ಬೆಂಗಳೂರು ಜನತೆಗೆ ಗುಡ್ ನ್ಯೂಸ್ ನೀಡಿದ ಡಿ ಕೆ ಶಿವಕುಮಾರ್
ಮಂಡ್ಯ, ಸೆಪ್ಟೆಂಬರ್ 24: ಬೆಂಗಳೂರಿನ ಜನರಿಗೆ ನಿತ್ಯ ಶುದ್ಧ ಕುಡಿಯುವ ನೀರೊದಗಿಸುವುದೇ ನನ್ನ ಮುಂದಿನ ದಿಟ್ಟ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ಕಾವೇರಿ 6ನೇ ಹಂತದ ಯೋಜನೆಯನ್ನು ಪ್ರಾರಂಭಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ತಾಲೂಕಿನ ತೊರೆಕಾಡನಹಳ್ಳಿ ಗ್ರಾಮದಲ್ಲಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಭೇಟಿ ನೀಡಿ ಅಲ್ಲಿನ ಕಾಮಗಾರಿಗಳನ್ನು ವೀಕ್ಷಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದಲ್ಲಿ ನಗರವೊಂದರ 50 ಲಕ್ಷ ಜನರಿಗೆ ಹೊಸದಾಗಿ ಕುಡಿಯುವ ನೀರಿನ ಯೋಜನೆ ಐದೂವರೆ ಸಾವಿರ ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಿದೆ. ಈ ಯೋಜನೆಯ ಕಾಮಗಾರಿಯನ್ನು ಕಾಂಗ್ರೆಸ್ ಸರ್ಕಾರವೇ ಪ್ರಾರಂಭ ಮಾಡಿತ್ತು. ಎಂಟು ದಿನಗಳ ಕೆಲಸದ ನಂತರ ಉದ್ಘಾಟನೆ ಕಾಂಗ್ರೆಸ್ ಸರ್ಕಾರವೇ ಸಿದ್ಧವಾಗಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಇಲ್ಲಿ ಏನೇನು ಸಮಸ್ಯೆ ಇದೆ ಎಂದು ನಾನೇ ಕಣ್ಣಾರೆ ನೋಡಬೇಕು ಎಂಬ ಕಾರಣದಿಂದ ಬಂದಿದ್ದೇನೆ. ಈ ಯೋಜನೆಯಿಂದಾಗಿ ಬೆಂಗಳೂರಿನ 50ಲಕ್ಷ ಮಂದಿಗೆ ಉಪಯೋಗವಾಗಲಿದೆ. 5,500 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. 4,500 ಕೋಟಿ ರೂ. ಕುಡಿಯುವ ಕುಡಿಯುವ ನೀರಿನ ಯೋಜನೆಗೆ ವೆಚ್ಚವಾಲಿದ್ದು, ಒಂದು ಸಾವಿರ ಕೋಟಿ ರೂ. ಡ್ರೈನೇಜ್ ವ್ಯವಸ್ಥೆಗೆ ಸಂಬಂಧಿಸಿದಂತೆ ವೆಚ್ಚವಾಗುತ್ತದೆ ಎಂದರು.
110 ಕಿ.ಮೀ. ಉದ್ದಕ್ಕೆ 1,45,000 ಮೆಗಾ ಟನ್ ಸ್ಟೀಲ್ ಪೈಪ್‌ಗಳನ್ನು ಬಳಸಲಾಗಿದೆ. ಹಿಂದಿನ ನಾಲ್ಕು ಹಂತಗಳಲ್ಲಿ 1,450 ಎಂ.ಎಲ್.ಡಿ. ನೀರನ್ನು ಬೆಂಗಳೂರು ನಗರಕ್ಕೆ ಪೂರೈಸಲಾಗುತ್ತಿತ್ತು. ಈಗ 5ನೇ ಹಂತದ ಯೋಜನೆಯಲ್ಲಿ 750 ಎಂ.ಎಲ್.ಡಿ. ನೀರನ್ನು ಪೂರೈಸಲಾಗುತ್ತದೆ. ಇದು ಭಾರತದಲ್ಲೇ ಕುಡಿಯುವ ನೀರಿನ ದೊಡ್ಡ ಯೋಜನೆಯಾಗಿದೆ ಎಂದು ವಿವರಿಸಿದರು.
