ ನುಗ್ಗೆಕಾಯಿ ಮಾರುಕಟ್ಟೆಗಳಿಗೆ ಪೂರೈಕೆ ಆಗುತ್ತಿತ್ತು. ಆದರೆ ಇತ್ತೀಚಿನ ಹವಾಮಾನ ವೈಪರೀತ್ಯದಿಂದ ನುಗ್ಗೆಕಾಯಿ ಬೆಳೆ ಭಾರೀ ಹೊಡೆತ ತಿಂದಿದೆ. ಇದರಿಂದ ಮಾರುಕಟ್ಟೆಗಳಿಗೆ ನುಗ್ಗೆಕಾಯಿ ಪೂರೈಕೆ ಕಡಿಮೆಯಾಗಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications