ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ ಮುಂದೂಡಿದ್ದು ಏಕೆ; ದಿನೇಶ್ ಗುಂಡೂರಾವ್

|
Google Oneindia Kannada News

Recommended Video

‘ಉಪ ಚುನಾವಣೆಗೆ ಬಿಜೆಪಿ ಸದಾ ಸಿದ್ಧ’

ಬೆಂಗಳೂರು, ಸೆಪ್ಟೆಂಬರ್ 27 : "ಯಾವುದೇ ಸಕಾರಣಗಳಿಲ್ಲದೇ ಉಪ ಚುನಾವಣೆ ಮುಂದೂಡಿರುವುದು ಸರಿಯಲ್ಲ. ಚುನಾವಣೆ ಮುಂದೂಡುವುದಕ್ಕೆ ಕಾರಣ ಹೇಳಿ, ನಮ್ಮ ಸಂಶಯ ಬಗೆಹರಿಸಿ" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, "ಸುಪ್ರೀಂಕೋರ್ಟ್ ತಡೆ ನೀಡದೇ ಚುನಾವಣೆ ಮುಂದೂಡಿದ್ದು ಏಕೆ?. ನಾಮಪತ್ರ ಸಲ್ಲಿಕೆ ಮಾಡಿದವರ ಪರಿಸ್ಥಿತಿ ಏನು?, ಚುನಾವಣಾ ಆಯೋಗ ಒಂದು ಪಕ್ಷದ ಸಂಸ್ಥೆ ಅನ್ನೋ ರೀತಿ ವರ್ತನೆ ಮಾಡುತ್ತಿರುವುದು ಸರಿಯಲ್ಲ" ಎಂದರು.

ಚುನಾವಣೆಗೆ ಮಾಡಿದ ಸಿದ್ಧತೆಯೆಲ್ಲ ಈಗ ನೀರಲ್ಲಿ ಮಾಡಿದ ಹೋಮಚುನಾವಣೆಗೆ ಮಾಡಿದ ಸಿದ್ಧತೆಯೆಲ್ಲ ಈಗ ನೀರಲ್ಲಿ ಮಾಡಿದ ಹೋಮ

"ಚುನಾವಣಾ ಮುಂದೂಡುವುದಕ್ಕೆ ನಮಗೆ ಯಾವುದೇ ಆಕ್ಷೇಪವಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ. ಯಾರಿಗೋ ಸಹಾಯ ಮಾಡಲು ಚುನಾವಣಾ ಆಯೋಗ ಈ ರೀತಿ ವರ್ತನೆ ಮಾಡಿದೆ. ಅತ್ಯಂತ ಸೂಕ್ಷ್ಮ ಕಾರಣಗಳಿಲ್ಲದೇ ಚುನಾವಣೆ ಮುಂದೂಡಲು ಸಾಧ್ಯವಿಲ್ಲ. ಹೀಗಾಗಿ ಆಯೋಗದ ಮೇಲೆ ಸಂಶಯ ಬರುತ್ತಿದೆ" ಎಂದು ತಿಳಿಸಿದರು.

ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆ; ಯಾರು, ಏನು ಹೇಳಿದರು?ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆ; ಯಾರು, ಏನು ಹೇಳಿದರು?

Dinesh Gundu Rao On Supreme Court Stay For By Election

"ನಮ್ಮ ವಕೀಲರು ಬಹಳ ಮಹತ್ವದ ವಿಚಾರಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದ್ದಾರೆ. ಶಾಸಕರು ಅಧಿಕಾರ ಮತ್ತು ಹಣಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಜನತಾ ನ್ಯಾಯಲಯದ ಮುಂದೆ ಇವರು ಅನರ್ಹರೇ" ಎಂದು ದಿನೇಶ್ ಗುಂಡೂರಾವ್ ಹೇಳಿದರು.

15 ಕ್ಷೇತ್ರಗಳ ಉಪಚುನಾವಣೆಗೆ ತಡೆ ನೀಡಿದ ಸುಪ್ರೀಂಕೋರ್ಟ್‌15 ಕ್ಷೇತ್ರಗಳ ಉಪಚುನಾವಣೆಗೆ ತಡೆ ನೀಡಿದ ಸುಪ್ರೀಂಕೋರ್ಟ್‌

"ಅನರ್ಹ ಶಾಸಕರು ಬಿಜೆಪಿ ಟ್ರ್ಯಾಪ್‌ಗೆ ಒಳಗಾಗಿದ್ದಾರೆ. ಇವರಿಂದ ಬಿಜೆಪಿಗೆ ಅನುಕೂಲವಾಗಿದೆ ಬಿಟ್ಟರೆ ಇವರಿಗೆ ಏನು ಲಾಭವಾಗಿಲ್ಲ. ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರೇ ಇವರು ದಾರಿದ್ರ್ಯರು ಎಂದು ಹೇಳಿದ್ದಾರೆ" ಎಂದು ದಿನೇಶ್‌ ಗುಂಡೂರಾವ್ ತಿಳಿಸಿದರು.

15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಸುಪ್ರೀಂಕೋರ್ಟ್ ಗುರುವಾರ ತಡೆ ನೀಡಿದೆ. ಚುನಾವಣಾ ಆಯೋಗ ಪ್ರಕಟಿಸಿದ್ದ ವೇಳಾಪಟ್ಟಿ ಪ್ರಕಾರ ಅಕ್ಟೋಬರ್ 21ರಂದು ಶಾಸಕರು ಅನರ್ಹರಾಗಿರುವ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಕ್ಕೆ ಮತದಾನ ನಡೆಯಬೇಕಿತ್ತು.

English summary
Why supreme court of India issued stay for Karnataka's 15 seat by election asked KPCC president Dinesh Gundu Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X