ಕಾವೇರಿ 5ಏ ಹಂತದ ಯೋಜನೆ ಜಾರಿಯಾದ ನಂತರ ಬೆಂಗಳೂರಿನಲ್ಲಿ ನಾಲ್ಕು ಲಕ್ಷ ಹೊಸ ಕುಡಿಯುವ ನೀರಿನ ಸಂಪರ್ಕಗಳನ್ನು ನೀಡಲು ವ್ಯವಸ್ಥೆ ಮಾಡಬೇಕಾಗಿದೆ. ಬೆಂಗಳೂರಿನ ಜನರಿಗೆ ಸಂಪೂರ್ಣ ನೀರು ಕೊಡುವುದೇ ನನ್ನ ಮೊದಲ ಆಧ್ಯತೆಯಾಗಿದೆ ಎಂದರು. ಈ ಯೋಜನೆ ಶೀಘ್ರ ಪೂರ್ಣಗೊಳಿಸಿ ವಿಜಯದಶಮಿ ದಿನದಂದೇ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸಲು ಸಿದ್ಧತೆ ಮಾಡುತ್ತಿದ್ದೇವೆ. ಅಲ್ಲಿಯವರೆಗೂ ಕಾಮಗಾರಿಯ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಕಾವೇರಿಗೆ ವಿಶೇಷ ರೂಪ
ಗಾಂಗಾರತಿ ಮಾಧರಿಯಲ್ಲೇ ಕಾವೇರಿ ಆರತಿ ಮಾಡಲು ನಮ್ಮ ನಿಯೋಗ ಅಲ್ಲಿಗೆ ಹೋಗಿ ಬಂದಿದೆ. ಮುಂದಿನ ದಿನಗಳಲ್ಲಿ ಕಾವೇರಿಗೆ ಹೊಸ ರೂಪ ಕೊಡಲಾಗುವುದು. ನಾಲ್ಕು ಇಲಾಖೆಗಳು ಸೇರಿಕೊಂಡು ಈ ಕಾರ್ಯಕ್ರಮ ರೂಪಿಸಿದ್ದೇವೆ. ಕಾಟಾಚಾರಕ್ಕೆ ಕಾವೇರಿ ಆರತಿ ಮಾಡಲ್ಲ. ಕೆ.ಆರ್.ಎಸ್. ಉದ್ಯಾನವನವನ್ನು ಮೇಲ್ದರ್ಜೆರಿಸಬೇಕಿದೆ. ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ ಎಂದು ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದರು.
ಸ್ವಾಮೀಜಿಗಳು ಹೇಳಬಹುದು. ಧಾರ್ಮಿಕ ದತ್ತಿ ಇಲಾಖೆ ಸಹ ಸರ್ಕಾರದ ಒಂದು ಭಾಗ. ಮೊದಲಿನಿಂದಲೂ ಒಂದು ಸಂಪ್ರದಾಯ ಇದೆ. ಖಾಸಗೀ ದೇವಸ್ತಾನದಲ್ಲಿ ಮಾಡಿಕೊಳ್ಳಲಿ, ಪ್ರಸಾದ ಬಂದರೆ ತಿನ್ನುತ್ತೇನೆ. ಅದು ದೇವರ ಪ್ರಸಾದ ಅಂತಾನೇ ಭಾವಿಸಿ ಸ್ವೀಕಾರ ಮಾಡಬೇಕು ಅಷ್ಟೇ ಎಂದು ಪ್ರಸಾದ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದರು.
ಎತ್ತಿನ ಹೊಳೆ ಯೋಜನೆ ಆಗುವುದಿಲ್ಲ ಎಂದಿದ್ದರು. ಆದಕ್ಕೂ ಚಾಲನೆ ಕೊಡಲಾಗಿದೆ. ಟಿಬಿ ಡ್ಯಾಂನ ಕ್ರಸ್ಟ್ ಗೇಟ್ ಕೂಡ ಅಲ್ಪಾವಧಿಯಲ್ಲೇ ದುರಸ್ಥಿಯಾಗಿದೆ. ನಿನ್ನೆ ಸಿಎಂ ಮತ್ತು ನಾನು ಎಲ್ಲರೂ ಸೇರಿ ಬಾಗೀನ ಅರ್ಪಿಸಿದ್ದೇವೆ ಎಂದು ಉದಾಹರಣೆ ಸಮೇತ ವಿವರಿಸಿದರು. ಇನ್ನೂ ಈ ವೇಳೆ ಮಾಜಿ ಸಚಿವರಾದ ಎಸ್.ಟಿ. ಸೋಮಶೇಖರ್, ಪಿ.ಎಂ. ನರೇಂದ್ರಸ್ವಾಮಿ, ಪರಿಷತ್ ಸದಸ್ಯ ಎಸ್. ರವಿ ಇತರರು ಇದ್ದರು.












Click it and Unblock the Notifications